ನಾಪೆÇೀಕ್ಲು, ಏ. 4: ಏಪ್ರಿಲ್ 17ರಿಂದ ನಾಪೆÇೀಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ‘ಬಿದ್ದಾಟಂಡ ಕಪ್ ಹಾಕಿ 20017’ ಕ್ಕೆ ಸಕಲ ಸಿದ್ಧತೆಗಳು ಪೂರ್ಣ ಗೊಳ್ಳುತ್ತಿದೆ. 21ನೇ ವರ್ಷದ ಉತ್ಸವದಲ್ಲಿ ಇದೀಗ ಎರಡನೇ ಬಾರಿಗೆ ಹಾಕಿ ಕಲರವಕ್ಕೆ ನಾಪೋಕ್ಲು ಸಜ್ಜುಗೊಳ್ಳುತಿವೆ.ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಎರಡು ಮೈದಾನಗಳು ಮತ್ತು ಪದವಿ ಪೂರ್ವ ಕಾಲೇಜಿನ ಬಳಿಯಿರುವ ಒಂದು ಮೈದಾನ ದುರಸ್ತಿ ಕಾರ್ಯ ಅಂತಿಮ ಹಂತ ತಲುಪಿದೆ. ಈ ಮೂರು ಮೈದಾನಗಳ ನಿರ್ವಹಣೆಗೆ ಸುಮಾರು 16 ಲಕ್ಷ ರೂ. ವೆಚ್ಚವಾಗಲಿದೆ. ಹೆಚ್ಚುವರಿಯಾಗಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನವನ್ನೂ ಬಳಸಿಕೊಳ್ಳಲು ತಯಾರಿ ನಡೆದಿದೆ. ಒಟ್ಟು 1.60 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ.

ಮೊದಲ ಬಾರಿಗೆ ಮೆಟಲ್ ಗ್ಯಾಲರಿ : ಕೊಡವ ಹಾಕಿ ನಮ್ಮೆಯ 21 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ಮೆಟಲ್ ಗ್ಯಾಲರಿ ಅಳವಡಿಸ ಲಾಗುತ್ತಿದ್ದು, ಅದಕ್ಕೆ ನಾಪೆÇೀಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಅದರಂತೆ 2000ನೇ ಇಸವಿಯಲ್ಲಿ ಇದೇ ಮೈದಾನದಲ್ಲಿ ನಡೆದ ಕಲಿಯಂಡ ಕಪ್ ಹಾಕಿ ನಮ್ಮೆಯಲ್ಲಿ ಮೊದಲ ಬಾರಿಗೆ ಮರದ ಗ್ಯಾಲರಿ ಕೂಡ ಆರಂಭವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಮೈದಾನದ ಸುತ್ತ ಗ್ಯಾಲರಿ, ನೆಲ ಹಾಸು, ತಾಂತ್ರಿಕ ವಿಭಾಗ, ಮಾಧ್ಯಮ ವಿಭಾಗ, ಧ್ವನಿ ವರ್ದಕ, ಬೆಳಕು ಸೇರಿದಂತೆ ಸಂಪೂರ್ಣ ವ್ಯವಸ್ಥೆಗಳಿಗೆ 33.50 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಕೊಡಗಿನಲ್ಲಿಯೇ ವಿಶಾಲ ಮೈದಾನ : ಕೊಡಗು ಜಿಲ್ಲೆಯಲ್ಲಿಯೇ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಬೇರೆ ಕ್ರೀಡಾಂಗಣ ಗಳಿಗಿಂತ ಹೆಚ್ಚು ವಿಶಾಲವಾಗಿದೆ. ಆದುದರಿಂದ ಮೈದಾನ ಸುತ್ತಲು ಗ್ಯಾಲರಿ ಅಳವಡಿಕೆ, ವಾಟರ್ ಫ್ರೂಫ್‍ನ 30 ಮಾರಾಟ ಮಳಿಗೆಗಳು ಮೈದಾನವನ್ನು ಅಲಂಕರಿಸಲಿದೆ. ಮೈದಾನದ ಬಲ ಭಾಗದಲ್ಲಿ ಹೋಟೆಲ್, ತಂಪು ಪಾನಿಯಗಳ ಅಂಗಡಿಗಳು ಇರುತ್ತವೆ. ಅಶುಚಿತ್ವತೆ ಉಂಟು ಮಾಡಬಹು ದಾದ ಮಾರಾಟವನ್ನು ಪ್ರತ್ಯೇಕವಾಗಿರಿ ಸುವದರ ಮೂಲಕ ಸ್ವಚ್ಛತೆ ಕಾಪಾಡಲುಹೆಚ್ಚನ ಆದ್ಯತೆ ನೀಡಲಾಗಿದೆ. ಮೈದಾನದ ಪೂರ್ವ ಭಾಗದಲ್ಲಿ ಹರಿಯುವ ಕಾವೇರಿ ನದಿ ತೀರವನ್ನು ಶೇಡ್ ನೆಟ್ ಬಳಸಿ ಸಂಪೂರ್ಣವಾಗಿ ಮುಚ್ಚಿ ಜನ ನದಿಗೆ ಇಳಿಯುವದನ್ನು ಮತ್ತು ನದಿ ನೀರನ್ನು ಕಲುಷಿತಗೊಳಿಸುವದನ್ನು ತಡೆಯಲು ಕ್ರಮಕೈಗೊಳ್ಳಲು ಆಯೋಜಕರು ಮುಂದಾಗಿರುವದು ವಿಶೇಷವಾಗಿದೆ.

ಅನುದಾನ : ಪದವಿ ಪೂರ್ವ ಕಾಲೇಜು ಬಳಿಯ ಮೈದಾನ ದುರಸ್ತಿಗೆ ಸಂಸದ ಪ್ರತಾಪ್ ಸಿಂಹ 30 ಲಕ್ಷ ಮಂಜೂರು ಮಾಡಿದ್ದಾರೆ. ಅದರಲ್ಲಿ ಈಗಾಗಲೇ 20 ಲಕ್ಷ ರೂ. ದೊರೆತಿದೆ. ಅದರಂತೆ ಚೆರಿಯಪರಂಬು ಬಳಿಯ ನೂತನ ಮೈದಾನ ನಿರ್ಮಾಣಕ್ಕೆ 6.50 ಲಕ್ಷ ವೆಚ್ಚವಾಗಲಿದೆ. ಇದಕ್ಕೆ ಜಿಲ್ಲಾ ಪಂಚಾಯಿತಿಯಿಂದ 2 ಲಕ್ಷ ರೂ. ಮತ್ತು ತಡೆಗೋಡೆ ನಿರ್ಮಾಣಕ್ಕೆ 2 ಲಕ್ಷ ರೂ. ಗಳನ್ನು ನೀಡಲಾಗಿದೆ. ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ 5 ಲಕ್ಷ ರೂ.ಗಳನ್ನು ಹಾಕಿ ನಮ್ಮೆಗೆ ಮಂಜೂರು ಮಾಡಿದ್ದಾರೆ. ಅದರೊಂದಿಗೆ ಶಾಸಕ ಕೆ.ಜಿ.ಬೋಪಯ್ಯ, ಎಂ.ಎಲ್.ಸಿ ಸುನಿಲ್ ಸುಬ್ರಮಣಿ ಕೂಡಾ ಹಣ ಮಂಜೂರು ಮಾಡುವದಾಗಿ ಭರವಸೆ ನೀಡಿದ್ದಾರೆ.

ಈ ಹಾಕಿ ನಮ್ಮೆಗೆ ಹಾಕಿ ಇಂಡಿಯಾ, ಹಾಕಿ ಕರ್ನಾಟಕ, ಹಾಕಿ ಕೊಡಗು ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಲಿದೆ. ಅದರೊಂದಿಗೆ ಅಂಪೈರ್ ಅಸೋಸಿಯೇಶನ್ ಕೂಡ ಸಹಕಾರ ನೀಡುತ್ತಿದ್ದು, ಅದರ ಅಧ್ಯಕ್ಷ ಕಾಟುಮಣಿಯಂಡ ಉಮೇಶ್ ಹಾಕಿ ನಮ್ಮೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಈ ಹಾಕಿ ನಮ್ಮೆಯಲ್ಲಿ ಅಂತರಾಷ್ಟ್ರೀಯ ಹಾಕಿ ಕ್ರೀಡಾಕೂಟದಲ್ಲಿ ಪಾಲಿಸುವ ನಿಯಮಗಳನ್ನೇ ಪಾಲಿಸಲಾಗುತ್ತಿದೆ. ಈಗಾಗಲೇ 260 ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, 300 ಕುಟುಂಬಗಳ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. 1.60 ಕೋಟಿ ರೂ. ವೆಚ್ಚವಾಗಲಿದೆ. 20 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಬಿದ್ದಾಟಂಡ ಹಾಕಿ ನಮ್ಮೆಯ ತಾಂತ್ರಿಕ ನಿರ್ದೇಶಕ ಬಿ.ಎಸ್.ತಮ್ಮಯ್ಯ ಹಾಗೂ ಮೈದಾನ ಸಮಿತಿ ಅಧ್ಯಕ್ಷ ಬಿ.ಬಿ.ಬೆಳ್ಯಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿದ್ದಾಟಂಡ ಜೀವನ್ ಕಾರ್ಯಪ್ಪ, ನಂಜಪ್ಪ, ಪಾಪಾ ಮುದ್ದಯ್ಯ, ಶೀಜಾ ಚಿಟ್ಟಿಯಪ್ಪ, ಹರ್ಷ ನಾಣಯ್ಯ, ವಿವೇಕ್, ಸಂಪತ್ ಇದ್ದರು.