ಒಡೆಯನಪುರ:, ಏ. 7: ಶನಿವಾರಸಂತೆ ಪಟ್ಟಣದ ಶ್ರೀಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ತಾ. 10 ರಂದು ಸಮೀಪದ ಮಾಲಂಬಿ ಶ್ರೀ ಮಳೆಮಲ್ಲೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳÀಲಾಗುವದೆಂದು ಸಮಿತಿ ತಿಳಿಸಿದೆ. ಮಳೆಮಲ್ಲೇಶ್ವರ ಬೆಟ್ಟಕ್ಕೆ 3ನೇ ವರ್ಷದ ಪಾದಯಾತ್ರೆ ಇದಾಗಿದ್ದು, ಅಂದು ಬೆಳಿಗ್ಗೆ 8-30ಕ್ಕೆ ಪಾದಯಾತ್ರಿಗಳು ಪಟ್ಟಣದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಗುಡುಗಳಲೆ ಜಂಕ್ಷನ್ ಮೂಲಕ ವಾದ್ಯಗೋಷ್ಠಿಯೊಂದಿಗೆ ಮಾಲಂಬಿ ಬೆಟ್ಟಕ್ಕೆ ಪಾದಯಾತ್ರೆ ಬೆಳೆಸಲಾಗುವದು. ಬೆಟ್ಟದ ಮೇಲಿರುವ ದೇವಾಲಯದಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀ ಗಣಪತಿ ಪೂಜೆ, ಶನಿವಾರಸಂತೆ ಶ್ರೀ ರಾಮಾಂಜನೇಯ ಭಜನ ಮಂಡಳಿಯವರಿಂದ ಭಜನೆ ಕಾರ್ಯಕ್ರಮ, ರುದ್ರಾಭಿಷೇಕ, ಮಹಾಮಂಗಳಾರತಿ ಸೇವೆ ಮುಂತಾದ ಪೂಜಾ ವಿಧಿವಿಧಾನಗಳನ್ನು ನಡೆಸಲಾಗುತ್ತದೆ ಎಂದು ಸಮಿತಿ ತಿಳಿಸಿದೆ. ಬರಲಿಚ್ಚಿಸುವ ಪಾದಯಾತ್ರಿಗಳ ಮಾಹಿತಿಗಾಗಿ ಎ.ಡಿ.ಮೋಹನ್‍ಕುಮಾರ್, ಮೋ: 9448919518 ಸಂಪರ್ಕಿಸಲು ಕೋರಿದೆ.