ಗುಡ್ಡೆಹೊಸೂರು, ಏ. 6 : ಮಡಿಕೇರಿ ತಾಲೂಕಿನ ಕಾಟಕೇರಿ ಗ್ರಾಮದ ಶ್ರೀ ಭದ್ರಕಾಳಿ ಅಪ್ಪೆಂದ್ರಪ್ಪ, ಈಶ್ವರ ದೇವಸ್ಥಾನದ ವಾರ್ಷಿಕ ಮಹಾಪೂಜೆಯು ಇದೇ ತಿಂಗಳ 7 ರಿಂದ 13 ರ ತನಕ ನಡೆಯಲಿದೆ. 7 ದಿನಗಳಿಂದ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ. ತಾ.11ರಂದು ಬೆಳಿಗ್ಗೆ ಕಾಳೆ ಹಿಡಿಯುವದು. ತಾ. 12ರಂದು ಮಹಾಪೂಜೆ ನಡೆಯಲಿದೆ. ತಾ. 13 ರಂದು ಬೇಡುಹಬ್ಬ ನಡೆಯಲಿದೆ.