ಕೂಡಿಗೆ, ಏ. 1: ಐತಿಹಾಸಿಕ ಕಣಿವೆ ಕಾವೇರಿ ನದಿ ದಂಡೆಯಲ್ಲಿರುವ ಶ್ರೀರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ತಾ. 5 ರಂದು ನಡೆಯಲಿದ್ದು, ಇದರ ಅಂಗವಾಗಿ ತಾ. 3 ರಿಂದ 9 ರ ವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ನಡೆಯಲಿವೆ.

ತಾ. 3 ರಂದು ಬೆಳಿಗ್ಗೆ 7 ಗಂಟೆಯಿಂದ ದೇವಾನಾಂದಿ, ಅಂಕುರಾರ್ಪಣ, ರಕ್ಷಾಬಂಧ, ಧ್ವಜಾರೋಹಣ, ನವಗ್ರಹ ಸ್ಥಾಪನೆ, ಜಪ, ಅಭಿಷೇಕ, ಪುಣ್ಯಾಹವಾಚನ, ಗಣಪತಿ ಹೋಮ, ದೇವತಾಹ್ವಾನ, ಮಹಾಪೂಜೆ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.

ಸಂಜೆ 6 ಗಂಟೆಯಿಂದ ಸಂಧ್ಯಾಪೂಜೆ, ಪ್ರಸಾದ ವಿನಿಯೋಗ, ರುದ್ರಪೂಜೆ ಕ್ರಮಾರ್ಚನೆ, ಮಹಾಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.

ತಾ. 4 ರಂದು ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ನವಗ್ರಹ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಪೂರ್ಣಾಹುತಿ, ಮಹಾಪೂಜೆ, ನಡೆಯಲಿದೆ. ಸಂಜೆ 7 ಗಂಟೆಗೆ ಸೀತಾ ಕಲ್ಯಾಣೋತ್ಸವ, ಮಹಾಪೂಜೆ ನಡೆಯಲಿದೆ.

ತಾ. 5 ರಂದು ರಥೋತ್ಸವದಂದು ಪವಿತ್ರ ಗಂಗೋದಕದಿಂದ ಶ್ರೀ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ ನಂತರ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1.30 ರಿಂದ 2.28ರ ಅಭಿಜಿನ್ ಮೂಹೂರ್ತದಲ್ಲಿ ವೇ.ಬ್ರ. ನರಹರಿಶರ್ಮಾ ಅವರ ನೇತೃತ್ವದಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ರಥಾರೋಹಣ, ಬ್ರಹ್ಮರಥೋತ್ಸವವು ನಡೆಯಲಿದೆ. ರಥೋತ್ಸವಕ್ಕೆ ಆಗಮಿಸುವ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿವೆ.

ರಥೋತ್ಸವದ ಅಂಗವಾಗಿ ಪ್ರತಿದಿನ ಸಂಜೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ದೇವಾಲಯದ ಆವರಣದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಉತ್ಸವ ಮೆರವಣಿಗೆ, ಆಂಜನೇಯೋತ್ಸವ ಮೆರವಣಿಗೆ, ಉಯ್ಯಾಲೋತ್ಸವ ಸೇರಿದಂತೆ ಆಕರ್ಷಕ ಮದ್ದುಗುಂಡು ಪ್ರದರ್ಶನ, ತೆಪ್ಪೋತ್ಸವ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ದಿನಂಪ್ರತಿ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ತಾ. 5 ರಂದು ಸುಧಾ ಬರಗೂರು, ಮಿಮಿಕ್ರಿ ರಮೇಶ್‍ಬಾಬು, ಮ್ಯಾಜಿಕ್ ಬದ್ರಿನಾಥ್ ತಂಡದಿಂದ ನಗೆಹಬ್ಬ ಕಾರ್ಯಕ್ರಮ ನಡೆಯಲಿವೆ. ಕುಶಾಲನಗರ ನಾದಂತ ನಾಟ್ಯ ಮಯೂರಿ ನೃತ್ಯಾಲಯದಿಂದ ಸಾಂಸ್ಕøತಿಕ ನೃತ್ಯ ವೈವಿಧ್ಯ ಕಾರ್ಯಕ್ರಮ, ಬಸವೇಶ್ವರ ಕಲಾವೃಂದದ ವತಿಯಿಂದ ತ್ಯಾಗಿ ನಾಟಕ ಹಾಗೂ ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ದೇವಾಲಯದ ಸಮಿತಿಯ ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.