ಶನಿವಾರಸಂತೆ, ಏ. 5: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಗೆ 2017-18ನೇ ಸಾಲಿನಲ್ಲಿ ವಿವಿಧ ಆದಾಯ ಮೂಲದಿಂದ ರೂ. 27,79,800 ಅಧಿಕ ಲಾಭ ದೊರೆತಿದೆ. ಪಂಚಾಯಿತಿ ಅಧ್ಯಕ್ಷೆ ಅನುಸೂಯ ಹೇಮರಾಜ್ ಅವರ ಅಧ್ಯಕ್ಷತೆಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.

ಕಳೆದ ಸಾಲಿನಲ್ಲಿ 5 ಕೋಳಿ ಮಾಂಸದ ಮಾರುಕಟ್ಟೆಗಳು ರೂ. 700400 ಲಕ್ಷಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 30,56,000 ಗೆ ಹರಾಜಾಗಿದ್ದು, ರೂ. 23,55,600 ಅಧಿಕ ಲಾಭ ದೊರೆತಿದೆ. ಸಂತೆ ಸುಂಕ ಕಳೆದ ಸಾಲಿನಲ್ಲಿ ರೂ. 3,21,000 ಗೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 3,54,100 ಕ್ಕೆ ಹರಾಜಾಗಿದೆ. ರೂ. 33,100 ಲಾಭ ಬಂದಿದೆ. 2 ಹಸಿ ಮೀನು ಮಾರುಕಟ್ಟೆ ಕಳೆದ ಸಾಲಿನಲ್ಲಿ ರೂ. 1,15,500 ಮೊತ್ತಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 406100 ಕ್ಕೆ ಹರಾಜಾಗಿದೆ. ರೂ. 2,90,600 ಅಧಿಕ ಲಾಭ ದೊರೆತಿದೆ. 2 ಹಂದಿ ಮಾಂಸದ ಮಾರುಕಟ್ಟೆಗಳು ಕಳೆದ ಸಾಲಿನಲ್ಲಿ ರೂ. 1,45,000 ಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 2,22,800 ಗೆ ಹರಾಜಾಗಿ ರೂ. 77,800 ಲಾಭ ಬಂದಿದೆ. 2 ಕುರಿ ಮಾಂಸದ ಮಾರುಕಟ್ಟೆಗಳು ಕಳೆದ ಸಾಲಿನಲ್ಲಿ ರೂ. 1,29,100 ಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 1,50,200 ಹರಾಜಾಗಿದ್ದು, ರೂ. 21,100 ಲಾಭ ಬಂದಿದೆ. ಬಸ್ ನಿಲ್ದಾಣ ಶುಲ್ಕ ಕಳೆದ ಸಾಲಿನಲ್ಲಿ ರೂ. 16,000 ಕ್ಕೆ ಹರಾಜಾಗಿದ್ದು, ಈ ಸಾಲಿನಲ್ಲಿ ರೂ. 17,600 ಕ್ಕೆ ಹರಾಜಾಗಿ ರೂ. 1,600 ಲಾಭ ಬಂದಿದೆ.

ಹರಾಜು ಪ್ರಕ್ರಿಯೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಡಿ.ಟಿ. ವಿಜಯ್, ಸದಸ್ಯರುಗಳಾದ ಕೆ.ಆರ್. ಚಂದ್ರಶೇಖರ್, ಎಸ್.ಎಸ್. ಮಹೇಶ್, ವೀಣಾ, ರೋಹಿಣಿ, ಹೇಮಲತಾ, ದೌಲತ್ ಹುಸೇನ್, ಲಕ್ಷ್ಮಿ, ರಿಯಾಜ್ ಪಾಷ, ಗೀತಾ, ಹೊನ್ನಮ್ಮ, ದಿವಾಕರ, ಗೌರಮ್ಮ, ಚನ್ನಕೇಶವ, ಲೆಕ್ಕಾಧಿಕಾರಿ ಶರಣಪ್ಪ ಸನ್ನಿಧಿ, ಕಂಪ್ಯೂಟರ್ ನಿರ್ವಾಹಕಿ ಲತಾ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ್ ಸ್ವಾಗತಿಸಿ, ವಂದಿಸಿದರು.