ಮಡಿಕೇರಿ, ಏ. 8 : ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘÀದ ಗೋದಾಮಿನಿಂದ ಭಾರೀ ಪ್ರಮಾಣದ ಕರಿಮೆಣಸು ದಾಸ್ತಾನು ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರು ಆಡಳಿತ ಮಂಡಳಿಯ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದು ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪ ಮಾಡುತ್ತಿರುವವರು ಸೂಕ್ತ ದಾಖಲೆಗಳಿದ್ದಲ್ಲಿ ತನಿಖಾಧಿಕಾರಿ ಗಳಿಗೆ ನೀಡಿ ಕಾನೂನಾತ್ಮಕ ಕರ್ತವ್ಯವನ್ನು ಮೆರೆಯಲಿ ಎಂದು ಒತ್ತಾಯಿಸಿದರು.
ಸಂಘÀದÀಲ್ಲಿ ದಾಸ್ತಾನಿರಿಸಲಾಗಿದ್ದ ಸಿದ್ದಾಪÀÅರ ವರ್ತಕರೊಬ್ಬರ ಅಂದಾಜು 48 ಲಕ್ಷ ಮೌಲ್ಯದ 104 ಚೀಲ (7345 ಕೆ.ಜಿ.) ಕರಿಮೆಣಸು ಕಾಣೆಯಾಗಿರುವ ವಿಚಾರ ಮಾರ್ಚ್ 3 ರಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಸಂಘÀದ ಆಡಳಿತ ಮಂಡಳಿ ತಕ್ಷಣ ಕಾರ್ಯಪ್ರವೃತ್ತ ವಾಗಿದೆ ಮತ್ತು ಈ ಸಂಬಂಧ ದಾಸ್ತಾನಿನ ಉಸ್ತುವಾರಿ ಹೊತ್ತಿದ್ದ ಮೈಕಲ್ ಎಂಬವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದೂರನ್ನು ದಾಖಲಿಸಿದೆ. ಪ್ರಸ್ತುತ ಈ ಸಂಬಂಧ ಪೊಲೀಸ್ ತನಿಖೆÉ ಹಾಗೂ ಸಹಕಾರ ಇಲಾಖಾ ತನಿಖಾ ಕಾರ್ಯ ಪ್ರಗತಿಯಲ್ಲಿದೆ. ಘÀಟನೆಗೆ ಸಂಬಂಧಿಸಿದಂತೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ವಿರುದ್ಧದ ಆರೋಪಗಳು ಸತ್ಯವಲ್ಲವೆಂದು ಚೇರಂಡ ನಂದಾ ಸುಬ್ಬಯ್ಯ ತಿಳಿಸಿದರು.
ಪ್ರಕರಣವನ್ನು ಮುಂದಿಟ್ಟು ಕೊಂಡು ವ್ಯಕ್ತಿಗತ ತೇಜೋವಧೆ ಮಾಡುವ ಉದ್ದೇಶದಿಂದ ಸಂಘದ ಸದಸ್ಯರಲ್ಲದವರು ತಮ್ಮ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ಆರೋಪಗಳಿಗೆ ಸೂಕ್ತ ದಾಖಲೆಗಳಿದ್ದರೆ ತನಿಖಾಧಿಕಾರಿಗಳಿಗೆ ಒದಗಿಸಲಿ ಎಂದು ಒತ್ತಾಯಿಸಿದರು.
ಮಾಲ್ದಾರೆ ಬಾಡಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘÀ ಜಿಲ್ಲೆಯಲ್ಲೆ ಮುಂಚೂಣಿಯಲ್ಲಿರುವ ಸಹಕಾರ ಸಂಘವಾಗಿದ್ದು, 1991 ರಲ್ಲಿ ಕೆÉೀವಲ 12 ಲಕ್ಷ ರೂ.ಗಳಷ್ಟು ವಾರ್ಷಿಕ ವಹಿವಾಟು ನಡೆಸುತ್ತಿದ್ದ ಸಂಘ ಪ್ರಸ್ತುತ 75 ಕೊಟಿ ರೂ. ವಹಿವಾಟನ್ನು ನಡೆಸಿಕೊಂಡು ಬರುತ್ತಿದೆ. ಸಂಘದ ಮೂಲಕ 1600 ರಷ್ಟಿರುವ ಸದಸ್ಯರಿಗೆ ಕೃಷಿ ಸಾಲ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಂಘ ಒದಗಿಸುತ್ತಿದೆ. ಸಂಘವು ತನ್ನ ದಾಸ್ತಾನಿನಲ್ಲಿ ವರ್ಷಂಪ್ರತಿ 350 ರಿಂದ 450 ಟನ್‍ನಷ್ಟು ಕಾಫಿ ಕರಿ ಮೆಣಸನ್ನು ದಾಸ್ತಾನಿರಿಸಿಕೊಂಡು, ದಾಸ್ತಾನಿನ ಮೇಲೆ ಸಾಲ ಸೌಲಭ್ಯವನ್ನು ನೀಡುತ್ತಾ ಬರುತ್ತಿದೆಯೆಂದು ಮಾಹಿತಿ ನೀಡಿದರು.
ಸತ್ಯಾಸತ್ಯತೆಯ ಬಗ್ಗೆ ಚರ್ಚಿಸಲು ಸಂಘದ ಸದಸ್ಯರ ಹಾಗೂ ಗ್ರಾಹಕರ ಸಭೆ ಕರೆಯಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘÀದ ಉಪಾಧ್ಯಕ್ಷ ರಾಮಕೃಷ್ಣ, ನಿರ್ದೇಶಕರಾದ ಚಿಣ್ಣಪ್ಪ, ಜೋಯಪ್ಪ ಹಾಗೂ ಸಿ.ಎ. ಹಂಸ ಉಪಸ್ಥಿತರಿದ್ದರು.