ನಾಪೆÇೀಕ್ಲು, ಏ. 5: ತನ್ನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲಾದ ಕಾಮಗಾರಿಗಳನ್ನು ತನ್ನ ಗಮನಕ್ಕೂ ಬಾರದೆ ಮನ ಬಂದಂತೆ ನಿರ್ವಹಿಸಿ ಸರಕಾರದ ಹಣವನ್ನು ದುರುಪಯೋಗಪಡಿಸಲಾಗಿದೆ ಎಂದು ನಾಪೆÇೀಕ್ಲು ಕ್ಷೇತ್ರ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಇಂಜಿನಿಯರ್ ವಿರುದ್ಧ ನೇರ ಆರೋಪ ಹೊರಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿಗಾರರನ್ನು ಸ್ಥಳಕ್ಕೆ ಕರೆದೊಯ್ದು ದಾಖಲೆ ಸಹಿತ ವಿವರಿಸಿದ ಅವರು ವಾಟೆಕಾಡು ಸಾಮಾಜಿಕ ಅರಣ್ಯ ಸಸ್ಯ ಕ್ಷೇತ್ರದಲ್ಲಿ ಕಾವಲುಗಾರರ ಶೆಡ್ ನಿರ್ಮಾಣಕ್ಕೆ 1.75 ಲಕ್ಷ ರೂ.ಗಳನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಮಂಜೂರು ಮಾಡಲಾಗಿದೆ, ಆದರೆ ನೂತನ ಶೆಡ್ ನಿರ್ಮಿಸಲು ಕ್ರಮಕೈಗೊಳ್ಳಬೇಕಾಗಿದ್ದ ಸಸ್ಯ ಕ್ಷೇತ್ರದಿಂದ ಅನತಿ ದೂರದ ಕಾವೇರಿ ನದಿ ತೀರದಲ್ಲಿ ಈ ಹಿಂದೆಯೇ ನಿರ್ಮಿಸಿರುವ ಪಂಪ್ ಹೌಸ್‍ಗೆ ಬಣ್ಣ ಬಳಿದು ಹಣ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ನಂತರ ಸುದ್ದಿಗಾರರನ್ನು ಹೊದವಾಡ ಸರಕಾರಿ ಪ್ರೌಢ ಶಾಲೆಗೆ ಕರೆದೊಯ್ದ ಅವರು ಶಾಲಾ ಆವರಣ ಗೋಡೆ ನಿರ್ಮಿಸಲು ಜಿಲ್ಲಾ ಪಂಚಾಯಿತಿಯಿಂದ 1.50 ಲಕ್ಷ ರೂ. ಮಂಜೂರು ಮಾಡಲಾಗಿದೆ. 10 ಇಂಚು ಅಗಲ ಮತ್ತು 25 ಮೀಟರ್ ಉದ್ದದ ತಡೆಗೋಡೆ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಆದರೆ ಇಲ್ಲಿ ನಿರ್ಮಾಣಗೊಂಡ ತಡೆಗೋಡೆ 6 ಮುಕ್ಕಾಲು ಇಂಚು ಅಗಲ ಮತ್ತು 19.5 ಮೀಟರ್ ಉದ್ದ ಮಾತ್ರವಿದೆ. ಸಿಮೆಂಟ್ ಕೂಡ ಕಡಿಮೆ ಬಳಸಲಾಗಿದೆ ಆದರೂ ಇಂಜಿನಿಯರ್ ಇದಕ್ಕೆ ಹಣ ಮಂಜೂರು ಮಾಡಿದ್ದು ಹೇಗೆ ಎಂದು ಪ್ರಶ್ನಿಸಿದರು.

ಹಳೇ ತಾಲೂಕಿನಿಂದ ಮೂಟೇರಿಗೆ ಸಾಗುವ ಡಾಮರು ರಸ್ತೆ ತೀರಾ ಹದಗೆಟ್ಟಿದ್ದು ವಾಹನ ಸಂಚಾರ ಸಾಧ್ಯವಿಲ್ಲದಂತಾಗಿದೆ. ಆ ರಸ್ತೆಯನ್ನು ಡಾಮರೀಕರಣ ಮಾಡುವದನ್ನು ಬಿಟ್ಟು 4 ಲಕ್ಷ ರೂ. ವೆಚ್ಚದಲ್ಲಿ ಹಳೇ ತಾಲೂಕು ಬಳಿ ಕೇವಲ 80 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಈ ಹಣದಲ್ಲಿ ಪೂರ್ತಿ ರಸ್ತೆಯನ್ನು ದುರಸ್ತಿ ಪಡಿಸಬಹುದಿತ್ತು ಎಂದು ದೂರಿದರು.

ನಾಪೆÇೀಕ್ಲು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಳೇ ಕಟ್ಟಡ ದುರಸ್ತಿಗೆ 50 ಸಾವಿರ ರೂ. ಮಂಜೂರು ಮಾಡಲಾಗಿದೆ. ಆದರೆ ಕೆಲವು ಹಳೇ ಹಂಚುಗಳನ್ನು ಬದಲಿಸಿ ಹಣ ಪಡೆಯಲಾಗಿದೆ. ಪೂರ್ತಿ ಕಾಮಗಾರಿ ನಡೆಸದೆ ಇಂಜಿನಿಯರ್ ಬಿಲ್ ನೀಡಿರುವದರ ಹಿಂದಿನ ಉದ್ದೇಶ ಏನು? ಎಂದು ಪ್ರಶ್ನಿಸಿದರು.

ಆದುದರಿಂದ ಸಂಬಂಧ ಪಟ್ಟವರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

-ಪಿ.ವಿ.ಪ್ರಭಾಕರ್