ಮೂರ್ನಾಡು, ಏ.8 : ವೀರಾಜಪೇಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹಪ್ರಾಧ್ಯಪಕರಾಗಿ ಸೇವೆ ಸಲ್ಲಿಸುತ್ತಿರುವ ಕೆ.ಡಿ. ನಿರ್ಮಲ ಅವರಿಗೆ ಪಿಎಚ್ಡಿ ಪದವಿ ಲಭಿಸಿದೆ.
ಮೈಸೂರು ವಿಶ್ವ ವಿದ್ಯಾನಿಲಯದ ಮುಖ್ಯಸ್ಥ ಡಾ. ಡಿ. ಆನಂದ್ ಅವರ ಮಾರ್ಗದರ್ಶನದಲ್ಲಿ ಕೆ.ಡಿ. ನಿರ್ಮಲ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ ಕ್ವಾಲಿಟಿ ಆಫ್ ವರ್ಕ್ ಲೈಪ್ ಇನ್ ಕಾಫಿ ಪ್ಲಾಂಟೇಶನ್ ಇನ್ ಕರ್ನಾಟಕ ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್ಡಿ ಡಾಕರೇಟ್ ಪದವಿ ನೀಡಿ ಗೌರವಿಸಲಾಗಿದೆ. ಇವರು ಮೂರ್ನಾಡು ದಂತ ವೈದ್ಯರಾದ ಡಾ. ಸುಭಾಷ್ ನಾಣಯ್ಯ ಅವರ ಪತ್ನಿ ಆಗಿದ್ದಾರೆ.