ಗೋಣಿಕೊಪ್ಪಲು,ಏ.5: ಅಮ್ಮತ್ತಿ ಸಮೀಪ ಕಾವಾಡಿ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವವು ಇಂದು ಕೊಡಿಮರ ನಿಲ್ಲಿಸುವದರೊಂದಿಗೆ ಆರಂಭಗೊಂಡಿದೆ.

ಇಂದಿನಿಂದ ಕಟ್ಟುಪಾಡು ಗಳೊಂದಿಗೆ ಭಕ್ತಿಭಾವದಿಂದ ಅದ್ಧೂರಿಯಾಗಿ ಉತ್ಸವವನ್ನು ನಡೆಸಲಾಗುತ್ತದೆ ಎಂದು ದೇವಸ್ಥಾನದ ಊರುತಕ್ಕರಾದ ನೆಲ್ಲಮಕ್ಕಡ ಗಣಪತಿ, ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಪ್ರಿನ್ಸ್‍ಗಣಪತಿ ತಿಳಿಸಿದ್ದಾರೆ. ತಾ.14ರವರೆಗೆ ವಾರ್ಷಿಕೋತ್ಸವವನ್ನು ನಡೆಸಲಾಗುತ್ತಿದ್ದು, ಪೆÇವ್ವದಿ( ಭಗವತಿ) ಹಾಗೂ ಅಯ್ಯಪ್ಪ ದೇವರುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಸುಮಾರು 800 ವರ್ಷಗಳ ಇತಿಹಾಸವಿದ್ದು ವಿಜೃಂಭಣೆಯಿಂದ ವಾರ್ಷಿಕೋತ್ಸವ ನಡೆಸಲು ತಾ.2 ರಂದು ನಡೆದ ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಮಹಾಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ತಾ.8ರಿಂದ ನಾಲ್ಕು ದಿನ ಬೆಳಿಗ್ಗೆ 10.30 ಗಂಟೆಗೆ ಹಾಗೂ ರಾತ್ರಿ 8.30 ಗಂಟೆಗೆ ಪೂಜೆ ನಡೆಯಲಿದೆ. ದೇವರು ಬನಕ್ಕೆ ತೆರಳುವ ಕಾರ್ಯಕ್ರಮವನ್ನು ತಾ.11 ಕ್ಕೆ ನಿಗಧಿಪಡಿಸಲಾಗಿದೆ. ವಸಂತಪೂಜೆ, ತಾ.12 ರಂದು ಕುದುರೆ ಕಟ್ಟಿ ಓಡುವದು, ದೇವರ ಅವಭೃತ ಸ್ನಾನ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಏರ್ಪಡಿ¸ Àಲಾಗಿದೆ. ತಾ.14 ರಂದು ಬೋಡು ಹಬ್ಬ (ಬೇಡು ಹಬ್ಬ) ದೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ. ಮಾಚಿಮಂಡ ವಸಂತ್ ಅವರು ದೈವತಕ್ಕರಾಗಿ ಕಾರ್ಯನಿರ್ವ ಹಿಸಲಿದ್ದಾರೆ.

ಗರ್ವಾಲೆ ಭಗವತಿ

ಗರ್ವಾಲೆ ಗ್ರಾಮದ ಭಗವತಿ (ಪೊವ್ವದಿ) ದೇವರ ಹಬ್ಬ ತಾ. 7 ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.