ಸುಂಟಿಕೊಪ್ಪ, ಮಾ. 31 : ರಾಜ್ಯ ಸರಕಾರದ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಪಡಿತರದಾರರಿಗೆ ವಿತರಿಸಲಾಗುತ್ತಿರುವ ಉಪ್ಪು ರಸ್ತೆ ಬದಿಯಲ್ಲಿ ಎಸೆದಿರುವದು ಗೋಚರಿಸಿದೆ.ಸುಂಟಿಕೊಪ್ಪ ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾವತಿ ಅವರು ಕಾರ್ಯನಿಮಿತ ಸುಂಟಿಕೊಪ್ಪ ಪಟ್ಟಣಕ್ಕೆ ತೆರಳುವ ಸಂದರ್ಭ ಗದ್ದೆಹಳ್ಳದಿಂದ ಚೆಟ್ಟಳ್ಳಿಗೆ ತೆರಳುವ ನಾರ್ಗಾಣೆ ಗ್ರಾಮದ ರಸ್ತೆ ಬದಿಯಲ್ಲಿ 50 ಕೆಜಿಗೂ ಅಧಿಕ ಉಪ್ಪು ಬಿದ್ದಿರುವದನ್ನು ಮನಗಂಡು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಸರಕಾರದಿದಂದ ವಿತರಿಸಲಾಗುವ ಅನ್ನಭಾಗ್ಯದ ಉಪ್ಪು ಆಹಾರಕ್ಕೆ ಬಳಸುವ ಸಂದರ್ಭ ನೀಲಿ ಬಣ್ಣಕ್ಕೆ ಮರಳುತ್ತಿದ್ದು, ಇದರಿಂದ ಪಡಿತರದಾರರು ಭಯಬೀತರಾಗಿ ಅದನ್ನು ಬಳಸದೆ ರಸ್ತೆ ಬದಿಯಲ್ಲಿ ಬಿಸಾಕಿರುವದು ಸಂಶಯಕ್ಕೆ ಎಡೆಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತರಾಗಿ ಜನರಲ್ಲಿ ಜಾಗೃತಿ ಮೂಡಿಸಿ ಸರಕಾರದ ಹಣ ಪೋಲಾಗದಂತೆ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.