ಬಸ್‍ನ ಟಯರ್ ಸ್ಫೋಟಗೊಂಡು ಮೂವರ ಸಾವು

ಹೂವಿನ ಹಡಗಲಿ, ಏ. 1: ಇಲ್ಲಿನ ಮೈಲಾರ ಬಳಿ ಕೆಎಸ್‍ಆರ್‍ಟಿಸಿ ಬಸ್‍ನ ಟಯರ್ ಸ್ಫೋಟಗೊಂಡು ಸರಣಿ ಅಪಘಾತ ಸಂಭವಿಸಿ ಮೂವರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಶನಿವಾರ ಸಂಭವಿಸಿದೆ. ಟಯರ್ ಸ್ಫೋಟಗೊಂಡು ಎದುರಿನಿಂದ ಬರುತ್ತಿದ್ದ ಎರಡು ಬೈಕ್‍ಗಳಿಗೆ ಡಿಕ್ಕಿಯಾಗಿದೆ. ಪರಿಣಾಮವಾಗಿ ಒಂದು ಬೈಕ್‍ನಲ್ಲಿದ್ದ ತಂದೆ-ಮಗಳು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಂದು ಬೈಕ್‍ನಲ್ಲಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಹೊನ್ನಪ್ಪ (48) ಮತ್ತು ಪುತ್ರಿ ನಂದಾ (20) ಸ್ಥಳದಲ್ಲೇ ಸಾವನ್ನಪ್ಪಿದರೆ, ಮಹಾಂತೇಶ್ (38) ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಘಟನೆ ನಡೆದ ಕೂಡಲೇ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಹಿರೇಹಡಗಲಿ ಪೆÇಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಗ್ರರ ಧಾಳಿ : ಇಬ್ಬರು ಯೋಧರಿಗೆ ಗಾಯ

ಶ್ರೀನಗರ, ಏ. 1: ಶ್ರೀನಗರದ ಪರಿಂಪೆÇೀರಾ-ಪಂತ್ ಚೌಕ್ ಬೈಪಾಸ್ ರಸ್ತೆಯಲ್ಲಿರುವ ಆಸ್ಪತ್ರೆ ಸಮೀಪ ಸೇನಾ ಕಾವಲುಪಡೆ ಮೇಲೆ ಶನಿವಾರ ಉಗ್ರರು ಗುಂಡಿನ ಧಾಳಿ ನಡೆಸಿದ್ದು, ಧಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ. ಇಂದು ಮಧ್ಯಾಹ್ನ 1.15 ರ ಸುಮಾರಿಗೆ ಉಗ್ರರು ಸ್ಕಿಮ್ಸ್ ಆಸ್ಪತ್ರೆ ಬಳಿ ಸೇನಾ ಸಿಬ್ಬಂದಿ ಮೇಲೆ ಗುಂಡಿನ ಧಾಳಿ ನಡೆಸಿದ್ದು, ಉಗ್ರರ ಧಾಳಿಯ ಬೆನ್ನಲ್ಲೇ ಕೆಲ ದುಷ್ಕರ್ಮಿಗಳು ಪೆÇಲೀಸರ ಮೇಲೆ ಹಾಗೂ ಸಿಆರ್‍ಪಿಎಫ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೆÇಲೀಸ್ ಅಧಿಕಾರಿಗಳು ಹೇಳಿದ್ದಾರೆ. ಉಗ್ರರ ಧಾಳಿಯಲ್ಲಿ ಕಾವಲುಪಡೆಯ ಕೊನೆಯ ವಾಹನದಲ್ಲಿದ್ದ ಇಬ್ಬರು ಪೆÇಲೀಸರು ಗಾಯಗೊಂಡಿದ್ದು, ಸೇನಾ ಕಾವಲುಪಡೆ ಪರಿಂಪೆÇೀರಾದಿಂದ ಪಂತ್ ಚೌಕ್‍ಗೆ ತೆರಳುತ್ತಿದ್ದ ವೇಳೆ ಈ ಧಾಳಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಉಗ್ರರಿಗಾಗಿ ಸೇನೆ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದೆ ಎಂದು ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್ ಆಹ್ವಾನವನ್ನು ತಿರಸ್ಕರಿಸಿದ ಬಾಂಗ್ಲಾ ಕ್ರಿಕೆಟಿಗರು

ಢಾಕಾ, ಏ. 1: ಮತ್ತೆ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಬೇಕು ಎಂಬ ಮಹದಾಸೆಯನ್ನು ಹೊತ್ತು ಬಾಂಗ್ಲಾದೇಶವನ್ನು ಆಹ್ವಾನಿಸಿದ್ದ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಗೆ ಮತ್ತೆ ಮುಖಭಂಗ ಎದುರಾಗಿದ್ದು, ಭದ್ರತೆಯ ಕಾರಣ ನೀಡಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಆಹ್ವಾನವನ್ನು ತಿರಸ್ಕರಿಸಿದೆ. ಜುಲೈನಲ್ಲಿ 2 ಪಂದ್ಯಗಳ ಟಿ20 ಸರಣಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳುವಂತೆ ಪಿಸಿಬಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಗೆ ಆಹ್ವಾನ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಪ್ರಸ್ತುತ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ಕ್ರಿಕೆಟಿಗರು ಹಿಂದೇಟು ಹಾಕುತ್ತಿದ್ದು, ಭದ್ರತಾ ಆಂತಕ ವ್ಯಕ್ತಪಡಿಸಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಪತ್ರದಲ್ಲಿ ತಿಳಿಸಿದೆ. ಕಳೆದ ಮಾರ್ಚ್ 5 ರಂದು ಪಾಕಿಸ್ತಾನದ ಲಾಹೋರ್‍ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಟಿ20 ಫೈನಲ್ ಪಂದ್ಯದ ಯಶಸ್ಸಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆ ಬಾಂಗ್ಲಾದೇಶಕ್ಕೆ ಈ ಪ್ರಸ್ತಾವನೆ ಸಲ್ಲಿಸಿತ್ತು.

19 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ವಂಚಿತರು

ಬೆಂಗಳೂರು, ಏ. 1: ಕಡಿಮೆ ಹಾಜರಾತಿಯ ಕಾರಣ ಸುಮಾರು 19 ಸಾವಿರ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವದರಿಂದ ವಂಚಿತರಾಗಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾಹಿತಿ ಪ್ರಕಾರ, ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆ ಹಾಜರಾತಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಕಳೆದ ವರ್ಷ 18,785 ವಿದ್ಯಾರ್ಥಿಗಳು ಪರೀಕ್ಷೆ ಬರೆದಿರಲಿಲ್ಲ, ಈ ವರ್ಷ 19,306 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಶೇ.75 ರಷ್ಟು ಹಾಜರಾತಿ ಹೊಂದಿರಬೇಕು, ಇಲ್ಲದಿದ್ದರೆ ಅಂತಹ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು ಎಂದು ಹೇಳಿದೆ. ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಸುಮಾರು 8 ಸಾವಿರ ವಿದ್ಯಾರ್ಥಿಗಳು ಕಡಿಮೆ ಹಾಜರಾತಿಯಿಂದ ಪರೀಕ್ಷೆ ಬರೆದಿರಲಿಲ್ಲ.

ವಿದ್ಯುತ್ ದರದಲ್ಲಿ ಏರಿಕೆ

ಬೆಂಗಳೂರು, ಏ. 1: ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ನಂತರ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಲು ಮುಂದಾಗಿದೆ. ಏ. 1 ರಿಂದ ವಿದ್ಯುತ್ ದರದಲ್ಲಿ ಏರಿಕೆಯಾಗಲಿದೆ ಎಂದು ಕೆಇಆರ್‍ಸಿ ಅಧ್ಯಕ್ಷ ಎಂ.ಕೆ. ಶಂಕರಲಿಂಗೇಗೌಡ ಹೇಳಿದ್ದಾರೆ. ಪ್ರತಿ ಯೂನಿಟ್‍ಗೆ ಎಷ್ಟು ಏರಿಕೆಯಾಗಲಿದೆ ಎಂಬದನ್ನು ಇನ್ನೂ ಪ್ರಕಟಿಸಿಲ್ಲ. ಬೆಸ್ಕಾಂ ಹೊರತುಪಡಿಸಿ ಎಲ್ಲಾ ಎಸ್ಕಾಂಗಳಿಂದ ಡಾಟಾ ಸಂಗ್ರಹಿಸಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಐದು ದಿನಗಳೊಳಗೆ ದರ ನಿಗದಿಪಡಿಸುವದಾಗಿ ಹೇಳಿದೆ. ಬರ ಪರಿಸ್ಥಿತಿ ಹಾಗೂ ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿ ಮಾಡಬೇಕಾಗಿರುವ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್‍ಗೆ 1.48 ಪೈಸೆ ಬೆಲೆ ಏರಿಸಬೇಕೆಂದು ಎಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ ಎಂದು ಅವರು ಹೇಳಿದ್ದಾರೆ.

ಬಿಎಸ್‍ಎನ್‍ಎಲ್ ಬ್ರಾಡ್ ಬಾಂಡ್ ಬಂಪರ್ ಆಫರ್

ನವದೆಹಲಿ, ಏ. 1: ರಿಲಯನ್ಸ್ ಜಿಯೋ ಮಾರುಕಟ್ಟೆ ಪ್ರವೇಶದೊಂದಿಗೆ ಟೆಲಿಕಾಂ ಮಾರುಕಟ್ಟೆಯ ಚಿತ್ರಣವೇ ಬದಲಾಗಿ ಹೋಗಿದ್ದು, ಗ್ರಾಹಕರನ್ನು ಸೆಳೆಯಲು ಮೊಬೈಲ್ ಸೇವಾ ಸಂಸ್ಥೆಗಳು ಮೇಲಿಂದ ಮೇಲೆ ಆಫರ್‍ಗಳನ್ನು ಘೋಷಣೆ ಮಾಡುತ್ತಿವೆ. ಇದಕ್ಕೆ ನೂತನ ಸೇರ್ಪಡೆ ಎಂದರೆ ಬಿಎಸ್‍ಎನ್‍ಎಲ್ ಈ ಹಿಂದೆ ಸಂಸ್ಥೆ ಘೋಷಣೆ ಮಾಡಿದಂತೆಯೇ ರಿಲಯನ್ಸ್ ಜಿಯೋ ಪ್ರಬಲ ಪೈಪೆÇೀಟಿ ನೀಡುತ್ತಿದ್ದು, ಇದೀಗ ಗ್ರಾಹಕರಿಗೆ ಮತ್ತೊಂದು ಆಫರ್ ನೀಡಿದೆ. ಅದರೆತ ಬಿಎಸ್‍ಎನ್‍ಎಲ್ ಬ್ರಾಂಡ್ ಬಾಂಡ್ ಗ್ರಾಹಕರು ಪ್ರತೀ ತಿಂಗಳ ಕೇವಲ 249 ರೂ. ನೀಡಿ ನಿತ್ಯ 10 ಜಿಬಿಯಂತೆ ಅನಿಯಮಿತ ಡಾಟಾವನ್ನು ಬಳಕೆ ಮಾಡಬಹುದಾಗಿದೆ. ಅಷ್ಟು ಮಾತ್ರವಲ್ಲದೇ ಉಚಿತ ಕರೆಗಳು ಕೂಡ ಆಫರ್‍ನಲ್ಲಿ ಸೇರಿವೆ. ಈ ಆಫರ್ ಪ್ರಕಾರ ಗ್ರಾಹಕರು ಭಾನುವಾರದಂದು ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಯಾವದೇ ನೆಟ್‍ವರ್ಕ್ ಉಚಿತ ಅನಿಯಮಿತ ಕರೆ ಮಾಡಬಹುದಾಗಿದೆ. ಗ್ರಾಹಕರು 249 ರೂ. ಪಾವತಿ ಮಾಡಿ ಈ ಹೊಸ ಆಫರ್‍ಗೆ ಬದಲಾದರೆ ನಿತ್ಯ ಯಾವದೇ ನೆಟ್‍ವರ್ಕ್‍ಗೆ ಅನಿಯಮಿತ ಉಚಿತ ಕರೆಗಳನ್ನು ಮಾಡಬಹುದು. ಅಂತೆಯೇ 2 ಎಂಬಿಪಿಎಸ್ ವೇಗದಲ್ಲಿ ನಿತ್ಯ 10 ಜಿಬಿಯಂತೆ ಅನಿಯಮಿತ ಡಾಟಾ ಪಡೆಯಬಹುದು ಎಂದು ಬಿಎಸ್‍ಎನ್‍ಎಲ್ ಘೋಷಣೆ ಮಾಡಿದೆ.

ಫೇಸ್‍ಬುಕ್‍ನಲ್ಲಿ ಬ್ಲಾಕ್ ಮೇಲ್ ಮಾಡಿದವನ ಬಂಧನ

ನವದೆಹಲಿ, ಏ. 1: ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ 50 ವರ್ಷದ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ 6 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದ ಮೇಲೆ 29 ವರ್ಷದ ಎಂಬಿಎ ಪದವಿಧರನನ್ನು ಶನಿವಾರ ಪೆÇಲೀಸರು ಬಂಧಿಸಿದ್ದಾರೆ. ಮಹಿಳೆಯ ಮಾರ್ಪಾಡು ಮಾಡಿದ ಚಿತ್ರಗಳನ್ನು ಆನ್‍ಲೈನ್‍ಗೆ ಹಾಕುವದಾಗಿ ಬೆದರಿಕೆ ಹಾಕಿ 6 ಲಕ್ಷ ರೂಪಾಯಿ ಪಡೆದಿರುವದಾಗಿ ಮಹಿಳೆಯ ಪತಿ ಮಾರ್ಚ್ 17 ರಂದು ಎಂಬಿಎ ವಿದ್ಯಾರ್ಥಿ ವಿರುದ್ಧ ದೆಹಲಿ ಪೆÇಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಮಹಿಳೆಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದು, ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ತಮ್ಮ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಆದರೆ ಕಳೆದ 6 ತಿಂಗಳಿಂದ ಆರೋಪಿ ಮಹಿಳೆಯ ತಿರುಚಿದ ಚಿತ್ರಗಳನ್ನು ಆನ್‍ಲೈನ್‍ನಲ್ಲಿ ಹಾಕುವದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದ. ಹೆದರಿದ ಮಹಿಳೆ 6 ಲಕ್ಷ ರೂಪಾಯಿ ನೀಡಿದ್ದು, ಬಳಿಕ ಆರೋಪಿ ರೂ. 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾನೆ. ಇದರಿಂದ ಬೇಸತ್ತ ಮಹಿಳೆ ಪತಿಗೆ ವಿಚಾರ ತಿಳಿಸಿದ್ದು, ಬಳಿಕ ಪತಿ ಪೆÇಲೀಸರಿಗೆ ದೂರು ನೀಡಿದ್ದಾರೆ.