ಮಡಿಕೇರಿ, ಏ. 6: ಮಡಿಕೇರಿ ನಗರದ ಜನತೆ ಬೆಚ್ಚಿ ಬೀಳುವ ರೀತಿಯಲ್ಲಿ ಇಂದು ಪ್ರಕೃತಿಯ ಪ್ರಭಾವ ಪರ್ಜನ್ಯ ರೂಪದಲ್ಲಿ ಧರೆಗಿಳಿಯಿತು. ಗುಡುಗಿನ ಭಾರೀ ಆರ್ಭಟ ಎದೆ ತಲ್ಲಣಿಸುವಂತಿದ್ದು, ಜನರು ದಾರಿಯಲ್ಲಿ ಒಂದು ಗಂಟೆ ಕಾಲ ಓಡಾಡಲು ಹಿಂಜರಿಯುವಂತೆ ಮಾಡಿತು. ಆಲಿಕಲ್ಲು, ಗುಡುಗು ಸಹಿತ ಸುರಿದ ಭಾರೀ ಮಳೆ ಬಿಸಿ ವಾತಾವರಣವನ್ನು ತಂಪಾಗಿಸಿದರೂ ಗುಡುಗಿನ ಆರ್ಭಟ ನಡುಕವುಂಟು ಮಾಡಿತು. ಮೊಬೈಲ್‍ಗಳಲ್ಲಿ ಕರೆ ಮಾಡಿದಾಗ “ದಯವಿಟ್ಟು ಮತ್ತೆ ಮಾಡಿ, ಗುಡುಗುತ್ತಿದೆ” ಎನ್ನುವ ಉತ್ತರ ಸಿದ್ಧವಾಗಿತ್ತು. ಈ ನಡುವೆ ವಿದ್ಯುತ್ ಕೈ ಕೊಟ್ಟಾಗ ಕತ್ತಲೆ ಆವರಿಸಿ ಕೆಲ ಕಾಲ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿದ ನಾಗರಿಕರು ಮಳೆಯ ದೃಶ್ಯವನ್ನು, ಆಲಿಕಲ್ಲು ಬೀಳುವದನ್ನು ನೋಡುವಲ್ಲಿ ಮಗ್ನರಾದರು.

ಜಿಲ್ಲೆಯ ಸಿದ್ದಾಪುರ ಮತ್ತಿತರ ಕೆಲವು ಭಾಗಗಳಲ್ಲಿಯೂ ಇಂದು ಸಂಜೆ ಮಳೆಯಾಗಿದೆ.