ಮಡಿಕೇರಿ, ಏ. 5: ದೊಡ್ಡ ಪುಲಿಕೋಟು ಶ್ರೀ ಕೋಟೆ ಭಗವತಿ ದೇವರ ಉತ್ಸವ ತಾ. 7 ರಿಂದ ಪ್ರಾರಂಭವಾಗಲಿದೆ. ತಾ. 7 ರಂದು ಅಂದಿಬೆಳಕು (ದೀಪರಾಧನೆ), ತಾ. 8 ರಂದು ಎತ್ತುಪೋರಾಟ, ಅನ್ನದಾನ. ತಾ. 9 ರಂದು ದೇವರ ಜಳಕ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

v ಮಲ್ಲೂರು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹಾ ಪೂಜೆ ತಾ. 9 ರಂದು ನಡೆಯಲಿದೆ.

v ಬಾಳೆಲೆ ಸಮೀಪದ ಕೊಪ್ಪಲಿನ ಶ್ರೀ ಕನ್ನಂಬಾಡಿ ಲಕ್ಷ್ಮಿ ದೇವಸ್ಥಾನದ ವಾರ್ಷಿಕ ಹಬ್ಬ ತಾ. 7 ರಂದು ನಡೆಯಲಿದೆ.

v ಬಾಳೆಲೆ ದೇವನೂರಿನ ಶ್ರೀ ನಾರ ಮನೇಶ್ವರ ದೇವಸ್ಥಾನದ ವಾರ್ಷಿಕ ಹಬ್ಬ ತಾ. 15 ಮತ್ತು 16 ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ.

v ಮೂರ್ನಾಡು ಸನಿಹದ ಹೊದ್ದೂರುವಿನ ಅಯ್ಯಪ್ಪ ಕಾಲೋನಿಯಲ್ಲಿ ಪಾಷಾಣಮೂರ್ತಿಯ ವಾರ್ಷಿಕ ಉತ್ಸವ ತಾ. 18-19 ರಂದು ನಡೆಯಲಿದೆ.

ಈ ಪ್ರಯುಕ್ತ ತಾ. 18 ರಂದು ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, ಸಂಜೆ 6 ಗಂಟೆಗೆ ಭಂಡಾರ ತೆಗೆಯುವದು, ರಾತ್ರಿ 7 ರಿಂದ ಅನ್ನಸಂತರ್ಪಣೆ, 8 ಗಂಟೆಯ ಬಳಿಕ ಅಣ್ಣಪ್ಪ - ಪಂಜುರ್ಲಿಯ ನೇಮೋತ್ಸವ, 9 ರಿಂದ ಪಾಷಾಣ ಮೂರ್ತಿಯ ನೇಮೋತ್ಸವ ತಾ. 19 ರಂದು ಬೆಳಿಗ್ಗೆ 5 ಗಂಟೆಯ ಬಳಿಕ ಹರಕೆ ಕೋಲ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.