ಸೋಮವಾರಪೇಟೆ, ಏ. 3: ಸಮೀಪದ ಮಸಗೋಡು ಗ್ರಾಮದಲ್ಲಿ ಕೊರೆಯಿಸಲಾಗಿರುವ ಬೋರ್‍ವೆಲ್ ನಲ್ಲಿ ಭಾರೀ ಪ್ರಮಾಣದ ನೀರು ಉಕ್ಕುತ್ತಿದ್ದು, ಸುತ್ತಮುತ್ತಲಿನ ಮಂದಿ ಆಶ್ಚರ್ಯ ಭರಿತರಾಗಿ ವೀಕ್ಷಿಸುತ್ತಿ ದ್ದಾರೆ.

ಹಲವೆಡೆ 500 ಅಡಿಗೂ ಅಧಿಕ ಆಳ ಭೂಮಿ ಕೊರೆದರೂ ಹನಿ ನೀರೂ ಬಾರದ ಪರಿಸ್ಥಿತಿಯಲ್ಲಿ ಕೇವಲ 265 ಅಡಿ ಆಳ ಕೊರೆದಿರುವ ಈ ಬೋರ್‍ವೆಲ್‍ನಲ್ಲಿ ನೀರು ಉಕ್ಕುತ್ತಲೇ ಇದೆ.

ಪಟ್ಟಣದ ಹೊರವಲಯ ಮಸಗೋಡು ಗ್ರಾಮದ ಕಾಫಿ ಬೆಳೆಗಾರ ಪ್ರವೀಣ್ ಅವರ ಮನೆಯ ಸಮೀಪದ, ಬತ್ತಿದ್ದ ಕೆರೆಯೊಂದರ ಸನಿಹದಲ್ಲಿ ಕೊರೆಯಿಸಿದ ಕೊಳವೆ ಬಾವಿಯಲ್ಲಿ ಮೋಟಾರು ಅಳವಡಿಸುವದಕ್ಕೂ ಮುಂಚೆಯೇ ನೀರು ಉಕ್ಕಿ ಹರಿಯುತ್ತಿರುವದು ವಿಶೇಷವಾಗಿದೆ.