ಸಿದ್ದಾಪುರ, ಏ. 3: ಮಾಲ್ದಾರೆ ಸಮೀಪದ ತಟ್ಟಳ್ಳಿ ದಿಡ್ಡಳ್ಳಿ ಹಾಡಿಗಳಿಗೆ ವಿದೇಶಿಯರು ಭೇಟಿ ನೀಡಿ ಮಾಹಿತಿ ಪಡೆದರು.

ಚೀನಾ ಹಾಗೂ ಇಂಡೋನೇಷಿಯದ ತಂಡ ದಿಡ್ಡಳ್ಳಿ ಹಾಗೂ ತಟ್ಟಳ್ಳಿ ಹಾಡಿಗೆ ಭೇಟಿ ನೀಡಿ ಕಾಡು ಪ್ರಾಣಿಗಳ ಚಲನವಲನ ಹಾಗೂ ಹಾಡಿ ನಿವಾಸಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತಂಡದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳ ಪ್ರತಿನಿಧಿಗಳು ಇದ್ದರು.