ವೀರಾಜಪೇಟೆ, ಏ. 1: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ 2ನೇ ವರ್ಷದ ಜಿಲ್ಲಾಮಟ್ಟದ ನೈನ್ ಕ್ರಿಕೆಟ್ ಪಂದ್ಯಾವಳಿಯನ್ನು ತಾ. 7 ರಿಂದ 9 ರವರೆಗೆ ಕೆದಮುಳ್ಳೂರು ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಪಂದ್ಯಾವಳಿ ಮುಖ್ಯಸ್ಥ ಕರೋಟಿರ ಗುರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡಗಳಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಪ್ರಥಮ ಬಹುಮಾನ ರೂ. 22,222 ದ್ವಿತೀಯ ಬಹುಮಾನ ರೂ. 12,222 ನಗದು ಹಾಗೂ ಟ್ರೋಫಿ ನೀಡಲಾಗುವದು. ಪ್ರತಿ ಪಂದ್ಯ 5 ಓವರ್‍ಗೆ ಸೀಮಿತಗೊಂಡಿರುತ್ತದೆ. ಉತ್ತಮ ಬ್ಯಾಟ್ಸ್‍ಮ್ಯಾನ್, ಬೆಸ್ಟ್ ಬೌಲರ್ ಪ್ರಶಸ್ತಿ ನೀಡಲಾಗುವದು. ಹೆಚ್ಚಿನ ಮಾಹಿತಿಗಾಗಿ 9482246941 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ಚೆನಿಯಪಂಡ ಲಿತನ್, ಕರೋಟಿರ ಮಧು, ಎಂ.ಎಂ. ಪರಮೇಶ್ವರ್ ಉಪಸ್ಥಿತರಿದ್ದರು.