ಮಡಿಕೇರಿ, ಮಾ. 31: ನಗರದ ಶ್ರೀ ಮುತ್ತಪ್ಪ ದೇವಾಲಯ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ಮುತ್ತಪ್ಪ ಜಾತ್ರೆ ಹಾಗೂ ದೈವಕೋಲಗಳು ಶ್ರದ್ಧಾ ಭಕ್ತಿಯಿಂದ ಜರುಗಿತು.ಇಂದು ಸಂಜೆ ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಶ್ರೀ ಮುತ್ತಪ್ಪ ದೇವರ ಕಲಶ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಕಡಗದಾಳು ಮತ್ತು ನೀರುಕೊಲ್ಲಿಯಿಂದ ಬಂದ ಶ್ರೀ ಮುತ್ತಪ್ಪ ದೇವರ ಕಲಶದೊಂದಿಗೆ ಮಹಿಳೆಯರು, ಮಕ್ಕಳ ತಾಲಾಪೊಲಿ, ಚೆಂಡೆ ವಾದ್ಯ, ಆಕರ್ಷಕ ಕಲಾತಂಡಗಳು ಪಾಲ್ಗೊಂಡಿದ್ದವು.ಸಂಜೆ ದೇವಾಲಯದಲ್ಲಿ ಮುತ್ತಪ್ಪ ದೇವರ ಮರೆ ಇಳಿಸಿ, ಶಾಸ್ತಾಪ್ಪ ಮುತ್ತಪ್ಪ ವೆಳ್ಳಾಟಂ, ವಿಷ್ಣು ಮೂರ್ತಿ ವೆಳ್ಳಾಟಂ, ಅಗ್ನಿ ಸ್ಪರ್ಶ, ರಾತ್ರಿ ಪೊವ್ವಾದಿ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ, ಶವಿಭೂತ ತೆರೆ, ಕುಟ್ಟಿಚಾತನ್ ದೇವರ ತೆರೆ, ಬೆಳಗಿನ ಜಾವ ಮುತ್ತಪ್ಪ ಮತ್ತು ತಿರುವಪ್ಪ ತೆರೆ, ವಿಷ್ಣುಮೂರ್ತಿ ಮೇಲೇರಿ ಜರುಗಿತು.