ಮಡಿಕೆÉೀರಿ ಏ.7 : ಕೂಡಿಗೆ ಸೈನಿಕ ಶಾಲೆಯಲ್ಲಿ ಪ್ರÀವೇಶ ಪರೀಕ್ಷೆಯ ಸಂದರ್ಭ ಸಾಕಷ್ಟು ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಕಾವೇರಿಸೇನೆಯ ಸಂಚಾಲಕ ಕೆ.ಎ.ರವಿ ಚಂಗಪ್ಪ, ಸೇನಾ ವಿಭಾಗದ ತನಿಖಾ ತಂಡ ತಕ್ಷಣ ಸೈನಿಕ ಶಾಲೆಗೆ ಭೇಟಿ ನೀಡಿ ಸಮಗ್ರ ತನಿಖೆಗೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಿಗೆ ಸೈನಿಕ ಶಾಲೆಗೆ ಗಣನೀಯ ಪ್ರಮಾಣದಲ್ಲಿ ದಕ್ಷಿಣ ಕರ್ನಾಟಕದ ವಿದ್ಯಾರ್ಥಿಗಳು ಪ್ರವೇಶ ಅವಕಾಶ ಪಡೆದುಕೊಳ್ಳಲು ಕಾರಣಕರ್ತರಾಗಿರುವ ಪ್ರಾಂಶುಪಾಲರಾದ ಕ್ಯಾಪ್ಟನ್ ಬೆನ್ ಹೆಚ್. ಬೆರ್ಸನ್ ಅವರು ಅಕ್ರಮವನ್ನು ಬಯಲಿಗೆಳೆÉಯುವ ಪ್ರಯತ್ನ ಮಾಡಿದರು. ಆದರೆ, ಸೈನಿಕ ಶಾಲೆಯ ಕೆಲವು ಅಕ್ರಮ ಕೂಟಗಳು ಷಡ್ಯಂತ್ರ ನಡೆಸಿ ಪ್ರಾಂಶುಪಾಲರು ಕಡ್ಡಾಯ ರಜೆಯಲ್ಲಿ ತೆರಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸೇನಾ ಧುರೀಣರ ಅವಿರತ ಪ್ರಯತ್ನದ ಫಲವಾಗಿ 2007 ರಲ್ಲಿ ಕೂಡಿಗೆಯಲ್ಲಿ ಸೈನಿಕ ಶಾಲೆ ಆರಂಭಗೊಂಡಿತು. ಈ ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಬದಲಾಗಿ ಇತರ ಭಾಗದ ವಿದ್ಯಾರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಾವಕಾಶ ಪಡೆಯುತ್ತಿರುವದು ಕಂಡು ಬಂದಿದ್ದು, ಪ್ರವೇಶ ಪರೀಕ್ಷೆಯಲ್ಲಿ ನಡೆಯುತ್ತಿರುವ ಅಕ್ರಮಗಳೆ ಇದಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು.

ಅಕ್ರಮ ಕೂಟ ಪ್ರವೇಶಾರ್ಥಿಗಳ ಜನ್ಮ ದಿನಾಂಕವನ್ನು ಪ್ರಮಾಣ ಪತ್ರದ ಮೂಲಕ ತಿದ್ದುಪಡಿಗೆ ಅವಕಾಶ ಕಲ್ಪಿಸುತ್ತಿದ್ದರು. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಗೊಂಡ ಪ್ರಶ್ನೆಗಳನ್ನು ಹಲವು ಪ್ರವೇಶಾರ್ಥಿಗಳಿಗೆ ಹೇಳಿಕೊಡುವ ಮೂಲಕ ಅಕ್ರಮಗಳು ನಡೆಯುತ್ತಿತ್ತೆಂದು ರವಿ ಚಂಗಪ್ಪ ಆರೋಪಿಸಿದರು.

ಅಕ್ರಮವನ್ನು ಪತ್ತೆ ಹಚ್ಚಿದ ಪ್ರಾಂಶುಪಾಲರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುವ ಮೂಲಕ ಅಕ್ರಮ ಕೂಟ ಮೇಲುಗೈ ಸಾಧಿಸಿದೆಯೆಂದು ಬೇಸರ ವ್ಯಕ್ತಪಡಿಸಿದರು. ಸೇನಾ ವಿಭಾಗದ ತನಿಖಾ ತಂಡದ ಮೂಲಕ ತಕ್ಷಣ ಅಕ್ರಮದ ವಿರುದ್ಧ ತನಿಖೆÉಯಾಗ ಬೇಕು ಮತ್ತು ಪ್ರಾಂಶುಪಾಲರಾದ ಎಂದು ಟೀಕಿಸಿದರು.

ಅಕ್ರಮ ಕೂಟ ಪ್ರವೇಶಾರ್ಥಿಗಳ ಜನ್ಮ ದಿನಾಂಕವನ್ನು ಪ್ರಮಾಣ ಪತ್ರದ ಮೂಲಕ ತಿದ್ದುಪಡಿಗೆ ಅವಕಾಶ ಕಲ್ಪಿಸುತ್ತಿದ್ದರು. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಗೊಂಡ ಪ್ರಶ್ನೆಗಳನ್ನು ಹಲವು ಪ್ರವೇಶಾರ್ಥಿಗಳಿಗೆ ಹೇಳಿಕೊಡುವ ಮೂಲಕ ಅಕ್ರಮಗಳು ನಡೆಯುತ್ತಿತ್ತೆಂದು ರವಿ ಚಂಗಪ್ಪ ಆರೋಪಿಸಿದರು.

ಅಕ್ರಮವನ್ನು ಪತ್ತೆ ಹಚ್ಚಿದ ಪ್ರಾಂಶುಪಾಲರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸುವ ಮೂಲಕ ಅಕ್ರಮ ಕೂಟ ಮೇಲುಗೈ ಸಾಧಿಸಿದೆಯೆಂದು ಬೇಸರ ವ್ಯಕ್ತಪಡಿಸಿದರು. ಸೇನಾ ವಿಭಾಗದ ತನಿಖಾ ತಂಡದ ಮೂಲಕ ತಕ್ಷಣ ಅಕ್ರಮದ ವಿರುದ್ಧ ತನಿಖೆÉಯಾಗ ಬೇಕು ಮತ್ತು ಪ್ರಾಂಶುಪಾಲರಾದ