ಮಡಿಕೇರಿ, ಏ. 3: ಮಕ್ಕಳಿಗೆ ಉತ್ತಮ ಶಿಕ್ಷಣದ ಗುರಿಯೊಂದಿಗೆ 2017-18ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಜನರಲ್ ತಿಮ್ಮಯ್ಯ ಪಿ.ಯು.ಸಿ ಕಾಲೇಜು ಪ್ರಾರಂಭವಾಗಲಿದೆ. ಕೊಡಗು ಜಮೀನುದಾರರ ಸಂಘದ (ಕೊಡಗು ಪ್ರೆಸ್) ಜಾಗದಲ್ಲಿ ಮಡಿಕೇರಿ ಕೊಡವ ಸಮಾಜದ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜು ಆರಂಭವಾಗು ವದು ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್. ದೇವಯ್ಯ ಸುಳಿವು ನೀಡಿದ್ದಾರೆ.

ಪ್ರಸಕ್ತ ಶ್ರೀ ಓಂಕಾರೇಶ್ವರ ದೇವಾಲಯ ಪಕ್ಕದಲ್ಲಿ ಜನರಲ್ ತಿಮ್ಮಯ್ಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ನಡೆಯುತ್ತಿದ್ದು, ಇಲ್ಲಿನ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಗುಣಮಟ್ಟದ ವಿದ್ಯೆ ಕೊಡುವ ದೂರ ದೃಷ್ಟಿಯಿಂದ ಪದವಿ ಪೂರ್ವ ಕಾಲೇಜು ಆರಂಭಿಸಲು ಕೊಡವ ಸಮಾಜ ಆಡಳಿತ ಮಂಡಳಿ ನಿರ್ಧರಿಸಿರುವ ದಾಗಿ ‘ಶಕ್ತಿ’ ಸಂದರ್ಶನ ದಲ್ಲಿ ಅವರು ತಿಳಿಸಿದರು.

ಈಗಾಗಲೇ ಸಂಬಂಧಿ ಸಿದ ಕಟ್ಟಡದಲ್ಲಿ ಮುಂದಿನ ಜೂನ್‍ನಿಂದ ಪ್ರಾರಂಭಗೊಳ್ಳಲಿರುವ ಶಿಕ್ಷಣಕ್ಕೆ ಮೂಲಭೂತ ಸೌಲಭ್ಯ ದೊಂದಿಗೆ ಅಗತ್ಯ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ವಿವರಿಸಿದ ದೇವಯ್ಯ ಅವರು, ಮಡಿಕೇರಿ ಕೊಡವ ಸಮಾಜದ ಪ್ರಸಕ್ತ ಆಡಳಿತ ಮಂಡಳಿಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಹಾಲೀ ಇರುವ ಮಡಿಕೇರಿ ಕೊಡವ ಸಮಾಜದ ಕೆಳಗಿನ ಕಟ್ಟಡವನ್ನು ಅಂದಾಜು ರೂ. 25 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಲಾಗು ತ್ತಿದ್ದು, ಸಭಾಂಗಣಕ್ಕೆ ನೆಲಹಾಸು ಸಹಿತ ಶುಭ ಸಮಾರಂಭಗಳಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ಆಡಳಿತ ಮಂಡಳಿ ಗಮನ ಹರಿಸಿರುವದಾಗಿ ನುಡಿದರು. ನೂತನವಾಗಿ ಪುರುಷರು ಮತ್ತು ಮಹಿಳೆಯರಿಗೆ ಅನುಕೂಲ ವಾಗುವಂತೆ ಶೌಚಾಲಯಗಳನ್ನು ಪ್ರತ್ಯೇಕ ನಿರ್ಮಿಸುತ್ತಿದ್ದು, ಸಮಾರಂಭ ಗಳಲ್ಲಿ ಮಳೆಯಿಂದ ತೊಂದರೆಯಾಗ ದಂತೆ ಕಟ್ಟಡದ ಹೊರಾಂಗಣಕ್ಕೆ ಮೇಲ್ಚಾವಣಿ ಸಹಿತ ಅಂಗಳಕ್ಕೆ ಡಾಮರೀಕರಣ ಮಾಡಲಾಗುತ್ತಿದೆ ಎಂದರು.

ಸ್ಮಶಾನಕ್ಕೆ ಕಾಯಕಲ್ಪ: ನಗರದ ಮೈಸೂರು ರಸ್ತೆಗೆ ಹೊಂದಿಕೊಂಡಂತೆ ಕೊಡವ ಸಮಾಜದ ಸ್ಮಶಾನಕ್ಕೆ ಕಾಯಕಲ್ಪ ನೀಡಲಾಗುತ್ತಿದ್ದು, ಅಲ್ಲಿನ ವಿಶಾಲ 61 ಸೆಂಟ್ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅಗತ್ಯ ದಹನ ಕೇಂದ್ರ ರೂಪಿಸಿ, ಉಳಿದ ಪ್ರದೇಶವನ್ನು ಜನಪರ ಚಟುವಟಿಕೆಗೆ ಬಳಸಿ ಕೊಳ್ಳಲು ಯೋಜನೆ ರೂಪಿಸಲಾಗು ತ್ತಿದೆ ಎಂದು ಮಾಹಿತಿಯಿತ್ತರು.

ಆಟದ ಮೈದಾನ: ಜನರಲ್ ತಿಮ್ಮಯ್ಯ ಶಾಲೆಯ ಮಕ್ಕಳಿಗೆ ಉತ್ತಮ ಆಟದ ಮೈದಾನವನ್ನು ಕೂಡ ಅಲ್ಲಿ ಪ್ರತ್ಯೇಕವಾಗಿ ರೂಪಿಸಿ, ಈಗ ಎದುರಾಗಿರುವ ಕ್ರೀಡಾಂಗಣದ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಲು ಆಡಳಿತ ಮಂಡಳಿ ಮುಂದಾಗಿರುವ ದಾಗಿಯೂ ಅವರು ತಿಳಿಸಿದರು.

ಸಾಂಸ್ಕøತಿಕ ಕೇಂದ್ರ: ಇನ್ನು ವಿದ್ಯಾರ್ಥಿಗಳು ಹಾಗೂ ಜನಾಂಗದ ಶ್ರೇಯೋಭಿವೃದ್ಧಿಯನ್ನು ಗಮನದಲ್ಲಿ ಇರಿಸಿಕೊಂಡು ಕೊಡವ ಸಾಂಸ್ಕøತಿಕ ಕೇಂದ್ರ ಹಾಗೂ ಸಮುದಾಯ ಭವನ ನಿರ್ಮಿಸಲು ಕ್ರಿಯಾ ಯೋಜನೆ ಯೊಂದಿಗೆ ನೀಲನಕ್ಷೆ ತಯಾರಿಸುತ್ತಿ ರುವದಾಗಿ ವಿವರಿಸಿದ ಅಧ್ಯಕ್ಷರು, ರೂ. 10 ಕೋಟಿ ವೆಚ್ಚದ ಈ ಕೊಡವ ಸಾಂಸ್ಕøತಿಕ ಕೇಂದ್ರಕ್ಕೆ ಸರಕಾರ, ಜನಪ್ರತಿನಿಧಿಗಳು ಹಾಗೂ ದಾನಿಗಳ ನೆರವು ಪಡೆಯುವ ಉದ್ದೇಶವಿದೆ ಎಂದರು.

ಈಗಾಗಲೇ ರುದ್ರಭೂಮಿ ಜಾಗದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ.ಸಿ. ನಾಣಯ್ಯ ಅವರು ಈ ಹಿಂದೆ ಒದಗಿಸಿರುವ ರೂ. 2 ಲಕ್ಷ ಅನುದಾನವಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ತಮ್ಮ ಅನುದಾನದಡಿ ರೂ. 10.50 ಲಕ್ಷ ಕಲ್ಪಿಸಲಿರುವರೆಂದು ದೇವಯ್ಯ ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಮಡಿಕೇರಿ ಕೊಡವ ಸಮಾಜವು ಜನರಲ್ ತಿಮ್ಮಯ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳ ಸಹಿತ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಜೀವನ ವಿಕಾಸಕ್ಕೆ ಒತ್ತು ನೀಡುತ್ತಾ, ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಿರುವದಾಗಿ ಅವರು ಅಭಿಪ್ರಾಯ ಹಂಚಿಕೊಂಡರು.