ಗೋಣಿಕೊಪ್ಪಲು, ಏ. 2: ಕೊಡಗು-ಕೇರಳ ಗಡಿಯಿಂದ ಹುಟ್ಟಿ ಕೇರಳಕ್ಕೆ ಹರಿಯುವ ವರದಾಯಿನಿ ನದಿಯು ಕೊಡಗಿನ ಕಾವೇರಿ ನದಿಯ ಸೋದÀರಿ ಎಂಬದು ಪೌರಾಣಿಕ ಹಿನ್ನೆಲೆಯಿಂದ ಅರಿವಾಗಿದೆ ಎಂದು ಮಾನಂದವಾಡಿಯ ವರಯಾಲ್ ಶ್ರೀ ಕುರಿಕ್ಕಿಲಾಲ್ ವರದಾಯಿನಿ ನಾಗಯಕ್ಷಿ ದೇವಸ್ಥಾನ ಟ್ರಸ್ಟಿ ಬಾಬು ತಿಳಿಸಿದ್ದಾರೆ.ಪುರಾಣದಲ್ಲಿ ಮಹರ್ಷಿಯೊಬ್ಬರು ನಾಗಯಕ್ಷಿ ಕ್ಷೇತ್ರಕ್ಕೆ ಬಂದು, ಬಲಿ ಕರ್ಮ ನಡೆಸಲು ಗಂಗೆಯನ್ನು ಪ್ರಾರ್ಥಿಸುವಾಗ ಕಾವೇರಿಯ ಒಂದು ಭಾಗವನ್ನು ಸೋದÀರಿಯಾಗಿ ಪಡೆದಿದ್ದ. ಇದರಿಂದಾಗಿ ಪೌರಾಣಿಕ ಹಾಗೂ ಧಾರ್ಮಿಕವಾಗಿ ಕೊಡಗಿನ ಕಾವೇರಿ ಹಾಗೂ

(ಮೊದಲ ಪುಟದಿಂದ) ವರದಾಯಿನಿ ನದಿಗಳಿಗೆ ಸೋದÀರ ಸಂಬಂಧವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈ ನದಿಯ ತಪ್ಪಲಿನಲ್ಲಿರುವ ನಾಗಯಕ್ಷಿ ದೇವಾಲಯದಲ್ಲಿ ವಿಶೇಷವಾಗಿ ಸರ್ಪದೋಷ ನಿವಾರಣೆಗೆ ಅವಕಾಶವಿದೆ ಎಂದರು. ಬೆಳೆಗಾರ ಮಲ್ಲೇಂಗಡ ರಾಜೇಂದ್ರ ಮಾತನಾಡಿ, ಈ ಕ್ಷೇತ್ರದಿಂದ ನಾಗದೋಷ ನಿವಾರಣೆಗೆ ಉತ್ತಮ ಫಲ ಸಿಗಲಿದೆ. ಸಣ್ಣ ಖರ್ಚಿನಲ್ಲಿ ದೋಷ ನಿವಾರಣೆಗೆ ಕೊಡಗಿನ ಜನತೆ ಇಲ್ಲಿನ ಕ್ಷೇತ್ರಕ್ಕೆ ಬೇಟಿ ಕೊಡಬೇಕು ಎಂದರು.