ಕೂಡಿಗೆ, ಏ. 3 : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಯಲ್ಲಿ ಕಳೆದ 10 ವರ್ಷಗಳಿಂದಲೂ ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚು ಅನುದಾನ ಬರುತ್ತಿದ್ದು, ಆ ಅನುದಾನವನ್ನು ಸಮರ್ಪಕವಾಗಿ ಬಳಸುವ ಮೂಲಕ ಗ್ರಾಮಸ್ಥರಿಗೆ ಕೆಲಸ ನೀಡಿ ಗ್ರಾಮದ ಉಪರಸ್ತೆಗಳು ಮತ್ತು ಇನ್ನಿತರ ಕಾಮಗಾರಿಗಳನ್ನು ನಡೆದ ತಾಲೂಕು ಕಾನೂನು ನೆರವು ಸಮಿತಿಯ ಸಭೆಯಲ್ಲಿ ರಾಷ್ಟ್ರ ಮಟ್ಟದ ಲೋಕ ಅದಾಲತ್ ಎಲ್ಲ ಕಡೆ ಗಳಲ್ಲಿಯೂ ಆಯೋಜಿಸಿದ್ದು ವೀರಾಜಪೇಟೆಯಲ್ಲಿಯೂ ವ್ಯವಸ್ಥಿತವಾಗಿ ನಡೆಸಲು ಸಭೆ ತೀರ್ಮಾನಿಸಿತು.

ಸಭೆಯನ್ನುದ್ದೇಶಿಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಯಪ್ರಕಾಶ್, ಪೊನ್ನಂಪೇಟೆ ನ್ಯಾಯಾಲಯದ ಬಿ.ಕೆ.ಮನು ಮಾತನಾಡಿದರು. ಬೃಹತ್ ಲೋಕ ಅದಾಲತ್‍ನಲ್ಲಿ ಸಿವಿಲ್, ಕ್ರಿಮಿನಲ್, ಬ್ಯಾಂಕ್ ಸಾಲ, ಎಲ್.ಐ.ಸಿ ಮೋಟಾರ್ ಅಪಘಾತ ಪರಿಹಾರ ಸೇರಿದಂತೆ ಇತರ ಆಯ್ದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗು ವುದು ಎಂದರು. ಸಭೆಯಲ್ಲಿ ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕಾಮತ್, ಪೊನ್ನಂಪೇಟೆ ಸಂಘದ ಅಧ್ಯಕ್ಷ ಎಸ್.ಡಿ.ಕಾವೇರಪ್ಪ, ಡಿವೈಎಸ್‍ಪಿ ನಾಗಪ್ಪ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ತಾಲೂಕು ತಹಸಿಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಮಾಜ ಕಲ್ಯಾಣ ಅಧಿಕಾರಿಗಳು, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.