ನಾಪೋಕ್ಲು, ಏ. 1: ಇಲ್ಲಿಗೆ ಸಮೀಪದ ಕಿರುಂದಾಡು ಗ್ರಾಮದ ಶ್ರೀಭಗವತಿ ಅನ್ನಪೂರ್ಣೇಶ್ವರಿ ದೇವಾಲಯದ ಅನ್ನಪೂರ್ಣೇಶ್ವರಿ, ಗಣಪತಿ ಮತ್ತು ಅಯ್ಯಪ್ಪ ದೇವರುಗಳ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ ಮಾ.28 ರಿಂದ ನೀಲೇಶ್ವರ ದಾಮೋದರ ತಂತ್ರಿ ಅವರ ನೇತೃತ್ವದಲ್ಲಿ ಪ್ರತಿದಿನ ವಿಶೇಷ ಹೋಮ, ಹವನ, ಅಭಿಷೇಕ, ದೀಪಾರಾಧನೆ, ಮಹಾಪೂಜೆಗಳು ಜರುಗುತ್ತಿದ್ದು, ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಇಂದು ದೇವಾಲಯದಲ್ಲಿ ಅಭಿಷೇಕ, ಗಣಪತಿ ಹೋಮ ಇತರ ಪೂಜಾ ಕಾರ್ಯಗಳು ಜರುಗಿದರೆ, ದೇವಾಲಯದ ಸಮೀಪವಿರುವ ಅಯ್ಯಪ್ಪ ಬನದಲ್ಲಿ ವಿಶೇಷ ಪೂಜಾ ಕಾರ್ಯಗಳು ನೆರವೇರಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಮಾಜಿ ಜಿ.ಪಂ. ಉಪಾಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ಚಂಗಂಡ ಸೂರಜ್, ಬೊಳ್ಳಚೆಟ್ಟೀರ ಪ್ರಕಾಶ್, ಅಪ್ಪನೆರವಂಡ ರಾಜ ಇನ್ನಿತರರು ಆಗಮಿಸಿದ್ದು, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಚೆರುಮಂದಂಡ ಸುರೇಶ್, ಕಾರ್ಯದರ್ಶಿ ಕುಂಬಂಡ. ಪೆಮ್ಮಯ್ಯ, ತಕ್ಕ ಮುಖ್ಯಸ್ಥ ಪಳಗಂಡ. ಚಾಮಯ್ಯ, ಬÁದುಮಂಡ ಮುತ್ತಪ್ಪ, ಊರಿನ ಪ್ರಮುಖರು ಉಪಸ್ಥಿತರಿದ್ದರು.

ತಾ. 2 ರಂದು (ಇಂದು) ದೇವಾಲಯದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಅಂಗವಾಗಿ ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ಪ್ರಸಾದ ಪ್ರತಿಷ್ಠೆ ಹಾಗೂ 9.45ಕ್ಕೆ ದೇವಪ್ರತಿಷ್ಠೆ, ಜೀವ ಕಲಶಾಭಿಷೇಕ, ಮಹಾಪೂಜೆ, ಪರಿವಾರ ಬ್ರಹ್ಮಕಲಶಾಭಿಷೇಕ, ಪ್ರತಿಷ್ಠೆ ಬಲಿ, ಮಹಾಪೂಜೆ, ಬಲಿ ಉತ್ಸವ ಮತ್ತು ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 4 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಮಂಗಳೂರಿನ ಮರಕಡ ಶ್ರೀಗುರು ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ಅವರು ಭಕ್ತಾದಿಗಳಿಗೆ ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಶಾಸಕ ಕೆ.ಜಿ. ಬೋಪಯ್ಯ, ಕೇಶವ ಪ್ರಸಾದ್ ಮುಳಿಯ, ಬೆಂಗಳೂರಿನ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ಹರೀಶ್ ಬೋಪಣ್ಣ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.