ನಾಪೆÇೀಕ್ಲು, ಏ. 8: ಕೊಡಗು ಜಿಲ್ಲಾ ಮಾನವ ಹಕ್ಕು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಬಿ.ಎಂ. ಜಿನ್ನು ನಾಣಯ್ಯ, ಸೇವ್ ಕೊಡಗು ಫೋರಂ, ಜಿಲ್ಲಾ ಜಯ ಕರ್ನಾಟಕ ಸಂಘಟನೆ ವತಿಯಿಂದ ಕಂದಾಯ ಇಲಾಖೆಯಲ್ಲಿ ನಿಧಾನ ಗತಿಯ ಕಡತಗಳ ವಿಲೇವಾರಿ ಹಾಗೂ ಕಡತಗಳ ನಾಪತ್ತೆ ಬಗ್ಗೆ ಈ ಹಿಂದೆ ತಾಲೂಕು ತಹಶೀಲ್ದಾರ್ ಆಗಿದ್ದ ಕುಂಞಮ್ಮ ಕಾರಣ ಎಂಬದಾಗಿ ಆರೋಪಿಸಿ ದೂರು ನೀಡಿದ್ದರು.
ಅದೇ ರೀತಿ ಕೊಳಕೇರಿ ಗ್ರಾಮದ ಎಂ.ಜಿ.ರಾಮಚಂದ್ರ, ಅಶೋಕ್, ಮಡಿಕೇರಿಯ ವಕೀಲರಾದ ಎಂ.ಹೆಚ್. ಫಯಾಜ್ ಕಂದಾಯ ಕಾರ್ಯದರ್ಶಿಯಿಂದ ಜಿಲ್ಲಾಧಿಕಾರಿಗೆ ಪತ್ರ(ಮೊದಲ ಪುಟದಿಂದ) ಮಾಹಿತಿ ಹಕ್ಕಿನಡಿಯಲ್ಲಿ ಅರ್ಜಿ ಸಲ್ಲಿಸಿದಾಗಲೂ ಕಚೇರಿ ಕಡತ ಲಭ್ಯವಿಲ್ಲದಿರುವ ಬಗ್ಗೆ ಲಿಖಿತ ಉತ್ತರ ಲಭಿಸಿದೆ. ಅದರೊಂದಿಗೆ ಬಿದ್ದಾಟಂಡ ಕುಟುಂಬಸ್ಥರ ಆಸ್ತಿಯನ್ನು ಕಂದಾಯಕ್ಕೆ ಒಳಪಡಿಸಿ, ವಿಂಗಡಿಸುವ ಬಗ್ಗೆಯೂ ಬಿ.ಎಂ.ಜಿನ್ನು ನಾಣಯ್ಯ, ಬಿ.ಟಿ.ದಿನೇಶ್ ದೂರು ನೀಡಿದರು.
ಇದಕ್ಕೆ ಸ್ಪಂದಿಸಿದ ರಾಜ್ಯ ಸರಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ವಸಂತ ಲಕ್ಷ್ಮಮ್ಮ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದು ನಿರ್ದೇಶನ ನೀಡಿದ್ದು, ಹಿಂದಿನ ತಹಶೀಲ್ದಾರ್ ಕುಂಞಮ್ಮ ಅವರನ್ನು ವಿಚಾರಣೆಗೆ ಒಳಪಡಿಸಿ ಹಾಗೂ ನಿಯಮಾನುಸಾರ ಕ್ರಮಕೈಗೊಂಡು ಕ್ರಮದ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ ಎಂದು ಜಿನ್ನು ನಾಣಯ್ಯ ‘ಶಕ್ತಿ’ಗೆ ತಿಳಿಸಿದ್ದಾರೆ.