ಮಡಿಕೇರಿ, ಏ. 3: ಭಾರತ್ ಆಸ್ಪತ್ರೆ ಮತ್ತು ಗ್ರಂಥಿ ಸಂಸ್ಥೆ, ಮೈಸೂರು, ಹಾಗೂ ಅಶ್ವಿನಿ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ಕ್ಯಾನ್ಸರ್ ಖ್ಯಾತ ತಜ್ಞರಿಂದ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ ತಾ. 4 ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ ಸಂದರ್ಶನಕ್ಕೆ ಲಭ್ಯವಿರುತ್ತಾರೆ. ಜಿಲ್ಲೆಯ ಸುತ್ತಮುತ್ತಲಿನ ರೋಗಿಗಳು ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ ಕೆಳಕಂಡ ಲಕ್ಷಣಗಳು ಕಂಡುಬರುತ್ತಿರುವ ಜನರು ಈ ಶಿಬಿರಕ್ಕೆ ಬಂದು ಪರೀಕ್ಷಿಸಿ ಕೊಳ್ಳಬೇಕಾಗಿ ಆಸ್ಪತ್ರೆಯ ಪ್ರಕಟಣೆಯಲ್ಲಿ ಕೋರಲಾಗಿದೆ.

ಸ್ತನದಲ್ಲಿ ಊತ, ಗಂಟು ಅಥವಾ ಶರೀರದ ಯಾವದೇ ಭಾಗದಲ್ಲಿ ಗಡಸುತನ, ಶರೀರದ ಯಾವದೇ ಭಾಗದಿಂದ ರಕ್ತ ಸ್ರಾವ, ಮಲ, ಮೂತ್ರ, ತೊಂಟೆ, ವಾಂತಿ ಇವುಗಳಲ್ಲಿ ರಕ್ತ -ಯೋನಿಯಿಂದ ಅಸ್ವಾಭಾವಿಕ ರಕ್ತ ಸ್ರಾವ, ಒಂದು ತಿಂಗಳ ಮೇಲ್ಪಟ್ಟು ಬಾಯಿ, ಚರ್ಮ ಅಥವಾ ಶರೀರದ ಯಾವದೇ ಭಾಗದಲ್ಲಿ ಗಾಯ ಅಥವಾ ವಾಸಿಯಾಗದೆ ಇರುವ ಹುಣ್ಣು, ನುಂಗುವಾಗಿನ ತೊಂದರೆ ಅಥವಾ ತಡೆತ, ಗಂಟಲಲ್ಲಿ ಉರಿತ, ನೋವು ಅಥವಾ ಧ್ವನಿ ಬದಲಾವಣೆ ಒಂದು ತಿಂಗಳ ಮೇಲ್ಪಟ್ಟು ಇದ್ದಲ್ಲಿ ಈ ಶಿಬಿರಕ್ಕೆ ಬಂದು ಪರೀಕ್ಷಿಸಿಕೊಳ್ಳಬೇಕಾಗಿಯೂ, ಹೆಚ್ಚಿನ ಮಾಹಿತಿಗಾಗಿ 7026542580ರಲ್ಲಿ ಸಂಪರ್ಕಿಸ ಬಹುದಾಗಿದೆ.