ಶ್ರೀಮಂಗಲ, ಏ. 1: ಪೊನ್ನಂಪೇಟೆಯಿಂದ ಶ್ರೀಮಂಗಲ ನಡುವಿನ ರಾಜ್ಯ ಹೆದ್ದಾರಿ ಮರು ಡಾಂಬರೀಕರಣ ಮಾಡಿದ ಸಂದರ್ಭ ರಸ್ತೆಯ ಎರಡು ಬದಿಯ ಕಾಡನ್ನು ತೆರವುಗೊಳಿಸಿದ ಸಂದರ್ಭ ಗುಂಡಿ ಬಿದ್ದು, ವಾಹನ ಸಂಚಾರಕ್ಕೆ ಅಪಾಯ ಕಾರಿಯಾಗಿ ಪರಿಣಮಿಸಿರುವ ಬಗ್ಗೆ ‘ಶಕ್ತಿ’ ವರದಿ ಮಾಡಿದ ಬೆನ್ನಲ್ಲೆ ಎಚ್ಚೆತ್ತುಕೊಂಡು ಲೋಕೋಪಯೋಗಿ ಇಲಾಖೆ ರಸ್ತೆಯನ್ನು ಸರಿಪಡಿಸಲು ಮುಂದಾಗಿದೆ.ಪೊನ್ನಂಪೇಟೆ ಸಮೀಪ ಬೇಗೂರುಕೊಲ್ಲಿ ಹಾಗೂ ಹುದಿಕೇರಿ ಸಮೀಪ ಗದ್ದೆಯ ಮೂಲಕ ಹಾದುಹೋಗುವ ಹೆದ್ದಾರಿಯ ಎರಡು ಬದಿ ಹಳ್ಳ ಉಂಟಾಗಿತ್ತು. ಎದುರಿನಿಂದ ಬರುವ ವಾಹನಕ್ಕೆ ಸ್ಥಳಾವಕಾಶ ಮಾಡಿಕೊಡುವ ಸಂದರ್ಭ ಭಾರಿ ವಾಹನಗಳು ಡಾಂಬರು ರಸ್ತೆ ಬಿಟ್ಟು ರಸ್ತೆಯ ಬದಿಗೆ ಇಳಿಯುವಾಗ ಒಂದು ಬದಿಗೆ ಭಾರ ಉಂಟಾಗಿ ವಾಹನ ನಿಯಂತ್ರಣ ಕಳೆದುಕೊಂಡು ಅಪಘಾತವಾಗುತ್ತಿತ್ತು.

ಕಳೆದ ಒಂದು ತಿಂಗಳ ಹಿಂದೆ ಈ ರಸ್ತೆಯ ಡಾಂಬರೀಕರಣವಾಗಿತ್ತು. ಕಳೆದ ಒಂದು ತಿಂಗಳ ಅವಧಿಯಲ್ಲಿ ಈ ರಸ್ತೆ ಹಳ್ಳದ ಅಪಾಯದಿಂದ ಹಲವು ವಾಹನ ಅಪಘಾತ ಉಂಟಾಗಿತ್ತು. ಈ ಬಗ್ಗೆ ‘ಶಕ್ತಿ’ ಮಾ.25ರ ಸಂಚಿಕೆಯಲ್ಲಿ ಅಪಾಯಕಾರಿ ಪೊನ್ನಂಪೇಟೆ-ಶ್ರೀಮಂಗಲ ರಸ್ತೆ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಗೆ ಲೋಕೋಪ ಯೋಗಿ ಇಲಾಖೆ ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸಲು ಮುಂದಾಗಿದೆ. ಇಲಾಖೆ ವತಿಯಿಂದ ರಸ್ತೆಯ ಎರಡು ಬದಿಯ ಹಳ್ಳಗಳಿಗೆ ಟಿಪ್ಪರ್ ಮೂಲಕ ಮಣ್ಣು ಹಾಕಿ ಹಳ್ಳಗಳನ್ನು ಸರಿಪಡಿಸಲು ಇಲಾಖೆ ಕಾರ್ಯಪ್ರವೃತ್ತವಾಗಿದೆ.

ಪ್ರತಿಕ್ರಿಯೆ: ಈ ರಸ್ತೆ ಡಾಂಬರೀಕರಣ ಮಾಡುವ ಮೊದಲು ರಸ್ತೆಯ ಎರಡು

(ಮೊದಲ ಪುಟದಿಂದ) ಬದಿಯ ಕಾಡುಗಳನ್ನು ತೆರವುಗೊಳಿಸಿ ಸಮತಟ್ಟು ಮಾಡುವ ಸಂದರ್ಭ ಗದ್ದೆಯ ನಡುವೆ ಹಾದು ಹೋಗುವ ಈ ಹೆದ್ದಾರಿ ಹಳ್ಳವಾಗಿದ್ದು, ಇದರಿಂದ ಈ ಭಾಗದಲ್ಲಿ ಹಲವು ಅಪಘಾತಗಳು ಉಂಟಾಗುವ ಮುನ್ನೆಚ್ಚರಿಕೆಯಿಂದ ಈ ರಸ್ತೆಯನ್ನು ತುರ್ತಾಗಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಬೇಗೂರು ಕೊಲ್ಲಿ ಹಾಗೂ ಹುದಿಕೇರಿ ಬಳಿಯ ಹೆದ್ದಾರಿಯ ಎರಡು ಬದಿಯನ್ನು ಮಣ್ಣು ಹಾಕಿ ಹಳ್ಳ ಮುಚ್ಚುವದರೊಂದಿಗೆ ರಸ್ತೆಯ ಎರಡು ಬದಿಯನ್ನು ಅಗಲೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವದು ಎಂದು ಲೋಕೋಪಯೋಗಿ ಇಲಾಖೆ ಅಭಿಯಂತರ ಎಸ್. ನವೀನ್ ತಿಳಿಸಿದ್ದಾರೆ.

(ಮೊದಲ ಪುಟದಿಂದ) ಎಂ. ಕುಮಾರ ಹಾಗೂ ಆಟೋ ಚಾಲಕ ಟಿ.ಎನ್. ಮಹೇಶ್‍ನನ್ನು ಬಂಧಿಸಿದರು. ಜೊತೆಯಲ್ಲಿದ್ದ ಕರಿಮೆಣಸನ್ನು ಪೊಲೀಸರು ವಶ ಪಡಿಸಿಕೊಂಡ ನಂತರ ಮೂವರು ಸೇರಿ ಕರಿ ಮೆಣಸನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ.

ಡಿವೈಎಸ್ಪಿ ನಾಗಪ್ಪ, ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಸಬ್‍ಇನ್ಸ್‍ಪೆಕ್ಟರ್ ನಂಜುಂಡಸ್ವಾಮಿ ಸಿಬ್ಬಂದಿಗಳು ಕರಿಮೆಣಸು ಕಳವು ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಪತ್ತೆ ಹಚ್ಚಿ ಕರಿಮಣಸು ಅಕ್ರಮ ಸಾಗಾಟಕ್ಕೆ ಬಳಸಿದ ಆಟೋವನ್ನು ವಶ ಪಡಿಸಿಕೊಂಡಿದ್ದಾರೆ. ಈ ಮೂರು ಮಂದಿ ಸ್ನೇಹಿತರೆಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.ರೂ. 1.65 ಲಕ್ಷದ ಕರಿಮೆಣಸು ಕಳವು