ಭಾಗಮಂಡಲ, ಏ. 7: ಇಲ್ಲಿಗೆ ಸಮೀಪದ ಚೆಟ್ಟಿಮಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಕೆದಂಬಾಡಿ ಕಪ್‍ನ ಇಂದಿನ ಪಂದ್ಯಾವಳಿಯಲ್ಲಿ ಕುಡೆಕಲ್ಲು ತಂಡವು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ.

ಇಂದು ನಡೆದ ಪಂದ್ಯದಲ್ಲಿ ಪೊನ್ನಚನ ತಂಡವು 6 ಓವರ್‍ಗೆ ಮೂರು ವಿಕೆಟ್ ಕಳೆದುಕೊಂಡು 101 ರನ್‍ಗಳ ಬೃಹತ್ ಮೊತ್ತ ಕಲೆ ಹಾಕಿತು. ಉತ್ತರವಾಗಿ ಆಡಿದ ಕಡಪಾಲ ತಂಡ 48 ರನ್ ಮಾತ್ರ ಗಳಿಸಿ 53 ರನ್‍ಗಳ ಅಂತರದಿಂದ ಸೋಲನುಭವಿಸಿತು.

ಪೊನ್ನೇಟಿ ತಂಡ 46 ರನ್ ಗಳಿಸಿದರೆ, ಸುಳ್ಳಕೋಡಿ ತಂಡ 47 ರನ್ ಗಳಿಸಿ 7 ವಿಕೆಟ್‍ಗಳ ಜಯ ಸಂಪಾದಿಸಿತು. ಮತ್ತೊಂದು ಪಂದ್ಯದಲ್ಲಿ ಪೊನ್ನಚನ ತಂಡ 3 ವಿಕೆಟ್‍ಗೆ 78 ರನ್ ಗಳಿಸಿದರೆ, ಕಟ್ಟೆಮನೆ ತಂಡ 5 ವಿಕೆಟ್‍ಗೆ ಕೇವಲ 35 ರನ್‍ಗಳಿಸಿ 43 ರನ್‍ಗಳ ಅಂತರದಿಂದ ಸೋಲನುಭವಿಸಿತು. ಇನ್ನೊಂದು ಪಂದ್ಯದಲ್ಲಿ ಪೊಡನೋಳನ ತಂಡ 1 ವಿಕೆಟ್‍ಗೆ 48 ರನ್ ಗಳಿಸಿದರೆ, ಸುಳ್ಳಕೋಡಿ ತಂಡ 5 ವಿಕೆಟ್‍ಗೆ 46 ರನ್ ಮಾತ್ರ ಗಳಿಸಿ 26 ರನ್‍ಗಳ ಅಂತರದಿಂದ ಸೋಲನುಭವಿಸಿತು.

ಪೊನ್ನಚನ ಹಾಗೂ ಪೊಡನೊಳನ ತಂಡಗಳ ನಡುವಿನ ರೋಚಕ ಪಂದ್ಯಾವಳಿಯಲ್ಲಿ ಪೊಡನೊಳನ ತಂಡ 7 ವಿಕೆಟ್‍ಗೆ 45 ರನ್‍ಗಳಿಸಿದರೆ, ಉತ್ತರವಾಗಿ ಆಡಿದ ಪೊನ್ನಚನ ತಂಡ 6 ವಿಕೆಟ್‍ಗೆ 43 ರನ್ ಮಾತ್ರ ಗಳಿಸಲು ಶಕ್ತವಾಯಿತು. ಕೊನೆ ಘಳಿಗೆಯಲ್ಲಿ 2 ರನ್‍ಗಳ ಅಂತರದಿಂದ ಸೋಲನುಭವಿಸುವಂತಾಯಿತು.

ಕುಡೆಕಲ್ ಹಾಗೂ ಪೊಡನೊಳನ ತಂಡಗಳ ನಡುವಿನ ಪ್ರಿಕ್ವಾರ್ಟರ್ ಪಂದ್ಯಾವಳಿಯಲ್ಲಿ ಪೊಡನೊಳನ ತಂಡವು 1 ವಿಕೆಟ್‍ಗೆ 58 ರನ್ ಕಲೆ ಹಾಕಿತು. ಉತ್ತರವಾಗಿ ಆಡಿದ ಕುಡೆಕಲ್ ತಂಡ 4 ವಿಕೆಟ್ ಕಳೆದುಕೊಂಡು 59 ರನ್ ಗಳಿಸಿ 6 ವಿಕೆಟ್‍ಗಳ ಗೆಲುವು ಸಾಧಿಸುವದರೊಂದಿಗೆ ಕ್ವಾರ್ಟರ್ ಫೈನಲ್‍ಗೆ ಪ್ರವೇಶಿಸಿತು.