ಸುಂಟಿಕೊಪ್ಪ, ಏ.7: ಇಲ್ಲಿನ ಬಸ್ ನಿಲ್ದಾಣ ಬಳಿ ನೂತನವಾಗಿ ಆರಂಭಿಸಲಾದ ನಂದಿನಿ ಹಾಲಿನ ಕೇಂದ್ರವನ್ನು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನಂದಿನಿ ಹಾಲು ಕಲಬೆರಕೆಯಿಲ್ಲದ ಉತ್ತಮ ಗುಣಮಟ್ಟದ ಹಾಲು ಆಗಿದೇ ಕಲಬೆರಕೆ ಹಾಲು ಸೇವಿಸಿದರೆ ಆರೋಗ್ಯಕ್ಕೆ ಹಾನಿಯಾಗಲಿದೆ ನಂದಿನಿ ಹಾಲು ಉತ್ಪಾದನಾ ಕೇಂದ್ರದಿಂದ ಪ್ರಸಿದ್ಧಿ ಪಡೆದ ಮೈಸೂರುಪಾಕ, ಪೇಡ, ತುಪ್ಪ, ಮೊಸರು, ಮಜ್ಜಿಗೆ ಮೊದಲಾದ 80 ತರಹದ ಉತ್ಪನ್ನಗಳನ್ನು ಜನರಿಗೆ ವಿತರಿಸಲಾಗುತ್ತಿದೆ. ಈ ಹಾಲಿನ ಕೇಂದ್ರದ ಉಪಯೋಗವನ್ನು ಜನರು ಬಳಸಿಕೊಳ್ಳಬೇಕೆಂದು ಹೇಳಿದರು.

ಹಾಲು ಉತ್ಪಾದನಾ ಕೇಂದ್ರದ ನಿರ್ದೇಶಕ ಕೆ.ಟಿ. ಅರುಣ್ ಕುಮಾರ್ ಮಾತನಾಡಿ, ಮಡಿಕೇರಿ ಜಿಲ್ಲಾಸ್ಪತ್ರೆ ಬಳಿ, ಕುಶಾಲನಗರದಲ್ಲಿ 3 ಕಡೆ, ಶನಿವಾರಸಂತೆ, ಕೊಡ್ಲಿಪೇಟೆ ಹಾಗೂ ಕೆಲ ಗ್ರಾಮ ಪಂಚಾಯಿತಿ ಮುಖ್ಯ ಕೇಂದ್ರಗಳಲ್ಲಿ ಸದ್ಯದಲ್ಲೇ ನಂದಿನಿ ಹಾಲಿನ ಕೇಂದ್ರ ಆರಂಭಿಸಲಾಗುವ ದೆಂದರು. ರೈತರಿಗೆ ಹೈನುಗಾರಿಕೆ ನಡೆಸಲು ನಮ್ಮ ಕೇಂದ್ರದಿಂದ ಪ್ರೋತ್ಸಾಹ, ಸಹಕಾರ ನೀಡಲಾಗುವದೆಂದು ಹೇಳಿದರು.

ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಸುಂಟಿಕೊಪ್ಪ ವರ್ಗದ ಜನತೆಯ ಬಹಳ ದಿನಗಳ ಹಾಲು ಕೇಂದ್ರದ ಬೇಡಿಕೆ ಇಂದು ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರಲ್ಲದೆ, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಾಲಾವತಿ, ಗ್ರಾ. ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಗ್ರಾ. ಪಂ. ಉಪಾಧ್ಯಕ್ಷ ಪಿ. ಆರ್. ಸುಕುಮಾರ್, ಪಂಚಾಯಿತಿ ಸದಸ್ಯರಾದ ಗಿರಿಜಾ ಉದಂiÀi ಕುಮಾರ್, ಶಾಜೀರ್, ಮಡಿಕೇರಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಎಂ.ಎನ್. ಕೊಮಾರಪ್ಪ, ಮಾಜಿ ಬಿಜೆಪಿ ಅಧ್ಯಕ್ಷ ಪಿ.ಕೆ ಶೇಷಪ್ಪ, ಸುಂಟಿಕೊಪ್ಪ ವಿಎಸ್‍ಎಸ್‍ಎನ್ ಬ್ಯಾಂಕ್ ಅಧ್ಯಕ್ಷ ಎನ್.ಸಿ.ಪೊನ್ನಪ್ಪÀ ಕರವೇ ಅಧ್ಯಕ್ಷ ನಾಗೇಶ್ ಪೂಜಾರಿ, ಹಾಲು ಡೈರಿ ಕೇಂದ್ರದ ವ್ಯವಸ್ಥಾಪಕ ನಂದೀಶ್, ಏರಿಯಾ ಮಾರುಕಟ್ಟೆ ಅಧಿಕಾರಿ ಬಿ.ಎಸ್. ಕುಮಾರ್, ಡೈರಿ ಕೇಂದ್ರದ ಮಾಲೀಕ ಬಿ.ಕೆ. ಮೋಹನ್ ಮತ್ತಿತರರು ಇದ್ದರು.