ಗೋಣಿಕೊಪ್ಪಲು, ಏ.7: ಕಾನೂನು ಬಾಹಿರ ಆಧಾರ್ ಕಾರ್ಡ್ ಜಾಲ ಅಲ್ಲಲ್ಲಿ ಕೇಳಿಬರುತ್ತಿದ್ದರೂ, ಇದೀಗ ದಕ್ಷಿಣಕೊಡಗಿನ ದೇವರಪುರ ಗ್ರಾ.ಪಂ.ವ್ಯಾಪ್ತಿಯ ತಾರಿಕಟ್ಟೆಯ ವ್ಯಕ್ತಿಯೊಬ್ಬರ ನಿವಾಸದಲ್ಲಿ ಮಧ್ಯರಾತ್ರಿ ವೇಳೆ ರಾಜಾರೋಷವಾಗಿ ಅಸ್ಸಾಂ ಹಾಗೂ ವಲಸಿಗ ಬಾಂಗ್ಲಾದೇಶಿ ಕಾರ್ಮಿಕರಿಗೆ ತಲಾ ರೂ.750 ಹೊಂದಿಕೊಂಡು ಆಧಾರ್‍ಕಾರ್ಡ್ ನೀಡುವ ದಂಧೆ ತಾ.6 ರಂದು ರಾತ್ರಿ ಬೆಳಕಿಗೆ ಬಂದಿದೆ.

ಕೊಡಗು ಜಿಲ್ಲೆಯಲ್ಲಿ ಈ ಬಗ್ಗೆ ಗುಮಾನಿ ಇತ್ತಾದರೂ ಪ್ರಕರಣ ಬಯಲಿಗೆ ಬಂದಿರುವದು ಇದೇ ಮೊದಲ ಬಾರಿ ಎನ್ನಲಾಗಿದೆ. ಬಾಂಗ್ಲಾದೇಶದಿಂದ ಭಾರತಕ್ಕೆ ನುಸುಳುವವರಿಗೆ ಅಸ್ಸಾಂ ರಾಜ್ಯದ ಹೆಸರಿನಲ್ಲಿ ಗುರುತಿನ ಚೀಟಿ ಇತ್ಯಾದಿ ನಕಲಿ ಮಾಡುವ ಮೂಲಕ ದೇಶದ ಎಲ್ಲೆಡೆಗೆ ಕಾರ್ಮಿಕರನ್ನು ಸರಬರಾಜು ಮಾಡುವ ದೊಡ್ಡ ದಂಧೆಯೇ ಇದ್ದು, ಇದೀಗ ಭಾರತದ ಭದ್ರತಾ ವ್ಯವಸ್ಥೆಯನ್ನೇ ಬುಡ ಮೇಲು ಮಾಡುವಂತಹ ಕೃತ್ಯ ಹಾಸನದಲ್ಲಿ ಆಧಾರ್ ಕಾರ್ಡ್ ಗುತ್ತಿಗೆ ಹೊಂದಿರುವ ಸಂಸ್ಥೆಯ ಪ್ರಮುಖರಿಂದಲೇ ನಡೆದಿದೆ.

ಹಾಸನ ಜಿಲ್ಲಾಧಿಕಾರಿಗಳಿಂದ ಪೂರೈಕೆಯಾದ ಆಧಾರ್ ಕಿಟ್ (ಲ್ಯಾಪ್‍ಟಾಪ್, ಕಂಪ್ಯೂಟರ್, ಬೆರಳಚ್ಚು ಯಂತ್ರ ಇತ್ಯಾದಿ) ಮೂಲಕವೇ ತಾರಿಕಟ್ಟೆಯೊಂದರ ಮನೆಯಲ್ಲಿ ರಾತ್ರಿ ವೇಳೆಯಲ್ಲಿ ಅಸ್ಸಾಂ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವ ಕೃತ್ಯ ನಿನ್ನೆ ನಡೆದಿದೆ.

ದೇವರಪುರ ಗ್ರಾ.ಪಂ. ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ತಾ.ಪಂ., ಜಿ.ಪಂ. ಸದಸ್ಯರು, ಕಂದಾಯ ನಿರೀಕ್ಷಕರು ಹಾಗೂ ಕೊಡಗು ಜಿಲ್ಲೆಯ ಆಧಾರ್ ಕಾರ್ಡ್ ಯೋಜನೆ ಅನುಷ್ಠಾನದ ಗುತ್ತಿಗೆ ಹೊಂದಿರುವ ರಾಖೇಶ್ ಎಂಬವರಿಗೂ ಮಾಹಿತಿ ಇಲ್ಲದೆ ಅಕ್ರಮ ನಡೆದಿದೆ.

ಹಾಸನ ಜಿಲ್ಲಾಧಿಕಾರಿ, ಸಕಲೇಶಪುರದ ಆಧಾರ್ ಕಾರ್ಡ್ ಗುತ್ತಿಗೆ ಹೊಂದಿರುವ ಏಜೆನ್ಸಿಯ ಮಂಜುನಾಥ್ ಎಂಬವರಿಗೂ ಈ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗುತ್ತಿದೆ. ಪೆÇನ್ನಂಪೇಟೆ ಕಂದಾಯ ನಿರೀಕ್ಷಕ ರಾಧಾಕೃಷ್ಣ ಅವರು ಹಾಸನ ಉಪವಿಭಾಗಾಧಿಕಾರಿ ಶಿವರಾಜ್ ಅವರಿಗೆ ಈ ಬಗ್ಗೆ ದೂರವಾಣಿ ಮಾತುಕತೆ ನಡೆಸಿದ ಸಂದರ್ಭ ಇಂತಹ ಒಂದು ಅಕ್ರಮಕೂಟದ ಜಾಲ ನಡೆದಿರುವದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪಾಲಿಬೆಟ್ಟ ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಹಾಗೂ ಅಮ್ಮತ್ತಿ ನಿವಾಸಿ ಗೋಣಿಕೊಪ್ಪಲು ಎಪಿಎಂಸಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಅವರಿಗೆ ಇಂತಹ ಒಂದು ಜಾಲದ ಬಗ್ಗೆ ಸುಳಿವು ದೊರೆತು ಮಾಚಿಮಂಡ ಪ್ರಸಾದ್, ನೆಲ್ಲಮಕ್ಕಡ ಸಜಿ ನಾಣಯ್ಯ, ರಾಜೇಶ್ ಮುಂತಾದ ಸಾರ್ವಜನಿಕರ ನೆರವಿನೊಂದಿಗೆ ತಾ. 6 ರಂದು

(ಮೊದಲ ಪುಟದಿಂದ) ರಾತ್ರಿ 9 ಗಂಟೆ ಸುಮಾರಿಗೆ ತಾರಿಕಟ್ಟೆಯ ದಂಧೆ ನಡೆಯುತ್ತಿರುವ ನಿಗೂಢ ಪ್ರದೇಶಕ್ಕೆ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಈ ಹಂತದಲ್ಲಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರಿಗೂ ಮಾಹಿತಿ ರವಾನೆಯಾಗಿ ನಂತರ ಕೊಡಗು ಪೆÇಲೀಸ್ ಅಧೀಕ್ಷಕ ರಾಜೇಂದ ್ರಪ್ರಸಾದ್ ನಿರ್ದೇಶನದನ್ವಯ ಪಾಲಿಬೆಟ್ಟ ಪೆÇಲೀಸ್ ಠಾಣಾ ಸಿಬ್ಬಂದಿ ಗಣೇಶ್ ಮತ್ತು ಡಿಂಪಲ್, ಪೆÇನ್ನಂಪೇಟೆ ಪೆÇಲೀಸ್ ಉಪನಿರೀಕ್ಷಕ ಜಯರಾಮ್ ಮತ್ತು ಸಿಬ್ಬಂದಿ ಧಾಳಿ ಸಂಘಟಿಸಿ ಆರೋಪಿಗಳ ಸಹಿತ ಆಧಾರ್ ಕಾರ್ಡ್‍ಗೆ ಬಳಸಲಾಗುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೃತ್ಯದ ಪ್ರಮುಖ ರೂವಾರಿ ಸಕಲೇಶಪುರ ಅರೆಹಳ್ಳಿಯ ಖಲೀಮುಲ್ಲಾ ಎಂಬ ವ್ಯಕ್ತಿ ಪರಾರಿಯಾದರೆ, ಸಕಲೇಶಪುರ ದುದ್ದ ಗ್ರಾಮದ ಪ್ರಸನ್ನ, ಮುನ್ನ, ಗುರುಪ್ರಸಾದ್, ನವೀನ್ ಅವರುಗಳನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತಾರಿಕಟ್ಟೆ ನಿವಾಸಿ ಲತೀಫ್ ಸಹೋದರಿ ರಾಬಿಯಾ ಮನೆಯಲ್ಲಿ ವಿದ್ಯುತ್ ವ್ಯತ್ಯಯ ಹಿನ್ನೆಲೆ ಜನರೇಟರ್, ಕಂಪ್ಯೂಟರ್, ಎರಡು ಲ್ಯಾಪ್‍ಟಾಪ್, ಬೆರಳಚ್ಚು ಯಂತ್ರ, ಪ್ರಿಂಟರ್, ನೇತ್ರ ಮಾಹಿತಿ ಯಂತ್ರ ಇತ್ಯಾದಿ ಇರುವ ಕಿಟ್ ಅಳವಡಿಸಿ ಆಧಾರ್ ಕಾರ್ಡ್ ದಾಖಲಾತಿ ಮಾಡಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.

ಇದಕ್ಕೂ ಮುನ್ನ ಹೊಸಳ್ಳಿ ತೋಟದಲ್ಲಿ ತಾ. 6ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ 20ಕ್ಕೂ ಅಧಿಕ ಅಸ್ಸಾಂ ಕಾರ್ಮಿಕರಿಂದ ರೂ. 750 ರಂತೆ ಶುಲ್ಕ ವಸೂಲಿ ಮಾಡಿ ಆಧಾರ್ ಲಿಂಕ್ ಮಾಡಲಾಗಿತ್ತು ಎನ್ನಲಾಗಿದೆ. ಒಟ್ಟು ರೂ.750 ಶುಲ್ಕದಲ್ಲಿ ಅರೇಹಳ್ಳಿ ನಿವಾಸಿ ಖಲೀಮುಲ್ಲಾ ರೂ.250 ತಾನು ಹೊಂದಿಕೊಂಡು, ರೂ.500 ಮೊತ್ತವನ್ನು ಹಾಸನ ಏಜೆನ್ಸಿ ತಂಡಕ್ಕೆ ಪಾವತಿಸುತ್ತಿದ್ದನೆನ್ನಲಾಗಿದೆ.

ಕೋಟೆಬೆಟ್ಟ , ಪಳ್ಳಕೆರೆ, ಹೊಸಳ್ಳಿ ವ್ಯಾಪ್ತಿಯ ಪ್ರತಿಷ್ಠಿತ ಕಂಪೆನಿ ತೋಟದ ಆವರಣದಲ್ಲಿಯೇ ರಾಜಾರೋಷವಾಗಿ ಆಧಾರ್‍ಕಾರ್ಡ್ ಮಾಡಿಸಲು ಅಸ್ಸಾಂ ಮೂಲದ ಕಾರ್ಮಿಕರು ಸಾಲುಗಟ್ಟಿ ನಿಲ್ಲುತ್ತಿದ್ದರು ಎನ್ನಲಾಗಿದೆ. ನಡುರಾತ್ರಿ 1 ಗಂಟೆಯವರೆಗೂ ಕಾರ್ಯಾಚರಣೆ ನಡೆದಿದ್ದು ಪೆÇಲೀಸರ ಹೆಚ್ಚಿನ ತನಿಖೆಯಿಂದ ಇದರ ಹಿಂದಿರುವ ಬೃಹತ್ ಜಾಲವನ್ನು ಭೇದಿಸಬೇಕಾಗಿದೆ.

ಎಪಿಎಂಸಿ ಅಧ್ಯಕ್ಷ ಸುವಿನ್ ಗಣಪತಿ ಹಾಗೂ ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಅವರು ಪ್ರತಿಕ್ರಿಯೆ ನೀಡಿ, ಈ ಹಿಂದೆಯೂ ಅಲ್ಲಿ ಇಲ್ಲಿ ಗೌಪ್ಯವಾಗಿ ಆಧಾರ್ ಕಾರ್ಡ್ ಮಾಡಿಕೊಡುವ ವಿಚಾರ ಕೆಲವು ತೋಟ ಮಾಲೀಕರಿಂದ ತಿಳಿದು ಬಂದಿತ್ತು. ಇದೀಗ ಮೊಬೈಲ್ ಫೆÇೀನ್ ಖರೀದಿ, ಖಡ್ಡಾಯ ಬ್ಯಾಂಕ್ ಖಾತೆಗಾಗಿ ಆಧಾರ್ ಕಾರ್ಡ್ ಅಗತ್ಯವಿದ್ದು, ವಲಸಿಗ ಕಾರ್ಮಿಕರನ್ನೇ ಗುರಿಯಾಗಿಸಿಕೊಂಡ ಕಾರ್ಮಿಕರನ್ನು ಕಾಫಿತೋಟಗಳಿಗೆ, ಇತ್ಯಾದಿಗಳಿಗೆ ಸರಬರಾಜು ಮಾಡುತ್ತಿದ್ದ ಖಲೀಮುಲ್ಲ ಈ ಕೃತ್ಯದ ಪ್ರಮುಖ ರೂವಾರಿ ಎನ್ನಲಾಗುತ್ತಿದ್ದರೂ, ಹಾಸನ ಜಿಲ್ಲಾಡಳಿತದ ಗಮನಕ್ಕೆ ಬಾರದೆ ಅಧಿಕೃತ ಆಧಾರ್ ಕಾರ್ಡ್ ‘ಕಿಟ್’ ಹಾಗೂ ಯಂತ್ರಗಳನ್ನು ಸಾಗಾಟ ಮಾಡಿರುವದು ನಿಜಕ್ಕೂ ದಿಗ್ಭ್ರಮೆ ಮೂಡಿಸುವ ವಿಚಾರ. ಭಾರತದ ಅರ್ಥ ವ್ಯವಸ್ಥೆ ಹಾಗೂ ಭದ್ರತೆಯ ದೃಷ್ಟಿಯಿಂದಲೂ ಇದೊಂದು ಹೇಯ ಘಟನೆ ಎಂದು ಖಂಡಿಸಿದ್ದಾರೆ. ತಿತಿಮತಿ ತಾ.ಪಂ.ಸದಸ್ಯೆ ಆಶಾಜೇಮ್ಸ್ ಅವರೂ ಘಟನೆಯನ್ನು ಖಂಡಿಸಿದ್ದಾರೆ.

ಕೊಡಗು ಜಿಲ್ಲೆಯ ಏಜೆನ್ಸಿಯನ್ನು ರಾಖೇಶ್ ಎಂಬವರಿಗೆ ನೀಡಲಾಗಿದ್ದು, ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಲು ಪೆÇನ್ನಂಪೇಟೆ ಪೆÇಲೀಸ್ ಠಾಣೆಗೆ ಭೇಟಿ ನೀಡಿದ್ದರು. ಪೆÇನ್ನಂಪೇಟೆ ಕಂದಾಯ ನಿರೀಕ್ಷಕ ರಾಧಾಕೃಷ್ಣ ಅವರು ಇಂತಹ ದಂಧೆ ತನ್ನ ಗಮನಕ್ಕೆ ಬಂದಿರುವದು ಇದೇ ಮೊದಲು ಎಂದು ತಿಳಿಸಿದ್ದಾರೆ. ನೋಟ್ ಅಮಾನ್ಯೀಕರಣ ನಂತರ ದೊಡ್ಡ ತೋಟ ಮಾಲೀಕರು, ಕಂಪೆನಿ ತೋಟ ಮಾಲೀಕರು ಕಾರ್ಮಿಕರ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಾದ ಹಿನ್ನೆಲೆ ಇಂತಹ ಅಕ್ರಮಕ್ಕೆ ಎಡೆ ಮಾಡಿದೆ ಎಂದೂ ಅಂದಾಜಿಸಲಾಗುತ್ತಿದೆ.

ಪೆÇನ್ನಂಪೇಟೆ ಪೆÇಲೀಸ್ ಉಪನಿರೀಕ್ಷಕ ಜಯರಾಮ್ ಅವರಲ್ಲಿ ಮಾಹಿತಿ ಬಯಸಿದಾಗ ಆರೋಪಿಗಳ ವಿರುದ್ಧ ನಕಲಿ, ವಂಚನೆ (420 ಕೇಸ್) ಹಾಗೂ ಕಾನೂನು ಬಾಹಿರ ಚಟುವಟಿಕೆ ಕುರಿತಂತೆ ಪ್ರಕರಣ ದಾಖಲಿಸಲಾಗುವದು. ಖಲೀಮುಲ್ಲಾ ತುರ್ತು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಸನದಿಂದ ಸದರಿ ಆಧಾರ್ ಕಾರ್ಡ್ ಪೂರಕ ಉಪಕರಣಗಳನ್ನು ಯಾರ ನೆರವಿನೊಂದಿಗೆ ತರಲಾಯಿತು ಇತ್ಯಾದಿ ಬಗ್ಗೆ ತನಿಖೆ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.