ಕುಶಾಲನಗರ, ಏ. 8: ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿದಲ್ಲಿ ಕಲೆಗಳನ್ನು ಉಳಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಜನನಿ ಮಹಿಳಾ ವೇದಿಕೆ, ಭಾರತ್ ಗ್ಯಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ಥಳೀಯ ಹೋಟೆಲ್ ಕನ್ನಿಕಾ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಹಾಗೂ ಪಟ್ಟಣದ ನಾಗಮ್ಮ ಕಾಳಪ್ಪ ಮತ್ತು ಸಂಗಡಿಗರು ಹಾಡಿರುವ ಭಕ್ತಿಗೀತೆಗಳ ಸ್ವರನಾಗಾಮೃತಧಾರೆ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಂಘ-ಸಂಸ್ಥೆಗಳು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಾರತೀಯ ಸಂಸ್ಕøತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿರುವದು ಶ್ಲಾಘನೀಯ ವಿಚಾರವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ, ವಿಧಾನಸಭಾ ಮಾಜಿ ಅಧ್ಯಕ್ಷ ಕೃಷ್ಣ ಅವರು ಯಾವದೇ ಕೆಲಸದಲ್ಲಿ ಯಶಸ್ಸು ಗಳಿಸಲು ನಿರಂತರ ಪ್ರಯತ್ನದ ಅವಶ್ಯಕತೆಯಿದೆ. ಗುರಿಯನ್ನು

(ಮೊದಲ ಪುಟದಿಂದ) ಸಾಧಿಸುವ ನಿಟ್ಟಿನಲ್ಲಿ ದೃಢಸಂಕಲ್ಪ ಕೈಗೊಂಡು ಪ್ರಯತ್ನಿಸಿ ಯಶಸ್ಸು ಪಡೆದುಕೊಳ್ಳುವಂತೆ ಕರೆ ನೀಡಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಪ್ರಾಸ್ತಾವಿಕ ನುಡಿಗಳಾಡಿದರು.

ಜನನಿ ಮಹಿಳಾ ವೇದಿಕೆ ಅಧ್ಯಕ್ಷ ಮಲ್ಲಿಗೆ ಭೀಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಶಾಲನಗರದ ಉದ್ಯಮಿ ಭಾರತ್ ಗ್ಯಾಸ್ ಮಾಲೀಕÀ ಎಂ.ಕೆ.ದಿನೇಶ್ ಅವರು ತಮ್ಮ ಮಾತೃಶ್ರೀ ನಾಗಮ್ಮ ಕಾಳಪ್ಪ ಮತ್ತು ಸಂಗಡಿಗರು ಹಾಡಿರುವ ಭಕ್ತಿಗೀತೆಗಳ ಸ್ವರನಾಗಾಮೃತಧಾರೆ ಧ್ವನಿ ಸುರುಳಿಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಬಳಿಕ ಭಕ್ತಿಗೀತೆಗಳ ದೃಶ್ಯಾವಳಿಗಳನ್ನು ನೆರೆದಿದ್ದವರಿಗೆ ಪ್ರದರ್ಶಿಸಲಾಯಿತು.

ಇದೇ ಸಂದರ್ಭ ಗಾಯಕಿ ನಾಗಮ್ಮ ಕಾಳಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಜನನಿ ಮಹಿಳಾ ವೇದಿಕೆ ಪದಾಧಿಕಾರಿಗಳಿಂದ ಸ್ವಾಗತ ನೃತ್ಯ ಕಾರ್ಯಕ್ರಮ ಜರುಗಿತು.

ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ.ಚರಣ್, ಸಾಹಿತಿಗಳಾದ ಕಣಿವೆ ಭಾರದ್ವಾಜ್, ಕಮಲ ಕರಿಯಪ್ಪ, ಚಲನಚಿತ್ರ ಹಿನ್ನಲೆ ಗಾಯಕಿ ವೀಣಾ ಪಂಡಿತ್, ಸಂಗೀತ ನಿರ್ದೇಶಕರಾದ ವೆಂಕಟೇಶ್, ರವಿಶಂಕರ್, ಅನಿತಾ ದಿನೇಶ್, ಜನನಿ ಮಹಿಳಾ ವೇದಿಕೆ ಪದಾಧಿಕಾರಿಗಳು ಇದ್ದರು. ಬಳಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.