ನವದೆಹಲಿ, ಏ. 7: ಕೊಡವ ಭಾಷೆಯನ್ನು ಸಂವಿಧಾನದ ಎಂಟನೇ ಶೆಡ್ಯೂಲ್‍ಗೆ ಸೇರ್ಪಡೆಗೊಳಿಸಬೇಕೆಂದು ಇಂದು ರಾಜ್ಯ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಸಮರ್ಥನೀಯ ಅಂಶಗಳೊಂದಿಗೆ ಮಂಡಿಸಿದರು.ಕೊಡವ ಮತ್ತು ತುಳು ಭಾಷೆಗಳು ಪ್ರಾದೇಶಿಕ ಮಹತ್ವ ಪಡೆದುಕೊಂಡಿವೆ. ಆಯಾ ನಾಡಿನ ಸಂಸ್ಕøತಿ, ಇತಿಹಾಸ, ಕ್ರೀಡೆ, ರಾಜಕೀಯ ಕ್ಷೇತ್ರÀಗಳಲ್ಲಿ ಈ ಎರಡೂ ಭಾಷೆಗಳು ಪ್ರಭಾವ ಬೀರಿವೆ. ಆಯಾ ವಿಭಾಗದ ಜನ ಜೀವನವನ್ನು ಪ್ರತಿಬಿಂಬಿಸುತ್ತಿವೆ.ಕೊಡವ ಮತ್ತು ತುಳು ಭಾಷೆಗಳನ್ನು ಸಂವಿಧಾನದ ಎಂಟನೇ ಶೆಡ್ಯೂಲ್‍ನಲ್ಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ತಮ್ಮ ಸುದೀರ್ಘ 28 ನಿಮಿಷದ ಭಾಷಣದಲ್ಲಿ ಕೊಡವ ತಕ್‍ನ ಅಗತ್ಯತೆ, ಕೊಡಗು ಜಿಲ್ಲೆಯಿಂದ 50ಕ್ಕೂ ಅಧಿಕ ಮಂದಿ ಉನ್ನತ ಮಟ್ಟದ ಹಾಕಿ ಪಂದ್ಯಾಟಗಳಲ್ಲಿ ಪಾಲ್ಗೊಂಡಿರುವದು, ಇನ್ನಿತರ ಕ್ರೀಡೆಗಳಲ್ಲಿಯೂ ಕೊಡಗಿನ ಯುವ ಪೀಳಿಗೆಯ ಪಾತ್ರದ ಕುರಿತು ಬಿ.ಕೆ. ಹರಿಪ್ರಸಾದ್ ಸಭೆಯ ಗಮನಕ್ಕೆ ತಂದರು.

(ಮೊದಲ ಪುಟದಿಂದ) ಕೊಡವ ಹಾಕಿಯಲ್ಲಿ 200 ಕ್ಕೂ ಅಧಿಕ ಕುಟುಂಬಸ್ಥರು ಪಾಲ್ಗೊಳ್ಳುತ್ತಿರುವದು ವಿಶ್ವ ಮಟ್ಟದಲ್ಲಿಯೇ ಗಮನಾರ್ಹವೆನಿಸಿದೆ ಎಂದರು.

ರಾಜಕೀಯ ಕ್ಷೇತ್ರದಲ್ಲಿ ಹಾಗೂ ಅಧಿಕಾರೀ ಮಟ್ಟದಲ್ಲಿಯೂ ಕೊಡಗಿನ ಮಂದಿ ಉನ್ನತ ಮಟ್ಟಕ್ಕೇರಿ ಸೇವೆÀಗೈದಿರುವದನ್ನು ಸ್ಮರಿಸಿದರು.

ಈ ಹಿಂದೆ ಕೊಡಗು ಪ್ರತ್ಯೇಕ ರಾಜ್ಯವಾಗಿದ್ದು ಮೈಸೂರಿನಲ್ಲಿ ವಿಲೀನ ಗೊಂಡ ಬಳಿಕ ಕೊಡವ ತಕ್ ಅನ್ನು ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾವೇರಿಯ ಜನ್ಮಸ್ಥಾನವಾದ ಕೊಡಗಿಗೆ ಐತಿಹಾಸಿಕವಾಗಿಯೂ ಮಹತ್ವವಿದೆ ಎಂದರು.

ದೇಶಕ್ಕೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರಂತಹ ದಂಡನಾಯಕರನ್ನು ಕೊಡಗು ಕೊಡುಗೆ ನೀಡಿದೆ ಎಂದು ಸ್ಮರಿಸಿದರು. ಹರಿಪ್ರಸಾದ್ ಅವರು ದೀರ್ಘಕಾಲ ಮಾತನಾಡುವಾಗ ರಾಜ್ಯಸಭೆಯಲ್ಲಿ ಮೌನ ಆವೃತವಾಗಿದ್ದು ಸದಸ್ಯರು ಗಮನವಿಟ್ಟು ಆಲಿಸುತ್ತಿದ್ದುದು ಮತ್ತೊಂದು ವಿಶೇಷವಾಗಿತ್ತು.