ಸಿದ್ದಾಪುರ, ಏ.4: ಮೂರ್ನಾಡಿನ ಕೊಡಗು ಸ್ಪೋಟ್ರ್ಸ್ ಕ್ಲಬ್ ಮೈದಾನದಲ್ಲಿ ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ಇಂದು ಮತ್ತು ನಾಳೆ ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟ ನಡೆಯಲಿದೆ ಎಂದು ಸಂಘದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಅಂದಾಯಿ ತಿಳಿಸಿದ್ದಾರೆ

ಜಿಲ್ಲೆಯ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಂದ್ಯಾಟಕ್ಕೆ ಜಿಲ್ಲೆಯ 10 ತಂಡಗಳು ಹೆಸರು ನೋಂದಾಯಿಸಿದ್ದು, ಬಿಡ್ಡಿಂಗ್ ಮೂಲಕ ಆಟಗಾರರನ್ನು ತಂಡಕ್ಕೆ ನೀಡಲಾಗಿದೆ. ಪ್ರತಿ ಪಂದ್ಯಾಟವು 25 ಅಂಕಗಳಿಂದ ಕೂಡಿದ್ದು ಮೂರು ಸುತ್ತಿನ ಪಂದ್ಯಗಳಾಗಿರುತ್ತದೆ ಎಂದು ಮಾಹಿತಿ ನೀಡಿದರು. ಪ್ರಥಮ ಬಹುಮಾನ 40 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 25 ಸಾವಿರ ರೂ. ನಗದು ಮತ್ತು ಟ್ರೋಫಿ, 3 ಮತ್ತು 4ನೇ ಸ್ಥಾನ ಗಳಿಸಿದ ತಂಡಗಳಿಗೆ ತಲಾ 10 ಸಾವಿರ ರೂ. ನಗದು ನೀಡಲಾಗುವದು ಎಂದರು.

ತಾ. 5ರಂದು (ಇಂದು) ಉದ್ಘಾಟನೆ ಸಮಾರಂಭ ಸಂಘದ ಅಧ್ಯಕ್ಷ ಬಲ್ಲಚಂಡ ಗೌತಮ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮೂರ್ನಾಡು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಪುದಿಯೊಕ್ಕಡ ಪೊನ್ನಪ್ಪ ಉದ್ಘಾಟನೆ ಮಾಡಲಿದ್ದಾರೆ, ಮುಖ್ಯ ಅಥಿತಿಗಳಾಗಿ ಕಾಂತೂರು- ಮೂರ್ನಾಡು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪವಿತ್ರ ಪೆಮ್ಮಯ್ಯ, ಸದಸ್ಯ ಸಾದಿಕ್, ನಿವೃತ್ತ ಸೈನಿಕ ಓಮನ್, ಮೂರ್ನಾಡು ಕೆ.ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ದೇವಯ್ಯ, ವiಹಾರಾಷ್ಟ್ರ ಬ್ಯಾಂಕ್ ವ್ಯವಸ್ಥಾಪಕ ರಚನಾ ಪೂವಮ್ಮ, ಸ್ಥಳೀಯರಾದ ಮುಜೀಬ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ತಾ. 6 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.