ಸೋಮವಾರಪೇಟೆ, ಏ. 1: ತಾಲೂಕಿನ ಮೆಣಸ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿಯಲ್ಲಿ ತಾ. 11ರಿಂದ 13ರವರೆಗೆ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ತಪೋವನ ಮಠಾಧೀಶರಾದ ಮಹಾಂತ ಶಿವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ತಾ. 11ರಂದು ಬೆಳಿಗ್ಗೆ 8ಗಂಟೆಗೆ ಧ್ವಜಾರೋಹಣ, ಸಂಜೆ 6.30ಕ್ಕೆ ಸ್ವಾಮಿಯವರಿಗೆ ಕಂಕಣಧಾರಣೆ, ಮಹಾಮಂಗಳಾರತಿ ಜರುಗಲಿದೆ. ತಾ. 12ರಂದು ಬೆಳಿಗ್ಗೆ 8ಗಂಟೆಗೆ ಶ್ರೀ ಮಧನಾದಿ ಅನಘ ನಿರಂಜನ ಜಂಗಮ ಪೂಜೆ, ಸಂಜೆ 6.30ಕ್ಕೆ ಸೂರ್ಯ ಮಂಡಲೋತ್ಸವ, 8 ಗಂಟೆಗೆ ದಾಸೋಹ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾ. 13ರಂದು ಬೆಳಿಗ್ಗೆ 5 ಗಂಟೆಗೆ ಶ್ರೀಕ್ಷೇತ್ರನಾಥ ವೀರಭದ್ರೇಶ್ವರ ಸ್ವಾಮಿಯವರ ಪ್ರೀತ್ಯರ್ತ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ ಸೇವೆ ಜರುಗಲಿದೆ. 7ಗಂಟೆಗೆ ಸಣ್ಣ ಚಂದ್ರಮಂಡಲೋತ್ಸವ, 9ಗಂಟೆಗೆ ಅಡ್ಡಪಲ್ಲಕ್ಕಿ ಉತ್ಸವ, 11 ಗಂಟೆಗೆ ಪ್ರಸನ್ನ ತಪೋವನೇಶ್ವರಿ ಅನ್ನನವರ ಮುತ್ತೈದೆ ಸೇವೆ, ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದರು.

ಮಧ್ಯಾಹ್ನ 12 ಗಂಟೆಗೆ ದಾಸೋಹ ಸೇವೆ, 1 ಗಂಟೆಗೆ ಸ್ವಾಮಿಯವರ ದೊಡ್ಡ ಚಂದ್ರಮಂಡಲೋತ್ಸವ, 5.30ಕ್ಕೆ ಪ್ರಾಕಾರ ಪಲ್ಲಕ್ಕಿ ಉತ್ಸವ ಜರುಗಲಿದೆ. 6 ಗಂಟೆಗೆ ರಥಾರೂಢರಾದ ಶ್ರೀ ಸ್ವಾಮಿಯವರಿಗೆ ಶ್ರೀ ಚೆಲುವರಾಯ ಸ್ವಾಮಿಯವರಿಂದ ಛಾಮರ ಸೇವೆ, ಮಹಾಮಂಗಳಾರತಿ ನಡೆಯಲಿದ್ದು, 6.30ಕ್ಕೆ ಶ್ರೀ ಸ್ವಾಮಿಯವರ ಮಹಾರಥೋತ್ಸವ ನೆರವೇರಲಿದೆ.

ರಾತ್ರಿ 8 ಗಂಟೆಗೆ ವೃಷಭಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಹಾ ಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ ಎಂದರು. ಈ ಸಂದರ್ಭ ಮುದ್ದಿನಕಟ್ಟೆ ಮಠಾಧೀಶರಾದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.