ಮಡಿಕೇರಿ, ಏ. 3: ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗ ಬಾಂಧವರ ನಡುವೆ ಕೊಡಗು ಗೌಡ ಯುವ ವೇದಿಕೆ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕುಟುಂಬವಾರು ಕ್ರಿಕೆಟ್ ಹಬ್ಬ ಈ ಬಾರಿ ಪೈಕೇರ ಕುಟುಂಬದ ಆಶ್ರಯದಲ್ಲಿ ಪೈಕೇರ ಕಪ್ ನಡೆಯಲಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಹೆಸರು ನೋಂದಾಯಿಸಿಕೊಳ್ಳಲು ತಾ.8 ಕೊನೆಯ ದಿನವಾಗಿದೆ. ಹೆಸರು ನೋಂದಾಯಿಸಲು ಬಾಕಿ ಇರುವ ತಂಡಗಳು ನಿಗದಿತ ದಿನಾಂಕ ದೊಳಗಡೆ ನೋಂದಾಯಿಸಿ ಕೊಳ್ಳಬೇಕಾಗಿದೆ. ಅಲ್ಲದೆ, ಈ ಬಾರಿಯೂ ಕಬಡ್ಡಿ ಪಂದ್ಯಾವಳಿ ಪುರುಷ ಹಾಗೂ ಮಹಿಳೆಯರಿಗೆ ಏರ್ಪಡಿಸಲಾಗಿದೆ. ಇದರೊಂದಿಗೆ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿ ಕೂಡ ಏರ್ಪಡಿಸಲಾಗಿದ್ದು, ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ. ನಂತರ ಬರುವ ತಂಡಗಳಿಗೆ ಅವಕಾಶವಿರುವದಿಲ್ಲ. ಕ್ರಿಕೆಟ್ ಹಾಗೂ ಥ್ರೋಬಾಲ್‍ಗೆ ಮೂಲೆಮಜಲು ಮನೋಜ್ (9483111134), ಪೈಕೇರ ಗಗನ್ (9483487901), ಅಚ್ಚಲ್ಪಾಡಿ ಪ್ರಸಾದ್ (9480770780), ಕಬಡ್ಡಿಗೆ ದುಗ್ಗಳ ಕಪಿಲ್(9731009841) ಇವರುಗಳನ್ನು ಸಂಪರ್ಕಿಸುವಂತೆ ಯುವ ವೇದಿಕೆ ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಕೋರಿದ್ದಾರೆ.