ವೀರಾಜಪೇಟೆ, ಏ. 1: ಪಾರಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾಡು ಗ್ರಾಮದ ಶ್ರೀ ಭಗವತಿ ದೇವಿಯ ಉತ್ಸವವು ತಾ. 2 ರಂದು (ಇಂದಿನಿಂದ) ತಾ. 4 ರವರೆಗೆ ನಡೆಯಲಿದೆ.

ಪೂರ್ವಾಹ್ನ ಕೈಕಾಡು ಮುಕ್ಕಾಟೀರ ಮನೆಯಿಂದ ಭಂಡಾರ ತರುವದು ಮತ್ತು ಮಾಹಾಪೂಜೆ, ಸಂಜೆ ತೋತ ತೆರೆ ಜರುಗಲಿದೆ. ತಾ. 3 ರಂದು ಶ್ರೀ ದೇವಿಗೆ ವಿಶೇಷ ಪೂಜೆಗಳು ಜರುಗಿದ ಬಳಿಕ ಎತ್ತುಪೋರಾಟ ಮತ್ತು ಸಂಜೆ ಶ್ರೀ ದೇವಿಗೆ ವಿಶೇಷ ಅಲಂಕಾರ ಪೂಜೆಗಳು ಜರುಗುತ್ತವೆ. ಅಂದು ರಾತ್ರಿ ಚೌಂಡಿ ತೆರೆಯ ಮೆಲೇರಿ, ಚೌಂಡಿ ತೆರೆಗೆ ಸಂಬಂಧಿಸಿದ ದೈವ ತೆರೆಗಳಾದ ತೋತ, ಕುಟ್ಟಿಚಾತ, ಕಾಲಭೈರವ, ಕರಿಬಾಳ ಮತ್ತುನುಚ್ಚುಟ್ಟೆ ಪಂಚತೆರೆಗಳು ಭಕ್ತರಿಗೆ ದರ್ಶನ ನೀಡಲಿದೆ. ಮಂಗಳವಾರ ಶ್ರೀ ವಿಷ್ಣು ಮೂರ್ತಿ ತರೆ ಮತ್ತು ಮಾಹಾ ಪೂಜೆಯೊಂದಿಗೆ ಉತ್ಸವಕ್ಕೆ ತೆರೆಯಳೆಲಾಗುತ್ತದೆ. ಸೊಮವಾರ ದಿನದ ರಾತ್ರಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.