ನಾಪೋಕ್ಲು, ಏ.3: ಇಲ್ಲಿನ ಸಮೀಪದ ಕಕ್ಕುಂದ ಕಾಡು

ಶ್ರೀ ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಉತ್ಸವವವು ಇದೇ ತಾ. 8 ಮತ್ತು 9 ರಂದು ನಡೆಯಲಿದೆ.

ತಾ. 8 ರಂದು ಬೆಳಿಗ್ಗೆ ಪಂಚಾಮೃಥಭಿಷೇಕ. ಸಂಜೆ 6 ಗಂಟೆಗೆ ಧ್ವಜಾರೋಹಣ, ರಾತ್ರಿ 8 ಗಂಟೆಗೆ ದೀಪಾರಾಧನೆ, ದೇವರ ಬಲಿ, ನೃತ್ಯ, ಮಹಾಪೂಜೆ ತಾ. 9 ಎಂದು ದೇವರ ದರ್ಶನ ನೃತ್ಯ ಹಾಗೂ ದೇವರಿಗೆ ವಿಶೇಷ ಸೇವೆಗಳು ಜರುಗಿ ಮಧ್ಯಾಹ್ನ ಮಹಾಪೂಜೆ, ನೆರಪು (ಪಟ್ಟಣಿ) ದೇವರ ಬಲಿ, ಹಾಗೂ ಅನ್ನಸಂರ್ತಣೆ ಜರುಗಲಿದೆ. ಸಂಜೆ ದೇವರ ಮೂರ್ತಿ ಉತ್ಸವವನ್ನು ವಾದ್ಯ ಗೋಷ್ಠಿಗಳೊಂದಿಗೆ ಸ್ಥಳೀಯ ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಸಾಗಿ ಪವಿತ್ರ ಕಾವೇರಿ ನದಿಯಲ್ಲಿ ತೀರ್ಥ ಸ್ಥಾನ ಮಾಡಿ ದೇವಾಲಯಕ್ಕ್ಕೆ ಹಿಂತಿರುಗಿ ದೇವರ ನೃತ್ಯ, ವಸಂತ ಪೂಜೆ, ಪ್ರಸಾದ ವಿತರಣೆಯೊಂದಿಗೆ ಹಬ್ಬಕ್ಕೆ ತೆರೆ ಬೀಳಲಿದೆ.