ಮಡಿಕೇರಿ, ಏ. 2: ಶಿಶು ಅಭಿವೃದ್ಧಿ ಯೋಜನೆ, ಮಡಿಕೇರಿ ತಾಲೂಕು ವ್ಯಾಪ್ತಿಗೆ ಒಳಪಟ್ಟ 4 ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು 13 ಸಹಾಯಕಿ ಹುದ್ದೆ ಖಾಲಿ ಇದ್ದು, ಈ ಖಾಲಿ ಹುದ್ದೆಗಳಿಗೆ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ತಾ. 28 ಕೊನೆಯ ದಿನವಾಗಿದೆ. ಹೆಚ್ಚಿನ ವಿವರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಡಿಕೇರಿ ದೂರವಾಣಿ ಸಂಖ್ಯೆ: 08272-228197 ನ್ನು ಸಂಪರ್ಕಿಸಬಹುದು.

ಹಮ್ಮಿಯಾಲ ಗ್ರಾಮದ ಹಮ್ಮಿಯಾಲ ಅಂಗನವಾಡಿ ಕೇಂದ್ರಕ್ಕೆ ಒಂದು ಹುದ್ದೆ, ಹೊದ್ದೂರು ಗ್ರಾಮದ ಪಾಲೇಮಾಡು ಅಂಗನವಾಡಿ ಕೇಂದ್ರಕ್ಕೆ ಒಂದು ಹುದ್ದೆ, ಎಮ್ಮೆಮಾಡು-2 ಅಂಗನವಾಡಿ ಕೇಂದ್ರಕ್ಕೆ ಒಂದು ಹುದ್ದೆ, ತಣ್ಣಿಮಾನಿ ಗ್ರಾಮದ ತಲಕಾವೇರಿ ಅಂಗನವಾಡಿ ಕೇಂದ್ರಕ್ಕೆ ಒಂದು ಕಾರ್ಯಕರ್ತೆ ಹುದ್ದೆ ಖಾಲಿ ಇದೆ.

ಅಂಗನವಾಡಿ ಸಹಾಯಕಿ ಹುದ್ದೆಯು ನರಿಯಂದಡ ಗ್ರಾಮದ ಎಡಪಾಲ-1, ಹೊದವಾಡ-1, ಕೋಕೆರಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಒಂದು ಹುದ್ದೆ, ಕೊಟ್ಟಮುಡಿ ಅಂಗನವಾಡಿ ಕೇಂದ್ರಕ್ಕೆ ಒಂದು ಹುದ್ದೆ, ಎಮ್ಮೆಮಾಡು ಮಾಂದಲ್ ಅಂಗನವಾಡಿ ಕೇಂದ್ರಕ್ಕೆ ಒಂದು, ಬೇಂಗೂರು ಎಸ್.ಸಿ. ಕಾಲೋನಿ ಅಂಗನವಾಡಿ ಕೇಂದ್ರಕ್ಕೆ ಒಂದು ಹುದ್ದೆ, ನಗರ ಸಭೆಯ ಆರ್ಮಿ ಕ್ಯಾಂಟಿನ್‍ನ ಅಂಗನವಾಡಿ ಕೇಂದ್ರಕ್ಕೆ ಒಂದು ಹುದ್ದೆ, ಯವಕಪಾಡಿ ಗ್ರಾಮದ ಕಬ್ಬಿನಕಾಡು ಅಂಗನವಾಡಿ ಕೇಂದ್ರಕ್ಕೆ ಒಂದು ಹುದ್ದೆ, ಕೊಳಗದಾಳು ಗ್ರಾಮದ ಪಾಕ ಅಂಗನವಾಡಿ ಕೇಂದ್ರಕ್ಕೆ ಒಂದು ಹುದ್ದೆ, ಗಾಳಿಬೀಡು ಗ್ರಾಮದ ವಣಚಲು ಕೇಂದ್ರಕ್ಕೆ ಒಂದು ಸಹಾಯಕಿ ಹುದ್ದೆ, ಮರಗೋಡು ಬಕ್ಕದ ಕೇಂದ್ರಕ್ಕೆ ಒಂದು ಹುದ್ದೆ, ಪೆರಾಜೆ ಗ್ರಾಮದ ಇಂದಿರಾ ಆವಾಜ್‍ನ ಕೇಂದ್ರಕ್ಕೆ ಒಂದು ಸಹಾಯಕಿ ಹುದ್ದೆ ಖಾಲಿ ಇದೆ.