ಮಡಿಕೇರಿ, ಏ. 7: ಮಕ್ಕಂದೂರು ಭದ್ರಕಾಳಿ ವಾರ್ಷಿಕೋತ್ಸವವು ಮಾ. 31ರಂದು ಕಟ್ಟು ಬೀಳುವದರೊಂದಿಗೆ ಪ್ರಾರಂಭಗೊಂಡಿದ್ದು, ತಾ. 8ರಂದು (ಇಂದು) ಮಧ್ಯಾಹ್ನ 2 ಗಂಟೆಗೆ ದೊಡ್ಡ ಹಬ್ಬದೊಂದಿಗೆ ಮಹಾ ದೇವರ ಪೂಜೆ ನೆರವೇರಲಿದೆ. ತಾ. 9ರಂದು ಮಧ್ಯಾಹ್ನ 12.30ಕ್ಕೆ ದೇವಿಯ ದೊಡ್ಡ ಹಬ್ಬ, ಕೊಡಿಯಾಟ್, ಅಂಗೋಲ, ಪೊಂಗೋಲ, ಕೊಂಬಾಟ್, ಚೌರಿಯಾಟ್, ಪೀಲಿಯಾಟ್, ಬೊಳಕಾಟ್‍ನೊಂದಿಗೆ ಹರಕೆ ಕಾಣಿಕೆ ಬಳಿಕ ತೆಂಗಿನ ಕಾಯಿಗೆ ಗುಂಡು ಹೊಡೆಯಲಾಗುತ್ತದೆ. ಬಳಿಕ ಕಾಳೆ ಓಡಿಸುವದು ಸೇರಿದಂತೆ ತಾ. 10ರಂದು ವಾರ್ಷಿಕೋತ್ಸವಕ್ಕೆ ತೆರೆ ಬೀಳಲಿದೆ.
ಅಪ್ಪೇಂದ್ರಪ್ಪ : ಕಾಟಕೇರಿ ಗ್ರಾಮದಲ್ಲಿ 2 ವರ್ಷಕ್ಕೊಮ್ಮೆ ನಡೆಯುವ ಅಪ್ಪೇಂದ್ರಪ್ಪ ದೇವರ ಹಬ್ಬ ಇಂದು ಪಟ್ಟಣಿಯೊಂದಿಗೆ, ತಾ. 8ರಿಂದ (ಇಂದಿನಿಂದ) ಇರುಬೊಳಕ್ ಸಹಿತ ಮುಂದುವರಿಯಲಿದೆ. ತಾ. 12 ಹಾಗೂ 13 ರಂದು ವಾರ್ಷಿಕ ದೊಡ್ಡಹಬ್ಬ, ಬೇಡು ಉತ್ಸವ ಜರುಗಲಿದೆ.
ಸೂರ್ಲಬ್ಬಿ : ಸೂರ್ಲಬ್ಬಿ ನಾಡಿನ ಶ್ರೀ ಕಾಳತಮ್ಮೆ - ಕ್ಷೇತ್ರಪಾಲ ದೇವರ ಹಬ್ಬದ ಕಟ್ಟು ಬೀಳುವದರೊಂದಿಗೆ ತಾ. 11ರಂದು ಪಟ್ಟಣಿ ಹಾಗೂ ರಾತ್ರಿ ತಕ್ಕರ ಮನೆಯಿಂದ ದೇವಾಲಯಕ್ಕೆ ಭಂಡಾರ ತರಲಾಗುತ್ತದೆ. ಬಳಿಕ ನಿತ್ಯ ಬೆಳಗಿನ ಜಾವ ಇರುಬೊಳಕ್ ಜರುಗಲಿದ್ದು, ತಾ. 17ರ ಮಧ್ಯರಾತ್ರಿಯಿಂದ ತಾ. 18ರಂದು ಹಗಲು ವಾರ್ಷಿಕ ದೊಡ್ಡ ಹಬ್ಬ ನಡೆಯಲಿದೆ. ತಾ. 19ರಂದು ದೇವಾಲಯದಿಂದ ಮರಳಿ ಭಂಡಾರ ಕೊಂಡೊಯ್ದು ತಕ್ಕರ ಮನೆಯಲ್ಲಿ ಇರಿಸುವದರೊಂದಿಗೆ ವಾರ್ಷಿಕ ಜಾತ್ರೆಗೆ ತೆರೆಬೀಳಲಿದೆ.
ಹೊರಮಾಲೆ ಭದ್ರಕಾಳಿ: ಗಾಳಿಬೀಡುವಿನ ಹೊರಮಾಲೆ ಭದ್ರಕಾಳಿ ದೇವಿಯ 12 ವರ್ಷಕ್ಕೊಮ್ಮೆ ಜರುಗುವ ಮುಡಿತೆರೆ ತಾ.8ರಂದು ಜರುಗಲಿದ್ದು, ತಾ. 10ರಂದು ಮೇಲೇರಿ ಸಹಿತ ವಾರ್ಷಿಕ ಜಾತ್ರೆಗೆ ತೆರೆಬೀಳಲಿದೆ. ದೇವಿ ಸನ್ನಿಧಿಯಲ್ಲಿ ಎಂಟು ದೈವಕೋಲಗಳು ವಾರ್ಷಿಕ ಸೇವೆಯೊಂದಿಗೆ ಜರುಗಲಿದೆ.
ಮೂರ್ನಾಡು : ಹೊದ್ದೂರು ಕಬ್ಬಡಕೇರಿ ಶ್ರೀ ಪೊನ್ನುಮುತ್ತಪ್ಪ ದೇವಸ್ಥಾನದ 30ನೇ ವರ್ಷದ ವಾರ್ಸಿಕ ಉತ್ಸವ 8ರಿಂದ (ಇಂದಿನಿಂದ) 10ರವರೆಗೆ ನಡೆಯಲಿದೆ.
8ರಂದು ಬೆಳಿಗ್ಗೆ ಗಣಪತಿ ಹೋಮ, 9ರಂದು ಸಂಜೆ 6 ಗಂಟೆಯಿಂದ ಮುತ್ತಪ್ಪನ ಬೊಳ್ಳಾಟ, ತಿರುವಪ್ಪನೆ, ಗುಳಿಗ, ಗುಳಿಗನ ಕೋಲ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಕೆ. ನಿಡುಗಣೆ ಭದ್ರಕಾಳಿ ಉತ್ಸವ
ಕರವಲೆ ಬಾಡಗ ಗ್ರಾಮದ ಶ್ರೀ ಭದ್ರಕಾಳಿ ದೇವರ 2 ವರ್ಷಕ್ಕೊಮ್ಮೆ ನಡೆಯುವ ಉತ್ಸವ ತಾ. 4 ರಿಂದ ಆರಂಭಗೊಂಡಿದೆ. ತಾ. 8 ರಂದು ಬೆಳಿಗ್ಗೆ ಬೊಳಕ್, ಕೊಡಿಆಟ್, ಚೋಪ್‍ಆಟ್ ಹಾಗೂ ದೊಡ್ಡ ಹಬ್ಬ ನಡೆಯಲಿದೆ. ಕಳಕೇರಿ-ನಿಡುಗಣೆ ಗ್ರಾಮದ ಶ್ರೀ ಮೈತಾಲಪ್ಪ ದೇವರ 2 ವರ್ಷಕ್ಕೊಮ್ಮೆ ನಡೆಯುವ ಉತ್ಸವ ತಾ. 10 ರಂದು ದೇವರ ಜಳಕದೊಂದಿಗೆ ಪ್ರಾರಂಭಗೊಳ್ಳಲಿದ್ದು, ತಾ. 11 ಹಾಗೂ ತಾ. 12 ರಂದು ಬೆಳಿಗ್ಗೆ ಬೊಳಕಾಟ್, ಕೊಡಿಆಟ್, ಚೋಪ್‍ಆಟ್ ಹಾಗೂ ಕಾಳೆ ಹಿಡಿಯುವ ಕೈಂಕರ್ಯ ನಡೆಯಲಿದೆ. ತಾ. 13 ರಂದು ಬೆಳಗ್ಗಿನ ಜಾವ 2 ಗಂಟೆಗೆ ಮಕ್ಕಫಲದೊಂದಿಗೆ ದೊಡ್ಡ ಹಬ್ಬ ನಡೆಯಲಿದೆ.
ಮಲ್ಲೂರು
ಮಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಮಹಾಪೂಜೆ ತಾ. 9 ರಂದು ಬೆಳಿಗ್ಗೆ 10.30 ಗಂಟೆಗೆ ಜರುಗಲಿದೆ.
v ಬಾಳೆಲೆ ಗ್ರಾಮದ ದೇವನೂರು ಶ್ರಿ ನಾರಮನೇಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ತಾ. 15 ಮತ್ತು 16 ರಂದು ಜರುಗಲಿದೆ.
ತಾ. 15 ರಂದು ಸಂಜೆ 7 ಗಂಟೆಗೆ ದೇವರ ಜಳಕ, ಪುಷ್ಪಾರ್ಚನೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ತಾ. 16 ರಂದು ಗಣಪತಿ ಹೋಮ, ರುದ್ರಾಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.