ಮಡಿಕೇರಿ, ಏ. 4: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವತಿಯಿಂದ ಮಂಗಳೂರು ವಲಯದ ಕೊಡಗು ಕ್ರಿಕೆಟ್ ತಂಡಕ್ಕೆ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. 1.9.2003 ರೊಳಗೆ ಜನಿಸಿದ 14 ವರ್ಷದೊಳಗಿನ ಆಟಗಾರರ ತಂಡಕ್ಕೆ ತಾ. 9 ರಂದು, 1.9.2001 ರೊಳಗೆ ಜನಿಸಿದ 16 ವರ್ಷದೊಳಗಿನ ಆಟಗಾರರ ತಂಡಕ್ಕೆ ತಾ. 13 ರಂದು ಹಾಗೂ 1.9.1999ರೊಳಗೆ ಜನಿಸಿದ 19 ವರ್ಷದೊಳಗಿನ ಆಟಗಾರರ ತಂಡಕ್ಕೆ ತಾ. 12 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯಾಯ ದಿನಾಂಕದಂದು ಬೆಳಿಗ್ಗೆ 9 ಗಂಟೆಗೆ ಮಡಿಕೇರಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಶಾಲಾ ಮೈದಾನ ಹಾಗೂ ಗೋಣಿಕೊಪ್ಪಲಿನ ಕಾಪ್ಸ್ ಶಾಲಾ ಮೈದಾನದಲ್ಲಿ ಆಸಕ್ತರು ವಯಸ್ಸಿನ ದೃಢೀಕರಣ ಪತ್ರದೊಂದಿಗೆ ಹಾಜರಿರುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9980060322 ಅಥವಾ 9480073688 ಸಂಪರ್ಕಿಸುವಂತೆ ವಾಂಡರರ್ಸ್ ಕ್ರಿಕೆಟ್‍ನ ಕಾರ್ಯದರ್ಶಿ ರಘು ಮಾದಪ್ಪ ತಿಳಿಸಿದ್ದಾರೆ.