ಸುಂಟಿಕೊಪ್ಪ, ಏ. 6: ಭಾರತ ದೇಶÀವನ್ನು ಪ್ರಪಂಚದಲ್ಲೇ ಅತ್ಯಂತ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಪರಿವರ್ತಿಸಲು ಪ್ರಧಾನಿ ನರೇಂದ್ರ ಮೋದಿ ಪಣತೊಟ್ಟಿದ್ದು ಬಿಜೆಪಿ ಕಾರ್ಯಕರ್ತರು ಗ್ರಾಮೀಣ ಮಟ್ಟದಿಂದಲೇ ಪಕ್ಷದ ಅಡಿಗಲ್ಲನ್ನು ಸದೃಢಗೊಳಿಸಲು ಕಾರ್ಯೋನ್ಮುಖ ರಾಗಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಹೇಳಿದರು. ಭಾರತೀಯ ಜನತಾಪಕ್ಷದ ಸಂಸ್ಥಾಪನಾ ದಿನವನ್ನು ಇಲ್ಲಿನ ಪಂಪ್‍ಹೌಸ್ ನಿವಾಸಿಯೂ ಬಿಜೆಪಿ ಭೂತ್ ಸಮಿತಿ ಅಧ್ಯಕ್ಷರಾದ ರಾಜ ಹಾಗೂ 1ನೇ ವಿಭಾಗದ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ವಿಘ್ನೇಶ್ ಅವರ ಮನೆಯ ಮುಂಭಾಗದಲ್ಲಿ ಬಿಜೆಪಿಯ ಬಾವುಟ ಹಾರಿಸಿ ಜನಸಂಘದ ಸ್ಥಾಪಕರಾದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಸಾಂಸ್ಕøತಿಕ ದೇಶವಾದ ಭಾರತವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ಎಲ್ಲಾ ವರ್ಗದ ಜನತೆ ನೆಮ್ಮದಿಯ ಬದುಕು ಸಾಗಿಸಲು ಅಂದಿನ ದಿನಗಳಲ್ಲಿ ಹಿರಿಯರು ಕನಸು ಕಂಡಿದ್ದರು. ಸ್ವಾತಂತ್ರ್ಯ ಲಭಿಸಿದಾಗ ಪ್ರಥಮ ಪ್ರಧಾನ ಮಂತ್ರಿಯಾಗಿ ಜವಾಹರ್‍ಲಾಲ್ ನೆಹರು ದೇಶದ ಒಂದು ವರ್ಗವನ್ನು ಒಲೈಸುತ್ತಾ ಅಭಿವೃದ್ಧಿ ದೃಷ್ಟಿಕೋನ ಇಲ್ಲದ ದಿನಗಳಲ್ಲಿ ಹಿರಿಯರು ಬಿಜೆಪಿ ಪಕ್ಷಕಟ್ಟಿ ಇಂದು ಪ್ರಬಲ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ದೂರದೃಷ್ಟಿ ಯಿಂದ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು. ನಗರ ಬಿಜೆಪಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಾಲಾವತಿ ದಿನದ ಮಹತ್ವದ ಕುರಿತು ಮಾತನಾಡಿದರು.

ಸುಂಟಿಕೊಪ್ಪದ ಶ್ರೀ ಕೋದಂಡರಾಮ ದೇವಾಲಯದಲ್ಲಿ ಬಿ.ಬಿ.ಭಾರತೀಶ್ ಹಾಗೂ ಕಾರ್ಯಕರ್ತರು ಪೂಜೆಯನ್ನು ಸಲ್ಲಿಸುವ ಮೂಲಕ ಪಟ್ಟಣದಲ್ಲಿ ಮೆರವಣಿಗೆ ತೆರಳಿದರು.

ಈ ಸಂದರ್ಭದಲ್ಲಿ ಮಡಿಕೇರಿ ಕ್ಷೇತ್ರ ಬಿ.ಜೆ.ಪಿ ಮಾಜಿ ಅಧ್ಯಕ್ಷ ಪಿ.ಕೆ.ಶೇಷಪ್ಪ, ಸುಂಟಿಕೊಪ್ಪ ಗ್ರಾ.ಪಂ. ಸದಸ್ಯರುಗಳಾದ ಪಿ.ಚಂದ್ರ, ಬಿ.ಎಂ.ಸುರೇಶ್ (ಪುಟ್ಟ), ಗಿರಿಜಾ ಉದಯಕುಮಾರ್ ಗ್ರಾ.ಪಂ.ಮಾಜಿ ಅಧ್ಯಕ್ಷೆ ಬಿ.ಐ.ಭವಾನಿ, ನಗರಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ (ಕೊಕಾ), ಹಿಂದುಳಿದ ವರ್ಗಗಳ ಅಧ್ಯಕ್ಷ ನಾಗೇಶ್ ಪೂಜಾರಿ, ಬೂತ್ ಸಮಿತಿ ಅಧ್ಯಕ್ಷರಾದ ವಿಘ್ನೇಶ್, ರಾಜೇಶ್, ವಿನೋದ್, ಶಿವಮಣಿ, ಆಶೋಕ,ಸಿ.ಸಿ.ಸುನೀಲ್ ಮತ್ತಿತರರು ಇದ್ದರು.

ಸೋಮವಾರಪೇಟೆ

ಭಾರತೀಯ ಜನತಾ ಪಾರ್ಟಿಯ ನಗರ ಘಟಕದ ವತಿಯಿಂದ ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ವಾರ್ಡ್ ನಂ 1ರ ಬಸವೇಶ್ವರ ರಸ್ತೆಯ ಬೂತ್ ಸಮಿತಿ ಅಧ್ಯಕ್ಷ ಕೆ.ಜೆ. ಗಿರೀಶ್‍ರವರಿಗೆ ನಗರ ಬಿಜೆಪಿ ಅಧ್ಯಕ್ಷ ಎಸ್.ಆರ್. ಸೋಮೇಶ್ ಧ್ವಜ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ತಾಲೂಕು ಬಿಜೆಪಿ ಶಿಕ್ಷಣ ಪ್ರಕೋಷ್ಟ ಅಧ್ಯಕ್ಷ ಜೆ.ಸಿ. ಶೇಖರ್ ಮಾತನಾಡಿ, ಕಳೆದ 37 ವರ್ಷಗಳ ಹಿಂದೆ ಆರಂಭಗೊಂಡ ಪಕ್ಷ ಇಂದು ರಾಷ್ಟ್ರೀಯ ಪಕ್ಷವಾಗಿ ಬೃಹತ್ ಆಲದ ಮರದಂತೆ ಬೆಳೆದು ನಿಂತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ದೇಶದ ಅತ್ಯಂತ ಹೆಚ್ಚಿನ ಸದಸ್ಯರನ್ನು ಹೊಂದಿರುವ ಏಕೈಕ ಪಕ್ಷವಾಗಿ ಇಂದು ಹೊರ ಹೊಮ್ಮಿದೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಯುವಕರು ಪಕ್ಷದ ಮುಂಚೂಣಿಗೆ ಬರುತ್ತಿರುವದು ಆಶಾದಾಯಕ ಬೆಳವಣಿಗೆ ಎಂದರು.

11 ವಾರ್ಡ್‍ಗಳಿಗೂ ತೆರಳಿದ ಕಾರ್ಯಕರ್ತರು ಅಲ್ಲಿನ ಬೂತ್ ಸಮಿತಿಯ ಅಧ್ಯಕ್ಷರ ಮನೆ ಮುಂದೆ ಪಕ್ಷದ ಧ್ವಜ ಹಾರಿಸಿ ಸಿಹಿ ವಿತರಿಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸದಸ್ಯ ಈಶ್ವರ್, ಲೀಲಾ ನಿರ್ವಾಣಿ, ಪ.ಪಂ. ಮಾಜಿ ಅಧ್ಯಕ್ಷೆ ನಳಿನಿ ಗಣೇಶ್, ತಾಲೂಕು ಬಿಜೆಪಿ ಕಾರ್ಯದರ್ಶಿ ಮನುಕುಮಾರ್, ನಗರ ಯುವ ಮೋರ್ಚಾ ಅಧ್ಯಕ್ಷ ಶರತ್‍ಚಂದ್ರ, ಪಕ್ಷದ ಪ್ರಮುಖರಾದ ರವಿ, ಪಿ. ಮಧು, ಪ್ರೇಮನಾಥ್, ಗಂಗಾಧರ್, ಜಲಜಾ ಶೇಖರ್, ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

ವೀರಾಜಪೇಟೆ

ಭಾರತೀಯ ಜನತಾ ಪಾರ್ಟಿಯ ನಗರ ಸಮಿತಿ ವತಿಯಿಂದ ಇಂದು ಪಕ್ಷದ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.

ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಧ್ವಜಾರೋಹಣ ವನ್ನು ನಗರ ಸಮಿತಿ ಅಧ್ಯಕ್ಷ ಅಂಜಪರವಂಡ ಅನಿಲ್ ನೆರವೇರಿಸಿ ನೆರೆದವರನ್ನುದ್ದೇಶಿಸಿ ಮಾತನಾಡಿ ದರು. ಇದೇ ಸಂದರ್ಭ ಮಾರ್ಕೆಟಿಂಗ್ ಫೆಡರೇಶನ್‍ನ ಉಪಾಧ್ಯಕ್ಷ ಮಧು ದೇವಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಚಿನ್ ಕುಟ್ಟಯ್ಯ, ಸದಸ್ಯ ರಚನ್ ಮೇದಪ್ಪ, ಟಿ.ಎಂ. ಯೊಗೀಶ್ ನಾಯ್ಡು, ಬಿ.ಜಿ. ಸಾಯಿನಾಥ್, ಟಿ.ಜೆ. ದಿವಾಕರ್ ಶೆಟ್ಟಿ, ಜೊಕೀಂ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಕೂಡಿಗೆ: ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಬೂತ್ ಸಮಿತಿಯ ವತಿಯಿಂದ ಭಾರತೀಯ ಜನತಾ ಪಕ್ಷದ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.

ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ. ಭೋಗಪ್ಪ ಭಾರತೀಯ ಜನತಾ ಪಕ್ಷದ ಬಾವುಟಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಪಕ್ಷದ ಕಾರ್ಯಕರ್ತರು ಒಗ್ಗೂಡಿ ಪಕ್ಷದ ಬೆಳವಣಿಗೆಗೆ, ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದ್ದಲ್ಲಿ ಪಕ್ಷವು ಪ್ರಬುದ್ಧವಾಗಿ ಬೆಳೆಯುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡುಮಂಗಳೂರು ಬೂತ್ ಕಮಿಟಿಯ ಅಧ್ಯಕ್ಷ ಮಂಜುನಾಥ್ ಗುರುಲಿಂಗಪ್ಪ ವಹಿಸಿದ್ದರು. ಬಿಜೆಪಿಯು ಕೆಳಮಟ್ಟದಿಂದ ಚೇತರಿಸಿಕೊಳ್ಳಲು ಬೂತ್ ಕಮಿಟಿಯ ಕಾರ್ಯವೈಖರಿ ಪ್ರಮುಖವಾಗಿರುತ್ತದೆ ಎಂದರು.

ಈ ಸಂದರ್ಭ ತಾ.ಪಂ ಸದಸ್ಯ ಗಣೇಶ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಾಸ್ಕರ್, ಸಾವಿತ್ರಿ, ಜಾಜಿರಾಮಚಂದ್ರ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಹೇಮಾವತಿ, ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ತಾಲೂಕು ಬಿಜೆಪಿ ಎಸ್‍ಟಿ ಮೋರ್ಚಾದ ಅಧ್ಯಕ್ಷ ಪ್ರಭಾಕರ್, ಯುವ ಮೋರ್ಚಾದ ಅಧ್ಯಕ್ಷ ಕಿರಣ್, ಪಕ್ಷದ ಕಾರ್ಯಕರ್ತರುಗಳಾದ ವರದರಾಜ್ ದಾಸ್, ಕುಮಾರಸ್ವಾಮಿ, ಮಂಜುನಾಥ್, ಬೂತ್ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲ, ಜಿಲ್ಲಾ ಸಮಿತಿಯ ಮಹಿಳಾ ಘಟಕದ ಸದಸ್ಯರುಗಳಾದ ಕೆ.ಕನಕ, ಇಂದಿರಾ ರಮೇಶ್ ಸೇರಿದಂತೆ ವಿವಿಧ ಬೂತ್ ಕಮಿಟಿಯ ಅಧ್ಯಕ್ಷ ಪ್ರಶಾಂತ್ ಕೆ.ಟಿ., ಗಿರೀಶ್ ಇದ್ದರು.