ಸಿದ್ದಾಪುರ, ಏ. 2: ಕರಡಿಗೋಡುವಿನ ತೋಟವೊಂದರ ಕಾರ್ಮಿಕರೊಬ್ಬರ ಪುತ್ರಿ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇರೆಗೆ ಪೊಲೀಸರು ದಿಡ್ಡಳ್ಳಿಯ ರವಿ ಎಂಬಾತನನ್ನು ಬಂಧಿಸಿ ‘ಫೋಕ್ಸೋ' ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಕೊಂಡಿದ್ದಾರೆ.

*ಮತ್ತೊಂದು ಪ್ರಕರಣದಲ್ಲಿ ಹೊಸೂರು ಬೆಟ್ಟಗೇರಿಯ ತೋಟ ಕಾರ್ಮಿಕನ ಪುತ್ರಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಹಲ್ಲೆ ಮಾಡಿರುವ ದೂರಿನ ಮೇರೆಗೆ ಪೊಲೀಸರು ಸಿದ್ದು ಎಂಬಾತನ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.