ಮಡಿಕೇರಿ ಏ. 5: ಕೊಡಗು ಜಿಲ್ಲಾ ಮಡಿವಾಳರ ಸಂಘÀದ ವತಿಯಿಂದ ತಾ. 9 ರಂದು ನಗರದ ಶ್ರೀ ವೀರಭದ್ರ ಮುನೇಶ್ವರ ದೇವಾಲಯದಲ್ಲಿ ಶ್ರೀ ಜಗದ್ಗುರು ವೀರಗಣಾಚಾರಿ ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ನಡೆಯಲಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಜಿ.ಮಂಜುನಾಥ್ ಕುಮಾರ್ ಕುರಿತು ಮಾಹಿತಿ ನೀಡಿದರು. ಏ.9 ರಂದು ಬೆಳಗ್ಗೆ 9.30 ಗಂಟೆಗೆ ಮಹಾಪೂಜೆ ಹಾಗೂ 11 ಗಂಟೆಗೆ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷÀ ಲೋಕೇಶ್ ಸಾಗರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ. ನಂಜಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷÀ ಟಿ.ಎಸ್. ಪ್ರಕಾಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಅಧಿಕಾರಿ ಎಂ. ಮಂಜುನಾಥ್, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ಅಧಿಕಾರಿ ಕೆ.ವಿ. ಸುರೇಶ್ ಪಾಲ್ಗೊಳ್ಳಲಿ ದ್ದಾರೆ. ಪತ್ರಕರ್ತ ಚಿ.ನಾ.ಸೋಮೇಶ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷರಾದ ಎಂ.ಡಿ. ನಂಜಪ್ಪ ಮಾತನಾಡಿ, ಪ್ರಥಮ ಬಾರಿಗೆ ಮಡಿವಾಳ ಮಾಚಿದೇವರ ಜಯಂತ್ಯೋತ್ಸವವನ್ನು ಆಚರಿಸ ಲಾಗುತ್ತಿದೆ. ಸಮುದಾಯ ಬಾಂಧವರನ್ನು ಒಂದೆಡೆ ಸಂಘÀಟಿಸುವ ಚಿಂತನೆಗಳಡಿ ಕಾರ್ಯಕ್ರಮಗಳನ್ನು ಆಯೋಜಿಸ ಲಾಗುತ್ತಿದ್ದು, ಜಿಲ್ಲೆಯ ಎಲ್ಲ ಮಡಿವಾಳ ಬಾಂಧವರು ಪಾಲ್ಗೊಳ್ಳು ವಂತೆ ಮತ್ತು ಸಂಘÀದ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕೊಡಗು ಜಿಲ್ಲಾ ಮಡಿವಾಳ ಸಂಘದ ಸದಸ್ಯತ್ವವನ್ನು ಪಡೆಯಲು ಎಂ.ಡಿ. ನಂಜಪ್ಪ ಮೊ.9611521865, ಮೋಹನ್ ಕುಮಾರ್ ಮೊ.9964892043, ಸತೀಶ್ ಜೆ. ಮೊ.9901759931, ಪಿ.ಜಿ. ಮಂಜುನಾಥ್ ಮೊ.9901759931ನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರುಗಳಾದ ಪಿ.ಜಿ. ಸುಕುಮಾರ್, ಮೋಹನ್ ಕುಮಾರ್, ನಿರ್ದೇಶಕರಾದ ಎ.ಬಿ. ಅರುಣ್ ಹಾಗೂ ಜೆ. ಸತೀಶ್ ಉಪಸ್ಥಿತರಿದ್ದರು.