ಮಡಿಕೇರಿ, ಏ. 1: ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿನ ಭೂಮಿಯ ಮಾರುಕಟ್ಟೆ ದರ ಪರಿಷ್ಕರಣೆಯಿಂದ ಸರ್ಕಾರದ ಬೊಕ್ಕಸಕ್ಕೆ 2016-17ನೇ ಸಾಲಿನಲ್ಲಿ ರೂ. 10.32 ಕೋಟಿ ಆದಾಯ ದೊರೆತಿದೆ. ಇದುವರೆಗೂ ಪ್ರತೀ ವರ್ಷ ಭೂಮಿಯ ಮಾರುಕಟ್ಟೆ ದರ ಪರಿಷ್ಕರಣೆಯಾಗುತ್ತಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಈ ಹಿಂದಿನ ದರವನ್ನೇ ಮುಂದುವರೆಸುವಂತೆ ಇತ್ತೀಚೆಗೆ ನಡೆದ ಕೇಂದ್ರ ಮೌಲ್ಯಮಾಪನ ಸಮಿತಿಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿನ ಭೂಮಿಗೆ ಪ್ರತೀ ಚದರ ಕಿ.ಮೀ.ಗೆ ರೂ. 3500 ರಿಂದ 16,000ದವರೆಗೂ ಮಾರುಕಟ್ಟೆ ದರವನ್ನು ಮಡಿಕೇರಿ ಉಪ ನೋಂದಾವಣಾ ಇಲಾಖೆ ನಿಗದಿಪಡಿಸಿದೆ. ಅದರಂತೆ ತಾಲೂಕಿನಲ್ಲಿರುವ ಕಾಫಿ ತೋಟಗಳಿಗೆ ಪ್ರತಿ ಎಕರೆಗೆ ರೂ. 4 ಲಕ್ಷದಿಂದ 13.50 ಲಕ್ಷದವರೆಗೆ ನಿಗದಿಪಡಿಸಲಾಗಿದೆ. ಏಲಕ್ಕಿ ತೋಟಗಳಿಗೆ ರೂ. 3 ಲಕ್ಷದಿಂದ 10 ಲಕ್ಷ, ಬಾಣೆ ಖುಷ್ಕಿ, ತರಿ, ಕೃಷಿ ಭೂಮಿಗಳಿಗೆ ರೂ. 1.50 ಲಕ್ಷದಿಂದ 8 ಲಕ್ಷದವರೆಗೆ ನಿಗದಿಪಡಿಸಲಾಗಿದೆ. ಅಲ್ಲದೆ ಲೋಕೋಪಯೋಗಿ ಇಲಾಖೆ ಒತ್ತಿನಲ್ಲಿರುವ ತೋಟಗಳಿಗೆ ಶೇ. 10ರಷ್ಟು ಹೆಚ್ಚುವರಿ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ ರಾಜ್ಯ ಹೆದ್ದಾರಿಯ ಬದಿಯಿರುವ ತೋಟಗಳಿಗೆ ಶೇ. 25ರಷ್ಟು ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಿರುವ ತೋಟಗಳಿಗೆ ಶೇ. 50ರಷ್ಟು ಹೆಚ್ಚುವರಿ ಮಾಡಿ ನಿಗದಿಪಡಿಸಲಾಗಿದೆ.

ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿನ ಭೂಮಿಯ ದರವು ಸ್ವಲ್ಪಮಟ್ಟಿನ ವ್ಯತ್ಯಾಸ ಕಂಡುಬರಬಹುದು. ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಭೂಮಿಯ ದರವನ್ನು ಶೇ. 10 ರಿಂದ 15ರಷ್ಟು ಹೆಚ್ಚುವರಿ

(ಮೊದಲ ಪುಟದಿಂದ) ಮಾಡಿ ಆಕ್ಷೇಪಗಳಿದ್ದಲ್ಲಿ ಸಲ್ಲಿಸಲು ತಾ. 21ರವರೆಗೆ ಅವಕಾಶ ನೀಡಿ ಸಾರ್ವಜನಿಕ ಪ್ರಕಟಣೆ ಮಾಡಲಾಗಿತ್ತು.

ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯಲ್ಲಿ ಈ ಹಿಂದಿನ ಸಾಲಿನ ದರವನ್ನೇ ಮುಂದುವರೆಸುವಂತೆ ಹಾಗೂ ನೂತನ ಪರಿಷ್ಕರಣೆ ದರವನ್ನು ಕೈ ಬಿಡುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಹಾಗಾಗಿ ಈ ಹಿಂದಿನ ಸಾಲಿನ ದರವೇ ಮುಂದುವರೆಯಲಿದೆ ಎಂದು ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.ನೋಟು ನಿಷೇಧದಿಂದ ಹಿನ್ನಡೆ

(ಮೊದಲ ಪುಟದಿಂದ) ಕಂಡಿದ್ದು, ಹೆಚ್ಚಿನ ಆದಾಯ ದೊರೆಯಬಹುದು. ಅಲ್ಲದೆ ರಾಜಧಾನಿ ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಭೂಮಿಯ ದರ ತುಂಬಾ ದುಬಾರಿಯಾಗಿದೆ. ಬೇರೆ ಜಿಲ್ಲೆಗಳಲ್ಲಿ ಭೂಮಿ ದರವು ತುಂಬಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಭೂಮಿಯನ್ನು ಕೊಂಡುಕೊಳ್ಳುವವರ ಸಂಖ್ಯೆಯೂ ಜಿಲ್ಲೆಯಲ್ಲಿ ಕ್ಷೀಣಿಸಿದೆ ಎಂದು ಅಧಿಕಾರಿಯೋರ್ವರು ‘ಶಕ್ತಿ’ಗೆ ತಿಳಿಸಿದ್ದಾರೆ.