ಭಾಗಮಂಡಲ, ಏ. 8: ಇಲ್ಲಿಗೆ ಸಮೀಪದ ಚೆಟ್ಟಿಮಾನಿಯ ಕೆದಂಬಾಡಿ ಕುಟುಂಬದ ಆಶ್ರಯದಲ್ಲಿ ನಡೆಯುತ್ತಿರುವ ಗೌಡ ಜನಾಂಗ ಬಾಂಧವರ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಕೆದಂಬಾಡಿ ಕಪ್ನ ಇಂದಿನ ಪಂದ್ಯದಲ್ಲಿ ತೆಕ್ಕೆಡೆ, ಬಿದ್ರುಪಣೆ ಹಾಗೂ ತಳೂರು ತಂಡಗಳು ಮುಂದಿನ ಹಂತಕ್ಕೆ ಪ್ರವೇಶ ಪಡೆದಿವೆ.
ಇಂದು ನಡೆದ ಪಂದ್ಯದಲ್ಲಿ ಬಿದ್ರುಪಣೆ ತಂಡವು 5 ವಿಕೆಟ್ ನಷ್ಟಕ್ಕೆ 58 ರನ್ ಬಾರಿಸಿದರೆ ಉತ್ತರವಾಗಿ ಆಡಿದ ಪೈಕೆರ ತಂಡವು 7 ವಿಕೆಟ್ ನಷ್ಟಕ್ಕೆ 49 ರನ್ ಬಾರಿಸಲಷ್ಟೇ ಶಕ್ತವಾಗಿ ಸೋಲನುಭವಿಸಿತು.
ತಳೂರು ತಂಡವು 63 ರನ್ ಬಾರಿಸಿದರೆ ಕೋಟೆರ ತಂಡವು 5 ವಿಕೆಟ್ ನಷ್ಟಕ್ಕೆ 49 ರನ್ ಬಾರಿಸಿ ಸೋಲನುಭವಿಸಿತು. ಬಾರಿಕೆ ತಂಡವು 3 ವಿಕೆಟ್ಗೆ 61 ರನ್ ಹೊಡೆದರೆ ಬಿದ್ರುಪಣೆ 4 ವಿಕೆಟ್ ನಷ್ಟಕ್ಕೆ 63 ರನ್ ಬಾರಿಸಿ ಜಯದ ನಗೆ ಬೀರಿತು.
ನಂಗಾರು ತಂಡವು 5 ವಿಕೆಟ್ ನಷ್ಟಕ್ಕೆ 45 ರನ್ ಬಾರಿಸಿದರೆ ಕುದುಕುಳಿ ತಂಡವು 2 ವಿಕೆಟ್ಗೆ 51 ರನ್ ಬಾರಿಸಿ ಜಯ ಸಾಧಿಸಿತು. ಕಲ್ಲುಮುಟ್ಲು ತಂಡವು 77 ರನ್ ಬಾರಿಸಿದರೆ ಉತ್ತರವಾಗಿ ಆಡಿದ ಚೋಂಡಿರ ತಂಡವು 6 ವಿಕೆಟ್ ನಷ್ಟಕ್ಕೆ 78 ರನ್ ಬಾರಿಸಿ ಜಯಗಳಿಸಿತು. ಇದರಲ್ಲಿ ಚೋಂಡಿರ ಪವನ್ ವೈಯಕ್ತಿಕವಾಗಿ 63 ರನ್ ಗಳಿಸಿದರು.
ತಳೂರು ತಂಡವು 4 ವಿಕೆಟ್ ನಷ್ಟಕ್ಕೆ 50 ರನ್ ಬಾರಿಸಿದರೆ ಉತ್ತರವಾಗಿ ಆಡಿದ ಬೆಪ್ಪುರನ ತಂಡವು 2 ವಿಕೆಟ್ಗೆ 50 ರನ್ ಬಾರಿಸಿ ಸಮಬಲ ಸಾಧಿಸಿತು ಬಳಿಕ ಸೂಪರ್ ಓವರ್ನಲ್ಲಿ ತಳೂರು ತಂಡವು ಜಯ ಸಾಧಿಸಿತು.
ತೆಕ್ಕೆಡೆ ತಂಡವು 5 ವಿಕೆಟ್ ನಷ್ಟಕ್ಕೆ 44 ರನ್ ಗುರಿ ನೀಡಿದರೆ ಕುದುಕುಳಿ ತಂಡವು 7 ವಿಕೆಟ್ ಕಳೆದುಕೊಂಡು 32 ರನ್ ಬಾರಿಸಿ ಸೋಲನುಭವಿಸಿತು.
ಇನ್ನೊಂದು ಪಂದ್ಯದಲ್ಲಿ ತೆಕ್ಕೆಡೆ ತಂಡವು 4 ವಿಕೆಟ್ ಕಳೆದುಕೊಂಡು 50 ರನ್ ಗುರಿ ನೀಡಿದರೆ, ಉತ್ತರವಾಗಿ ಆಡಿದ ಚೋಂಡಿರ ತಂಡವು 3 ವಿಕೆಟ್ಗೆ 41 ರನ್ ಗಳಿಸಲಷ್ಟೇ ಶಕ್ತವಾಯಿತು.