ಸೋಮವಾರಪೇಟೆ, ಏ. 6: ಇಲ್ಲಿನ ಪಟ್ಟಣ ಪಂಚಾಯಿತಿಯ ವಿಶೇಷ ಸಾಮಾನ್ಯ ಸಭೆ ಪ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ಎಸ್.ಸಿ., ಎಸ್.ಟಿ, ಇತರ ವರ್ಗ, ವಿಕಲಚೇತನರಿಗೆ ನೀಡಲಾಗುವ ಯೋಜನೆಗಳ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಯಿತು. ಪಟ್ಟಣ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ಅನುಕೂಲವಾಗುವ ಉದ್ದೇಶದಿಂದ ಸಮರ್ಪಕವಾದ ವಾಹನ ನಿಲುಗಡೆ ವ್ಯವಸ್ಥೆ, ವಾಹನ ನಿಲುಗಡೆಗೆ ಬಣ್ಣದ ಪಟ್ಟಿಯ ಮೂಲಕ ಸ್ಥಳ ಗುರುತಿಸು ವದು, ಸೂಚನಾಫಲಕಗಳನ್ನು ಅಳವಡಿಸುವಂತೆ ತೀರ್ಮಾನಿಸ ಲಾಯಿತು.

ಅಂಬೇಡ್ಕರ್ ಮತ್ತು ಬಸವ ಜಯಂತಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಮತ್ತು ಬಸವೇಶ್ವರ ಪ್ರತಿಮೆ ಮತ್ತು ವೃತ್ತಗಳಿಗೆ ಬಣ್ಣ ಬಳಿಯುವಂತೆಯೂ ಸೂಚನೆ ನೀಡಲಾಯಿತು. ಇದೇ ಸಂದರ್ಭ 7.2 ಯೋಜನೆಯಡಿಯಲ್ಲಿ ಇತರೆ ಬಡವರ್ಗದ ಫಲಾನುಭವಿಗಳಿಗೆ 8 ಅಡುಗೆ ಅನಿಲ ಸಂಪರ್ಕ ವಿತರಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ರಮೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ, ಸದಸ್ಯರುಗಳಾದ ವೆಂಕಟೇಶ್, ಸುಷ್ಮಾ, ಇಂದ್ರೇಶ್, ನಾಗರಾಜು, ಮೀನಾ ಕುಮಾರಿ, ಉದಯಶಂಕರ್, ಮುಖ್ಯಾಧಿಕಾರಿ ನಾಚಪ್ಪ, ಅಭಿಯಂತರ ವೀರೇಂದ್ರ, ಡಿಸೋಜ, ಉದಯಕುಮಾರ್, ವಿಷಯ ಸಂಗ್ರಾಹಕಿ ರೂಪ ಸೇರಿದಂತೆ ಇತರರು ಉಪಸ್ಥಿತರಿದ್ದರು.