ಮಡಿಕೇರಿ, ಏ. 2: ಜಿಲ್ಲೆಯ ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಬರಪೀಡಿತ ತಾಲೂಕುಗಳಲ್ಲಿ ಪ್ರವಾಸ ಮಾಡಿ ಬರ ಪರಿಹಾರ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳಲು ಮಡಿಕೇರಿ, ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳಲ್ಲಿ ಪಂಚಾಯಿತಿವಾರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲು ಇತ್ತೀಚೆಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಅದರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. 2016-17ನೇ ಸಾಲಿನ ಬರಪರಿಹಾರಕ್ಕೆ ಸಂಬಂಧಿಸಿದ ತಾಲೂಕುವಾರು ಮತ್ತು ಪಂಚಾಯಿತಿವಾರು ನೇಮಕ ಮಾಡಿದ ನೋಡೆಲ್ ಅಧಿಕಾರಿಗಳ ಪಟ್ಟಿ ಇಂತಿದೆ.

ಮಡಿಕೇರಿ ತಾಲೂಕು: ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಟಿ.ಎನ್.- ಬಲ್ಲಮಾವಟಿ, ಎಮ್ಮೆಮಾಡು, ಹೊದ್ದೂರು. (9480695260), ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಸನ್ನ ಕೆ.ಎ. ಬೆಟ್ಟಗೇರಿ ಮತ್ತು ಮದೆ (9448647276), ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೋಹನ್-ಕೆ.ನಿಡುಗಣೆ, ಕಡಗದಾಳು, ಮಕ್ಕಂದೂರು (94808355888), ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ಬೇಂಗೂರು, ಕುಂಜಿಲ, ಪೆರಾಜೆ (9480843155), ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್ ಎ.ಸಿ. ಭಾಗಮಂಡಲ, ಅಯ್ಯಂಗೇರಿ ಮತ್ತು ಕರಿಕೆ (8277931903), ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ ಚೆಂಬು, ಕಾಂತೂರು-ಮೂರ್ನಾಡು, ಸಂಪಾಜೆ (9945303149), ಮಡಿಕೇರಿ. ಪಂ.ರಾ.ಇ.ಉಪ. ವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರ ಇಬ್ರಾಹಿಂ ಕೆ.ಎ. ಹಾಕತ್ತೂರು, ಮೇಕೇರಿ, ಪಾರಾಣೆ (9480869103), ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಕುಂದಚೇರಿ, ಗಾಳಿಬೀಡು (9686406975), ತಾ.ಪಂ. (ಗ್ರಾಮೀಣ ಉದ್ಯೋಗ) ಸಹಾಯಕ ನಿರ್ದೇಶಕ ಟಿ.ಎನ್. ಜೀವನ್ ಕುಮಾರ್ ಮರಗೋಡು, ಹೊಸ್ಕೇರಿ (9845567698), ಮಡಿಕೇರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಎ.ಎಂ., ನಾಪೋಕ್ಲು ಮತ್ತು ನರಿಯಂದಡ ಗ್ರಾ.ಪಂ. (9845567698).

ವೀರಾಜಪೇಟೆ ತಾಲೂಕು: ವೀರಾಜಪೇಟೆ ಲೋಕೋಪಯೋಗಿ ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಶ್ ಅಮ್ಮತ್ತಿ ಮತ್ತು ಕಾರ್ಮಾಡು (9448504368), ಪೊನ್ನಂಪೇಟೆ ಪಿಆರ್‍ಇಡಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಟಿ.ಪಿ. ಪೂಣಚ್ಚ ಬಾಳೆಲೆ, ಮಾಯಮುಡಿ ಮತ್ತು ಕಾನೂರು (9480869113), ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಕದನೂರು ಮತ್ತು ಕೆದಮುಳ್ಳೂರು (9480695262), ಗೋಣಿಕೊಪ್ಪಲು ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜು ಅರುವತ್ತೋಕ್ಲು ಮತ್ತು ಬಿ. ಶೆಟ್ಟಿಗೇರಿ (9448448481), ಪೊನ್ನಂಪೇಟೆ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಚಂದ್ರಶೇಖರ್ ತಿತಿಮತಿ, ಮಾಲ್ದಾರೆ ಮತ್ತು ಸಿದ್ದಾಪುರ (944817369), ಪೊನ್ನಂಪೇಟೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ. ಮಹದೇವಸ್ವಾಮಿ ಚೆನ್ನಯ್ಯನಕೋಟೆ ಮತ್ತು ಪಾಲಿಬೆಟ್ಟ (9480835590), ಪೊನ್ನಂಪೇಟೆ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರಿಯಾ ಗಣಪತಿ ಹೊಸೂರು ಗ್ರಾ.ಪಂ. (9480823044), ವೀರಾಜಪೇಟೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶಾಂತೇಶ್ ಬೇಟೋಳಿ, ಆರ್ಜಿ ಮತ್ತು ಬಿಳುಗುಂದ ಗ್ರಾ.ಪಂ. (9449081343), ಪೊನ್ನಂಪೇಟೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಅಭಿಯಂತರ ಓಬಯ್ಯ ಕೆ. ಬಾಡಗ, ನಿಟ್ಟೂರು ಮತ್ತು ನಾಲ್ಕೇರಿ ಗ್ರಾ.ಪಂ (9480843157), ಪೊನ್ನಂಪೇಟೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎ.ಬಿ. ತಮ್ಮಯ್ಯ ಚೆಂಬೆಬೆಳ್ಳೂರು, ಹಾಲುಗುಂದ ಮತ್ತು ಕಣ್ಣಂಗಾಲ (9448720650), ಪೊನ್ನಂಪೇಟೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಾಲಿ ಕಾಕೋಟುಪರಂಬು, ಪೊನ್ನಂಪೇಟೆ ಗ್ರಾ.ಪಂ. (9902358490), ವೀರಾಜಪೇಟೆ ಸಹಾಯಕ ಕೃಷಿ ಅಧಿಕಾರಿ ಎ.ಜಿ. ರೀನಾ ಗೋಣಿಕೊಪ್ಪ, ಹಾತೂರು ಮತ್ತು ಬಿಟ್ಟಂಗಾಲ ಗ್ರಾ.ಪಂ. (8277931915), ಪೊನ್ನಂಪೇಟೆ ತಾಲೂಕು ಕಾರ್ಮಿಕ ಅಧಿಕಾರಿ ವನಜಾಕ್ಷಿ ಬಲ್ಯಮಂಡೂರು ಮತ್ತು ಹುದಿಕೇರಿ ಗ್ರಾ.ಪಂ. (9964902954), ಪೊನ್ನಂಪೇಟೆ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಹೆಚ್.ಜಿ. ಮಂಜುನಾಥ್ ಕುಟ್ಟ, ಬಿರುನಾಣಿ ಮತ್ತು ಶ್ರೀಮಂಗಲ ಗ್ರಾ.ಪಂ. (8105245211), ಪೊನ್ನಂಪೇಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎ.ಪಿ. ಲೀಲಾವತಿ ಕಿರುಗೂರು ಮತ್ತು ದೇವರಪುರ (9483417519) ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮಣಯ್ಯ ಟಿ. ಶೆಟ್ಟಿಗೇರಿ ಗ್ರಾ.ಪಂ. (9731033727).

ಸೋಮವಾರಪೇಟೆ ತಾಲೂಕು: ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ್ ಹೆಚ್.ಎಸ್. ಬ್ಯಾಡಗೊಟ್ಟ, ಶನಿವಾರಸಂತೆ, ಕೊಡ್ಲಿಪೇಟೆ ಮತ್ತು ಬೆಸ್ಸೂರು ಗ್ರಾ.ಪಂ. (7259005544), ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ ಶಾಂತಳ್ಳಿ, ತೋಳೂರು ಶೆಟ್ಟಳ್ಳಿ ಮತ್ತು ಬೆಟ್ಟದಳ್ಳಿ (9480695261), ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ (ಗ್ರೇಡ್-2) ರಾಮೇಗೌಡ ಗರ್ವಾಲೆ, ಕಿರಗಂದೂರು, ಮಾದಾಪುರ ಮತ್ತು ಹರದೂರು (9480843156), ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮುತ್ತಪ್ಪ ಗಣಗೂರು, ನೇರುಗಳಲೆ, ದೊಡ್ಡಮಳ್ತೆ ಮತ್ತು ಹೆಬ್ಬಾಲೆ ಗ್ರಾ.ಪಂ. (7026426845), ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚೆಟ್ಟಿಯಪ್ಪ ನೆಲ್ಲಿಹುದಿಕೇರಿ, ನಂಜರಾಯಪಟ್ಟಣ, ವಾಲ್ನೂರು-ತ್ಯಾಗತ್ತೂರು ಮತ್ತು ಗುಡ್ಡೆಹೊಸೂರು ಗ್ರಾ.ಪಂ. (9901668895), ಕೂಡಿಗೆ ಡಯಟ್ ಪ್ರಾಂಶುಪಾಲ ಎಸ್. ದೊಡ್ಡಮಲ್ಲಪ್ಪ ದುಂಡಳ್ಳಿ, ಹಂಡ್ಲಿ, ಗೌಡಳ್ಳಿ ಮತ್ತು ನಿಡ್ತ ಗ್ರಾ.ಪಂ. (9448999373), ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರ ಜಯರಾಮ್ ಶಿರಂಗಾಲ, ತೊರೆನೂರು, ಆಲೂರು-ಸಿದ್ದಾಪುರ ಮತ್ತು ಕೂಡಿಗೆ (9480869108), ತಾ.ಪಂ.(ಗ್ರಾಮೀಣ ಉದ್ಯೋಗ) ಸಹಾಯಕ ನಿರ್ದೇಶಕ ಸುನಿಲ್ ಕುಮಾರ್ ಡಿ.ಬಿ. ಕೂಡುಮಂಗಳೂರು, ಮುಳ್ಳುಸೋಗೆ, ಕಂಬಿಬಾಣೆ ಮತ್ತು 7ನೇ ಹೊಸಕೋಟೆ (9480869107), ಸೋಮವಾರಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಗದೀಶ್ ಕೆದಕಲ್, ಸುಂಟಿಕೊಪ್ಪ, ಕೊಡಗರಹಳ್ಳಿ, ಚೆಟ್ಟಳ್ಳಿ ಮತ್ತು ಐಗೂರು ಗ್ರಾ.ಪಂ. (9980860605), ಸೋಮವಾರಪೇಟೆ ಸುಂಟಿಕೊಪ್ಪ ಸಹಾಯಕ ಕೃಷಿ ಅಧಿಕಾರಿ ಬೋಪಯ್ಯ ನಾಕೂರು-ಶಿರಂಗಾಲ ಗ್ರಾ.ಪಂ. (7259005551), ಸೋಮವಾರಪೇಟೆ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಪಿ. ಚೌಡ್ಲು, ಬೇಳೂರು ಮತ್ತು ಹಾನಗಲ್ಲು ಗ್ರಾ.ಪಂ. (9480869105) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಆದೇಶ ಹೊರಡಿಸಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಆಯಾಯ ತಾಲೂಕಿನ ಬರಪೀಡಿತ ಪ್ರದೇಶಕ್ಕೆ ಪ್ರವಾಸ ಮಾಡಿ ಪರಿಹಾರ ಕಾರ್ಯಗಳ ಮೇಲುಸ್ತುವಾರಿ ನೋಡಿಕೊಳ್ಳುವದು. ಬರ ಪರಿಹಾರ ಸಂಬಂಧ ಕುಡಿಯುವ ನೀರಿನ ಸಮಸ್ಯೆ, ಮೇವು ಲಭ್ಯತೆ, ಬೆಳೆಹಾನಿ ಮತ್ತು ರೈತರ ಆತ್ಮ ಹತ್ಯೆಗೆ ಸಂಬಂಧಿಸಿದಂತೆ ಪರಿಶೀಲಿಸಿ ಪ್ರತೀ ಶನಿವಾರ ತಾಲೂಕಿನ ತಹಶೀಲ್ದಾರರು ನಡೆಸುವ ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ತಹಶೀಲ್ದಾರರು ಪ್ರತೀ ಸೋಮವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳೊಂದಿಗೆ ಮಾಹಿತಿಯೊಂದಿಗೆ ಸಭೆಗೆ ಹಾಜರಾಗುವದು. ಕಾರ್ಯಪಾಲಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮಡಿಕೇರಿ ಇವರು ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಬರಪರಿಹಾರ ಕಾಮಗಾರಿಗಳ ಪಟ್ಟಿಯನ್ನು ಪರಿಶೀಲನೆ ನೀಡಲು ಕ್ರಮವಹಿಸುವದು, ಉಪ ನಿರ್ದೇಶಕರು, ಪಶುಪಾಲನೆ, ಮಡಿಕೇರಿ ಇವರು ರೈತರಿಗೆ ಮೇವಿನ ಕಿಟ್ ವಿತರಿಸಿದ ರೈತರ ಪಟ್ಟಿ ನೀಡಲು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.