ಮಡಿಕೇರಿ, ಏ. 4: ಕುಶಾಲನಗರ ಸಮೀಪದ ಗೊಂದಿಬಸವನಹಳಿ ್ಳಯಲ್ಲಿ ಮಳೆಯ ಅಬ್ಬರದಿಂದ ಅಪ್ಪಣ್ಣ ಎಂಬವರ ಮನೆ ಹಾನಿಯಾದ ಘಟನೆ ನಡೆದಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಘಟನೆ ನಡೆದಿದೆ. ಮಳೆಯಿಂದ ವಸ್ತುಗಳು ಹಾನಿಯಾಗಿದ್ದು, ರುಕ್ಮಿಣಿ ಎಂಬವರಿಗೆ ತಲೆ ಭಾಗಕ್ಕೆ ಗಾಯವಾಗಿದೆ.

ಅಪ್ಪಣ್ಣ ಅವರ ಪತ್ನಿ ರುಕ್ಮಿಣಿ ಮಾತನಾಡಿ, ಗುಡುಗು, ಗಾಳಿ ಸೇರಿದ ಮಳೆಯ ಅಬ್ಬರದಿಂದ ಮನೆಗೆ ಹಾನಿ ಸಂಭವಿಸಿದ್ದು, ತಲೆ ಭಾಗಕ್ಕೆ ಗಾಯವಾಗಿದೆ ಎಂದರು.

ಮುಳ್ಳುಸೋಗೆ ಪಂಚಾಯಿತಿ ಸದಸ್ಯ ಜಗದೀಶ್ ಮಾತನಾಡಿ, ಗಾಳಿ ಮಳೆಯಿಂದ ಗೊಂದಿಬಸವನಹಳ್ಳಿಯ ಅಪ್ಪಣ್ಣ ಎಂಬವರ ಮನೆ ಹಾನಿಗೊಳಗಾಗಿದೆ. ಅರಣ್ಯ ಇಲಾಖೆಯವರಿಗೆ ವಿದ್ಯುತ್ ಸಂಪರ್ಕ ಹೊಂದಿರುವ ಮರಗಳನ್ನು ತೆರವುಗೊಳಿಸಿಕೊಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರತಿಫಲ ಮಾತ್ರ ಶೂನ್ಯ. ಇದರಿಂದ ಆಗುವ ಅನಾಹುತಗಳಿಗೆ ಅರಣ್ಯ ಇಲಾಖೆಯೇ ಜವಾಬ್ದಾರಿಯನ್ನು ವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ಮಾತನಾಡಿ, ಗಾಳಿ ಮಳೆಯಿಂದ ಮನೆಯೊಂದು ಹಾನಿಯಾದ ಘಟನೆ ನಡೆದಿದೆ. ಅಂದಾಜು 50 ಸಾವಿಕ್ಕೂ ಹೆಚ್ಚು ಮೌಲ್ಯದಷ್ಟು ವಸ್ತುಗಳು ಹಾನಿಯಾಗಿದೆ. ಸರಕಾರ ಆದಷ್ಟು ಈ ಬಡಕುಟುಂಬಕ್ಕೆ ಪರಿಹಾರ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಕಂದಾಯ ಇಲಾಖೆ ಲೆಕ್ಕಾದಿಕಾರಿ ಗೌತಂ ಹಾಗೂ ಸ್ಥಳೀಯ ನಿವಾಸಿಗಳು ಇದ್ದರು