ಕುಶಾಲನಗರ, ಏ. 2: ಕುಶಾಲನಗರ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಡಾ. ಜೆ. ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಪರಿಷತ್ತಿನ ಸದಸ್ಯರ ಸಭೆಯಲ್ಲಿ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯನ್ನು ಪುನರ್ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಫಿಲಿಪ್‍ವಾಸ್, ಉಪಾಧ್ಯಕ್ಷರಾಗಿ ಎಂ.ಇ. ಮೊಹಿದ್ದೀನ್, ಮೆ.ನಾ. ವೆಂಕಟನಾಯಕ್ ಆಯ್ಕೆಗೊಂಡಿದ್ದಾರೆ.

ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ಟಿ.ಜಿ. ಪ್ರೇಮಕುಮಾರ್ ಪುನರಾಯ್ಕೆಯಾದರು. ಸಮಿತಿಯ ಗೌರವಾಧ್ಯಕ್ಷರಾಗಿ ಕೆ.ಕೆ. ಮಂಜುನಾಥಕುಮಾರ್, ಸಹ ಕಾರ್ಯದರ್ಶಿಯಾಗಿ ಜಿ. ಶ್ರೀಹರ್ಷ, ಗೌರವ ಕೋಶಾಧಿಕಾರಿಯಾಗಿ ಎಸ್.ಹೆಚ್. ಈಶ ಆಯ್ಕೆಯಾದರು.

ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಪದಾಧಿಕಾರಿಗಳಾಗಿ ಡಾ. ಜೆ.ಸೋಮಣ್ಣ, ಹೆಚ್.ಎಸ್. ಗುರುಸ್ವಾಮಿ, ಎಸ್. ನಾಗರಾಜ್ ಹಾಗೂ ಎನ್.ಕೆ. ಮಾಲಾದೇವಿ ಆಯ್ಕೆಯಾದರು.

ಪರಿಷತ್ತಿನ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಪುನರ್ರಚನಾ ಸಭೆಗೆ ವೀಕ್ಷಕರಾಗಿ ಆಗಮಿಸಿದ್ದ ಕಾರ್ಯಕಾರಿ ಸಮಿತಿ ಸದಸ್ಯ ಮೈಸೂರಿನ ಸಿ. ಕೃಷ್ಣೇಗೌಡ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಪರಿಷತ್ತಿನ ಜಿಲ್ಲಾ ಸಮಿತಿಯ ವಿಶೇಷ ಆಹ್ವಾನಿತರಾಗಿ ಡಿ.ಎಂ. ರೇವತಿ, ಡಿ. ಕೃಷ್ಣಚೈತನ್ಯ, ಸಿ.ಎಸ್. ಸುರೇಶ್ ಕಗ್ಗೋಡ್ಲು, ಜಿ. ಶ್ರೀನಾಥ್, ಎನ್.ಎ. ಅಶ್ವತ್, ಶಾಜಿ ಕೆ. ಜಾರ್ಜ್, ಎಂ.ಎಸ್. ಗಣೇಶ್, ಎಂ. ರಂಗಸ್ವಾಮಿ, ಪಿ.ಎಸ್. ರವಿಕೃಷ್ಣ, ಟಿ.ವಿ . ಶೈಲಾ, ಹೆಚ್.ಎನ್. ನಿರ್ಮಲ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ರಾಜ್ಯ ವಿಜ್ಞಾನ ಪರಿಷತ್ತು ಬೆಳೆದು ಬಂದ ದಾರಿ ಹಾಗೂ ಧ್ಯೇಯೋದ್ದೇಶಗಳ ಕುರಿತು ಮಾತನಾಡಿದ ಪರಿಷತ್ತಿನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸಿ. ಕೃಷ್ಣೇಗೌಡ, ಪರಿಷತ್ತಿನ ವತಿಯಿಂದ ವಿದ್ಯಾರ್ಥಿ ಸಮುದಾಯ ಹಾಗೂ ಜನಸಾಮಾನ್ಯರಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಸಲುವಾಗಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಸಮಿತಿಯ ನಿಕಟಪೂರ್ವ ಅಧ್ಯಕ್ಷ ಡಾ. ಜೆ. ಸೋಮಣ್ಣ ಸಮಿತಿಯ ನೂತನ ಅಧ್ಯಕ್ಷ ಫಿಲಿಪ್‍ವಾಸ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು. ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷ ಫಿಲಿಪ್‍ವಾಸ್ ಮಾತನಾಡಿ, ಜಿಲ್ಲೆಯಲ್ಲಿ ವಿಜ್ಞಾನ ಚಳುವಳಿ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.