ಗೋಣಿಕೊಪ್ಪಲು, ಏ. 4: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ 126 ನೇ ಜನ್ಮದಿನಚರಣೆ ಅಂಗವಾಗಿ ತಾ. 16 ರಂದು ಗೋಣಿಕೊಪ್ಪದಲ್ಲಿ ದಲಿತರಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ತಿಳಿಸಿದ್ದಾರೆ.

ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂದು 11.30 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸ ಲಾಗುವದು ಎಂದು ಸುದ್ದಿ ಗೋಷ್ಠಿಯಲ್ಲಿ ಹೇಳಿದರು.

ಪ್ರಗತಿಪರ ಚಿಂತಕರು, ಸಮಾಜ ಸೇವಕರು, ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ ಮಾಡಲಾಗುವದು. ವಿಚಾರವಾದಿಗಳು ಹಾಗೂ ಜನಪ್ರತಿನಿಧಿಗಳ ಸಲಹೆಯಂತೆ ದಲಿತರ ಬೆಳವಣಿಗೆ ಬಗ್ಗೆ ಚರ್ಚಿಸಲಾಗುವದು ಎಂದು ತಿಳಿಸಿದರು.

ಡಿಎಸ್‍ಎಸ್ ಆಯೋಜನಾ ಸಂಚಾಲಕ ಸಿಂಗಿ ಸತೀಶ್ ಮಾತನಾಡಿ, ಪಾಲ್ಗೊಳ್ಳುವವರಿಗೆ ಸಾಂಸ್ಕøತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸಲಾಗುವದು. ವಯೋಮಿತಿಗೆ ಅನುಗುಣವಾಗಿ ಸ್ಪರ್ಧೆಗಳನ್ನು ನೀಡಲಾಗುವದು. ಇದಕ್ಕೂ ಮೊದಲು ಆರ್‍ಎಂಸಿ ಆವರಣದಿಂದ ಪಟ್ಟಣಕ್ಕೆ ಮೆರವಣಿಗೆ ಮೂಲಕ ಅಂಬೇಡ್ಕರ್ ಅವರ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಲಾಗುವದು ಎಂದರು.

ಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಹೆಚ್.ಎನ್. ಕುಮಾರ್, ಖಜಾಂಚಿ ಕುಮಾರ್ ಮಹದೇವ್ ಹಾಗೂ ಗ್ರಾಮ ಸಂಚಾಲಕ ಚೆಲುವ ಉಪಸ್ಥಿತರಿದ್ದರು.