ಮಡಿಕೇರಿ, ಏ. 8: ಇಲ್ಲಿನ ಭಾರತೀಯ ವಿದ್ಯಾಭವನ ಯೋಗ ಕೇಂದ್ರ ಹಾಗೂ ಬಾಲಭವನ ಯೋಗ ಕೇಂದ್ರದ ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ 108 ಸೂರ್ಯ ನಮಸ್ಕಾರ ಇಂದು ಮುಂಜಾನೆ ಕೋಟೆ ಆವರಣದಲ್ಲಿ ನಡೆಯಿತು. ಎರಡೂ ಕೇಂದ್ರಗಳ ಯೋಗ ಪಟುಗಳು, ಸಾರ್ವಜನಿಕರು ಭಾಗವಹಿಸಿದ್ದರು. ಯೋಗ ಗುರುಗಳಾದ ಮಹೇಶ್ ಕುಮಾರ್ ಹಾಗೂ ಸುಧಾಕರ್ ಅವರುಗಳ ಮಾರ್ಗದರ್ಶನದಲ್ಲಿ ಸೂರ್ಯನಿಗೆ ನಮಿಸಿದರು.