ಸುಳ್ಯದ ಕೆವಿಜಿ ಆಸ್ಪತ್ರೆ ಆವರಣದಿಂದ ಮಾ. 31ರಂದು ಸುಮಾರು 4 ಗಂಟೆಗೆ ರವಿಯನ್ನು ನಾಲ್ವರು ಅಪಹರಿಸಿದ್ದಾಗಿ ಪ್ರಮುಖ ಆರೋಪಿ ಡಾಲು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಅಲ್ಲಿಂದ ಕಾರಿನಲ್ಲಿ ರವಿಯನ್ನು ಕರೆತಂದು ಸಂಜೆ 6.30ರ ಸುಮಾರಿಗೆ ದುಷ್ಕøತ್ಯ ಎಸಗಿ ಮಡಿಕೇರಿಯ ಸ್ಟೋನ್ ಹಿಲ್‍ನ ರಸ್ತೆ ಬದಿಗೆ ಬಂದು, ಪೂರ್ವ ತಯಾರಿಯಂತೆ ಮಾರಕಾಸ್ತ್ರಗಳಿಂದ ಹೊಡೆದು, ಪ್ರಪಾತಕ್ಕೆ ಕೆಡವಿದ್ದಾರೆ. ಈ ಸಂದರ್ಭ ದುಷ್ಕøತ್ಯಕ್ಕೆ ಸಹಕರಿಸಿದ ಚಾಲಕ ಹರೀಶ್ ಕಾರಿನಲ್ಲೇ ಕುಳಿತಿರುತ್ತಾನೆ. ಸುಮಾರು 100 ಮೀ.ನಷ್ಟು ಕಾಡಿನ ನಡುವೆ ಪ್ರಪಾತದಲ್ಲಿ ಉರುಳಾಡಿಸಿ ಹೊಡೆದು, ರವಿಯನ್ನು ಹೆಣವಾಗಿಸಿದ ಆರೋಪಿಗಳು ಗುಂಡಿ ತೋಡಿ, ಆತನ ಶವವನ್ನು ಹೂತು ಹಾಕುತ್ತಾರೆ. ಕತ್ತಲೆಯ ನಡುವೆ ಅಲ್ಲಿಂದ ಕಾಲ್ಕಿತ್ತ ಆರೋಪಿಗಳು ಕಾರಿನ ಬಳಿ ಬರುತ್ತಾರೆ. ರವಿಯ ಬಗ್ಗೆ ಚಾಲಕ ಹರೀಶ್ ವಿಚಾರಿಸಲಾಗಿ ಆತ ಓಡಿ ಹೋದನೆಂದು ಕಥೆ ಕಟ್ಟುತ್ತಾರೆ. ಮರುದಿನ ಹಗಲು ಮತ್ತೆ ದುಷ್ಕøತ್ಯದ ಪ್ರಪಾತಕ್ಕೆ ಕಾಡಿನ ನಡುವೆ ನುಸುಳುವ ಆರೋಪಿಗಳು, ಪ್ರಾಣಿಗಳು ಶವದ ವಾಸನೆಯ ಜಾಡು ಹಿಡಿದು ಗುಂಡಿಯಿಂದ ಹೊರಗೆಳೆದು ತಿಂದು

(ಮೊದಲ ಪುಟದಿಂದ) ಹಾಕದಂತೆ ಖಾರದ ಪುಡಿಯನ್ನು ಚೆಲ್ಲಿ ಬರುತ್ತಾರೆ. ಈ ಭಯಾನಕ ದುಷ್ಕøತ್ಯಕ್ಕೆ ದುಡ್ಡಿನ ಕಲಹ ಹಾಗೂ ಇತರÀ ವೈಮನಸ್ಸು ಹೇತುವೆಂದು ಆರೋಪಿ ಡಾಲು ಪೊಲೀಸರಿಗೆ ತಿಳಿಸಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ಪೊಲೀಸರು ದುಷ್ಕøತ್ಯಕ್ಕೆ ಬಳಸಿದ ಕತ್ತಿ, ರಾಡು, ಗುದ್ದಲಿ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದಾರೆ.